ಜೈಲಿನಲ್ಲಿದ್ದಾಗ ಡಿಕೆ ಶಿವಕುಮಾರ್ ಗೆ ಸಹಾಯ ಮಾಡಿದ್ದು ಇದೇ ವ್ಯಕ್ತಿ! ಈಗ ಡಿಕೆ ಶಿವಕುಮಾರ್ ಈತನಿಗೆ ಕೊಟ್ಟ ಹಣವೆಷ್ಟು ಗೊತ್ತಾ

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಸಂಘಟನಾ ಚತುರ ಎಂದೇ ಹೆಸರು ಮಾಡಿರುವ, ಕನಕಪುರದ ಬಂಡೆ ಎಂದು ಕರೆಸಿಕೊಳ್ಳುವ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರು ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂದು ಅಕ್ರಮ ಆಸ್ತಿ ಗಳಿಕೆ ಆರೋಪ ಎದುರಾಗಿತ್ತು.ಅಂತೆಯೇ ಈ ಆರೋಪಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯದ ನಿರಂತರ ತನಿಖೆಯ ಪರಿಣಾಮ 2019 ರಲ್ಲಿ ಡಿ.ಕೆ.ಶಿವಕುಮಾರ್ ಜೈಲು ಸೇರಿದ್ದರು.ಡಿ.ಕೆ.ಶಿವಕುಮಾರ್ ಅವರನ್ನು ಸೆಲ್ ಗೆ ಹಾಕಿದಾಗ,ಅಲ್ಲಿ ಮೋಹಿತ್ ಸಿಂಗ್ ರಾಜ್ ಎಂಬ ಅಪರಾಧಿ ಇರುತ್ತಾರೆ.ಒಂದೇ ಸೆಲ್ ನಲ್ಲಿ ನಲವತ್ತೈದು ದಿನಗಳ ಕಾಲ ಡಿ.ಕೆ.ಶಿವಕುಮಾರ್ ಮತ್ತು ಮೋಹಿತ್ ಸಿಂಗ್ ರಾಜ್ ಜೊತೆಯಾಗಿದ್ದರು.

ಈ ದಿನಗಳಲ್ಲಿ ಡಿ.ಕೆ.ಶಿವಕುಮಾರ್ ಅವರು ಮೋಹಿತ್ ಸಿಂಗ್ ರಾಜ್ ಅವರ ಹಿನ್ನೆಲೆ ಜೈಲು ಶಿಕ್ಷೆಗೆ ಕಾರಣವನ್ನು ಕೇಳಿದ್ದರು.ತನ್ನ ಮತ್ತು ತನ್ನ ಪತ್ನಿ ನಡುವೆ ಸಣ್ಣ-ಪುಟ್ಟ ಜಗಳವಾಗಿ ಮೋಹಿತ್ ಸಿಂಗ್ ರಾಜ್ ಹೆಂಡತಿಯಿಂದ ದೂರವಾಗಿದ್ದನು,ಜೀವನಾಂಶವಾಗಿ ಹೆಂಡತಿಗೆ ನಾಲ್ಕು ಲಕ್ಷ ಹಣ ನೀಡಬೇಕಾಗಿತ್ತು.ಆದರೆ ಮೋಹಿತ್ ಸಿಂಗ್ ರಾಜ್ ಹಣ ನೀಡಲು ಸಾಧ್ಯವಾಗದ ಕಾರಣ ಜೈಲು ಸೇರಬೇಕಾಯಿತು ಎಂಬ ವಿಚಾರವನ್ನು ಡಿ.ಕೆ.ಶಿ. ಕೇಳಿ ಮರುಕು ಪಟ್ಟು ನಿನಗೆ ನಾನು ಕೈಲಾದಷ್ಟು ಸಹಾಯ ಮಾಡುತ್ತೇನೆ ಹೆದರಬೇಡ ಎಂದು ಸಂತೈಸಿದ್ದರಂತೆ.ಅದರಂತೆ ನಲವತ್ತೈದು ದಿನಗಳ ನಂತರ ಜೈಲಿನಿಂದ ಹೊರ ಬಂದ ಡಿ.ಕೆ.ಶಿವಕುಮಾರ್ ಮೋಹಿತ್ ಸಿಂಗ್ ರಾಜ್ ಅವರನ್ನು ಜೈಲಿನಿಂದ ಹೊರಗೆ ಬಿಡಿಸಿಕೊಂಡು ಬಂದು,ಐದು ಲಕ್ಷ ರೂ.ಗಳ ನೆರವು ನೀಡದ್ದಾರೆ.

ಅಷ್ಟೇ ಅಲ್ಲದೆ ಮೋಹಿತ್ ಸಿಂಗ್ ಅವರಿಗೆ ದೆಹಲಿಯಲ್ಲಿರುವ ತಮ್ಮ ಮನೆಯಲ್ಲಿ ಕೆಲಸ ಕೂಡ ನೀಡಿದ್ದಾರೆ.ಒಟ್ಟಾರೆಯಾಗಿ ಸಂಕಷ್ಟದ ದಿನಗಳಲ್ಲಿ ಜೊತೆಯಾಗಿದ್ದ ವ್ಯಕ್ತಿಯೊಬ್ಬನ ಅಸಹಾಯಕ ಪರಿಸ್ಥಿತಿ ತಿಳಿದು ಕೊಟ್ಟ ಮಾತಿನಂತೆ ನೆರವು ನೀಡಿದ್ದಾರೆ ಡಿ.ಕೆ.ಶಿವಕುಮಾರ್.ಸದ್ಯದ ಮಟ್ಟಿಗೆ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದು,ರಾಜ್ಯದ ಪ್ರಭಾವಿ ರಾಜಕಾರಣೆ ಆಗಿದ್ದಾರೆ.ಅಷ್ಟೇ ಅಲ್ಲದೆ ರಾಜ್ಯದ ಮುಂದಿನ ಮುಖ್ಯಮಂತ್ರಿ ಎಂದೇ ಗುರುತಿಸಿಕೊಳ್ಳುತ್ತಿದ್ದಾರೆ.ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಮತ್ತಷ್ಟು ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: