ಜೈನರು ಈರುಳ್ಳಿ ಮತ್ತು ಬೆಳ್ಳುಳ್ಳಿ ಯಾಕೆ ತಿನ್ನಲ್ಲ ಗೊತ್ತಾ? ಅದೆಷ್ಟೋ ಜನರಿಗೆ ಈಗಲೂ ಗೊತ್ತಿಲ್ಲ

ಭಾರತ ವೈವಿಧ್ಯಮವಾದ ದೇಶ.ಇಲ್ಲಿ ಹಲವು ಭಾಷೆ, ಧರ್ಮ, ಜಾತಿ, ಸಮುದಾಯ, ಪರಿಸರ, ಉಡುಗೆ,ತೊಡುಗೆ,ಕಲೆ, ಸಂಸ್ಕೃತಿ, ಆಹಾರ ಶೈಲಿ, ಹಬ್ಬ ಆಚರಣೆ ಸಂಪ್ರದಾಯಗಳು ಹೀಗೆ ಪ್ರತಿಯೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ವಿಭಿನ್ನ ಜನರನ್ನ ನೋಡ ಬಹುದಾಗಿರುತ್ತದೆ.ಆಹಾರ ಅಂದಾಕ್ಷಣ ಉತ್ತರ ಭಾರತದ ಜನರ ಶೈಲಿ ಒಂದು ಕ್ರಮವಾದರೆ,ದಕ್ಷಿಣ ಭಾರತ ಜನರ ಆಹಾರ ಕ್ರಮ ಇನ್ನೊಂದೆಡೆ ಆಗಿರುತ್ತದೆ. ಅಂತೆಯೇ ನಮ್ಮಲ್ಲಿ ಹಿಂದೂ, ಇಸ್ಲಾಂ, ಬೌದ್ದ ಜೈನ ಅಂತಹ ಧರ್ಮಗಳಿವೆ‌.ಈ ವಿವಿಧ ಧರ್ಮಗಳಲ್ಲಿ ಒಂದಕ್ಕೊಂದು ವಿಭಿನ್ನ ಬಗೆಯ ಉಡುಗೆ-ತೊಡುಗೆ,ಹಬ್ಬ ಆಚರಣೆ ಸಂಪ್ರದಾಯ,ಆಹಾರ ಶೈಲಿ ಕ್ರಮಗಳು ಬಗೆ ಬಗೆಯದ್ದಾಗಿರುತ್ತದೆ.ಇಲ್ಲಿ ಜಾತಿ ಜಾತಿಗಳಲ್ಲಿಯೂ ಕೂಡ ವಿಭಿನ್ನ ಅಭಿರುಚಿಗಳನ್ನು ನೋಡಬಹುದಾಗಿರುತ್ತದೆ. ಇನ್ನ ಈ ಜೈನಧರ್ಮದ ಜನರಲ್ಲಿ ಆಹಾರ ಕ್ರಮದಲ್ಲಿ ಕೊಂಚ ವಿಭಿನ್ನವಾಗಿ ನಿಲ್ಲುತ್ತಾರೆ.

ಇವರು ತಮ್ಮ ಆಹಾರದಲ್ಲಿ ಈರುಳ್ಳಿ,ಬೆಳ್ಳುಳ್ಳಿಯನ್ನ ಉಪಯೋಗ ಮಾಡುವುದಿಲ್ಲ.ನಾವು ಸೇವಿಸುವ ಆಹಾರ ನಮ್ಮ ಸ್ವಭಾವವನ್ನು ತಿಳಿಸುತ್ತದೆ.ಆಯುರ್ವೇದದಲ್ಲಿ ಆಹಾರವನ್ನು ಮೂರು ರೀತಿಯಲ್ಲಿ ತಿಳಿಸಲಾಗಿದೆ. ಸಾತ್ವಿಕ,ರಾಜಸಿಕ,ತಾಮಸಿಕ.ಈ ಈರುಳ್ಳಿ ಮತ್ತು ಬೆಳ್ಳುಳ್ಳಿ ಎರಡೂ ಪಧಾರ್ಥಗಳು ರಾಜಸಿಕ ಹಾಗೂ ತಾ ಮಸಾಕ ಆಹಾರ ಶೈಲಿಗೆ ಸೇರಿದ್ದದಾಗಿರುತ್ತದೆ.ಈರುಳ್ಳಿ,ಬೆಳ್ಳುಳ್ಳಿ ಪಧಾರ್ಥಗಳು ದೇಹದಲ್ಲಿ ಕಾಮ ಕ್ರೋಧ,ಮದ,ಮತ್ಸರ ದ್ವೇಷದ ಭಾವನೆಗಳನ್ನು ಹೆಚ್ಚು ಮೂಡಿಸುತ್ತದೆ. ಆದ್ದರಿಂದ ಈ ರಾಜಸಿಕ,ತಾಮಸಿಕ ಆಹಾರಗಳನ್ನು ಸೇವಿಸದೇ ಕೇವಲ ಸಾತ್ವಿಕ ಆಹಾರಗಳನ್ನು ಮಾತ್ರ ಸೇವನೆ ಮಾಡಬೇಕು ಎಂಬ ನಿಯಮಗಳನ್ನು ಜೈನರು ರೂಢಿಸಿಕೊಂಡಿದ್ದಾರೆ.

ಈ ಸಾತ್ವಿಕ ಆಹಾರಗಳು ಅಂದರೆ ತರಕಾರಿ,ಹಣ್ಣು,ಹಾಲು ಹಾಗೂ ಹಾಲಿನಿಂದ ತಯಾರಿಸಲಾದಂತಹ ಪಧಾರ್ಥಗಳು ಎಂಬುದಾಗಿದೆ. ಈ ಈರುಳ್ಳಿ ಬೆಳ್ಳುಳ್ಳಿಯು ಏಕಾಗ್ರತೆಗೆ ಭಂಗ ಉಂಟು ಮಾಡುವುದರಿಂದ ಜೈನರು ಪರಮಾತ್ಮನ ಧ್ಯಾನಕ್ಕೆ ಕುಳಿತಾಗ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಈ ರಾಜಸಿಕ,ತಾಮಸ ಪದಾರ್ಥಗಳನ್ನು ಬಳಸುವುದಿಲ್ಲ. ಈ ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಕಾಮೋಧ್ರೇಕವನ್ನು ಹೆಚ್ಚು ಮಾಡುವ ಅಂಶ ಇರುವುದರಿಂದ ಇದನ್ನ ಸಂಪೂರ್ಣವಾಗಿ ತಮ್ಮ ಆಹಾರದಲ್ಲಿ ನಿಷೇಧ ಮಾಡಿಕೊಂಡಿದ್ದಾರೆ.ಇನ್ನು ಮಳೆಗಾಲದಲ್ಲಿ ಈ ಬೆಳ್ಳುಳ್ಳಿಯನ್ನ ಬಳಸುವುದರಿಂದ ಜೀರ್ಣಕ್ರಿಯೆಗೆ ಸಮಸ್ಯೆವನ್ನುಂಟು ಮಾಡುತ್ತದೆ ಎಂದು ತಿಳಿಸಲಾಗಿದೆ.

Leave a Reply

%d bloggers like this: