ಜನಪ್ರಿಯ ನಿರೂಪಕಿ ಅನುಶ್ರೀ ಅವರಿಗೆ ಸೆಡ್ಡು ಹೊಡೆದು ಅವರಗಿಂತ ಎರಡು ಪಟ್ಟು ಹೆಚ್ಚು ಸಂಭಾವನೆ ಪಡೆಯುತ್ತಿರುವ ಏಕೈಕ ನಿರೂಪಕಿ..! ಇವರೇ ನೋಡಿ

ಕನ್ನಡ ಕಿರುತಿರೆಯ ಜನಪ್ರಿಯ ನಿರೂಪಕಿ ಅನುಶ್ರೀ ಅವರಿಗೆ ಸೆಡ್ಡು ಹೊಡೆದು ಪೈಪೋಟಿ ನೀಡುತ್ತಿದ್ದಾರೆ ಮತ್ತೊಬ್ಬ ಖ್ಯಾತ ನಿರೂಪಕಿ..! ಹೌದು ಇತ್ತೀಚೆಗೆ ಕನ್ನಡ ಕಿರುತೆರೆಯಲ್ಲಿ ಧಾರಾವಾಹಿಗಳಿಗಿಂತ ಹೆಚ್ಚಾಗಿ ರಿಯಾಲಿಟಿ ಶೋ ಗಳೇ ಹೆಚ್ಚು ಸದ್ದು ಮಾಡುತ್ತಿವೆ. ಯಾವುದೇ ರಿಯಾಲಿಟಿ ಶೋಗಳ ಯಶಸ್ವಿಯಾಗಿ ಮೂಡಿಬರುವಲ್ಲಿ ಸ್ಪರ್ಧಿಗಳಿಗಷ್ಟೇ ಮುಖ್ಯ ಆಗಿರುವುದಿಲ್ಲ. ಅಷ್ಟೇ ಪ್ರಾಮುಖ್ಯವಾಗಿ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡುವ ನಿರೂಪಕಿ ಕೂಡ ಪ್ರಮುಖ ಪಾತ್ರವಹಿಸುತ್ತಾರೆ. ಯಾವುದೇ ರಿಯಾಲಿಟಿ ಶೋ ಗಳನ್ನ ಸುಂದರವಾಗಿ ತಮ್ಮ ಮಾತು ಭಾಷೆ ನಿರೂಪಣೆಯ ಮೂಲಕ ಆ ರಿಯಾಲಿಟಿ ಶೋವನ್ನು ಯಾವ ರೀತಿ ನಡೆಸಿಕೊಂಡು ಹೋಗುತ್ತಾರೆ ಎಂಬುದು ಯಶಸ್ಸು ಅಡಗಿರುತ್ತದೆ. ಅಂತೆಯೇ ಸದ್ಯಕ್ಕೆ ಬಹುತೇಕ ರಿಯಾಲಿಟಿ ಶೋ ಇರಲಿ ಅಥವಾ ಯಾವುದೇ ಸಿನಿಮಾ ಇವೆಂಟ್ ಗಳಲ್ಲಿ ಹೆಚ್ಚಾಗಿ ತಮ್ಮ ನಿರೂಪಣೆಯ ಮೂಲಕ ಹೆಚ್ಚಾಗಿ ಜನಪ್ರಿಯ ನಿರೂಪಕಿಯಾಗಿ ಮಿಂಚುತ್ತಿರುವುದು ಅಂದರೆ ಅದು ಅನುಶ್ರೀ.

ಮಂಗಳೂರು ಮೂಲದ ಈ ಚೆಲುವೆ ಪ್ರಸ್ತುತ ಬಹು ಬೇಡಿಕೆಯ ಜನಪ್ರಿಯ ನಿರೂಪಕಿಯಾಗಿದ್ದಾರೆ.ಎಲ್ಲಾ ಕ್ಷೇತ್ರದಲ್ಲಿ ಇರುವಂತೆ ನಿರೂಪಣಾ ಕ್ಷೇತ್ರದಲ್ಲಿಯೂ ಕೂಡ ಭಾರಿ ಪೈಪೋಟಿ ಹೊಂದಿದೆ. ಅದರಂತೆ ಇತ್ತೀಚೆಗೆ ಕಿರುತೆರೆ ರಿಯಾಲಿಟಿ ಶೋ ಗಳಿಗೆ ನಿರೂಪಕಿಯರಾಗಿ ಆರ್.ಜೆ ಶ್ರದ್ದಾ, ಹೇಮಲತಾ, ಅನುಪಮಾ ಭಟ್, ಲಕ್ಷ್ಮಿ ಗುರುರಾಜ್ ಸೇರಿದಂತೆ ಒಂದಷ್ಟು ಪ್ರತಿಭೆಗಳು ನಿರೂಪಣಾ ಕ್ಷೇತ್ರಕ್ಕೆ ಎಂಟ್ರಿಯಾಗಿದ್ದಾರೆ. ಅದರಂತೆ ಅಕ್ಕ ಸೀರಿಯಲ್ ಖ್ಯಾತಿಯ ನಟಿ ಅನುಪಮಾ ಗೌಡ ಕೂಡ ಕಿರುತೆರೆ ನಿರೂಪಕಿಯಾಗಿ ಗುರುತಿಸಿಕೊಳ್ಳುತ್ತಿದ್ದು ತಮ್ಮ ವಿಭಿನ್ನ ಶೈಲಿಯ ನಿರೂಪಣೆಯ ಮೂಲಕ ಜನಪ್ರಿಯ ನಿರೂಪಕಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ.ನಟಿ ಅನುಪಮಾ ಗೌಡ ಅವರು ಬಣ್ಣದ ಲೋಕಕ್ಕೆ ಹೆಜ್ಜೆ ಇಟ್ಟಿದ್ದು ಬಾಲ ನಟಿಯಾಗಿ. ಹೌದು ಚಾಲೇಂಜಿಂಗ್ ಸ್ಟಾರ್ ದರ್ಶನ್ ಅವರ ಲಂಕೇಶ್ ಪತ್ರಿಕೆಯಲ್ಲಿ ಬಾಲ ನಟಿಯಾಗಿ ಅನುಪಮಾ ಚಂದನವನಕ್ಕೆ ಪಾದಾರ್ಪಣೆ ಮಾಡುತ್ತಾರೆ.

ತದ ನಂತರ ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಹಳ್ಳಿ ದುನಿಯಾ ಎಂಬ ಶೋ ನಲ್ಲಿ ಸ್ಪರ್ಧಿಯಾಗಿ ಪಾಲ್ಗೊಳ್ಳುತ್ತಾರೆ. ಇದಾದ ಬಳಿಕ ನಟಿ ಅನುಪಮಾ ಗೌಡ ಅವರು ನಗಾರಿ ಎಂಬ ಚಿತ್ರದಲ್ಲಿ ಅಭಿನಯಿಸುತ್ತಾರೆ. ಆದರೆ ನಿರೀಕ್ಷೆಗೆ ತಕ್ಕಂತೆ ಯಶಸ್ಸು ಕಾಣದ ಅನುಪಮಾ ಅವರು ಬೆಳ್ಳಿತೆರೆಯಿಂದ ಅಂತರ ಕಾಯ್ದುಕೊಳ್ಳುತ್ತಾರೆ. ಮತ್ತೇ ಸೀರಿಯಲ್ ಹಾಗೂ ರಿಯಾಲಿಟಿ ಶೋಗಳಲ್ಲಿ ನಿರೂಪಕಿಯಾಗಿ ತೊಡಗಿಸಿಕೊಂಡು ಇಂದು ಬಹು ಬೇಡಿಕೆಯ ನಿರೂಪಕಿಯಾಗಿ ಹೆಸರು ಮಾಡಿದ್ದಾರೆ. ಸದ್ಯಕ್ಕೆ ಸೃಜನ್ ಲೋಕೇಶ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನಲ್ಲಿ ನಟಿ ಕಮ್ ನಿರೂಪಕಿ ಅನುಪಮಾ ಗೌಡ ಅವರು ನಿರೂಪಣೆ ಮಾಡುತ್ತಿದ್ದಾರೆ. ಈ ಶೋ ಗೆ ಅನುಪಮಾ ಅವರು ಬರೋಬ್ಬರಿ ಹತ್ತು ಲಕ್ಷ ಸಂಭಾವನೆ ಪಡೆದಿದ್ದಾರಂತೆ.