ಜಗತ್ತಿನ ಮೊದಲ ಬಂಗಾರದ ಹೋಟೆಲ್, ಒಂದು ದಿನಕ್ಕೆ ರೂಮ್ ಬಾಡಿಗೆ ಎಷ್ಟು ಗೊತ್ತಾ

ಸಾಮಾನ್ಯವಾಗಿ ಮನುಷ್ಯನ ಸದ್ಗುಣ,ಸದ್ವಿಚಾರ,ಸನ್ನಡತೆ,ವ್ಯಕ್ತಿತ್ವಗಳನ್ನು ಗಮನಿಸಿ ಆ ವ್ಯಕ್ತಿಯನ್ನು ದೇವರಂತಹ, ಬಂಗಾರದಂತಹ ಮನುಷ್ಯ ಎಂದು ಹೊಗಳುವುದುಂಟು.ಬಂಗಾರ ಅಂದಾಕ್ಷಣ ನಾವು ಇಂದು ಬಾಯ್ಬಿಟ್ಟು ನೋಡವಂತಾಗಿದೆ. ಅಷ್ಟರ ಮಟ್ಟಿಗೆ ಅದರ ಬೆಲೆ ಗಗನ ಕ್ಕೇರಿದೆ.ಅದರ ವಿಚಾರ ಬೇರೆ.ಆದರೆ ಇಲ್ಲೊಂದು ಅಚ್ಚರಿಯ ವಿಚಾರ ಸಂಗತಿ ಅಂದರೆ ಅದು ಚಿನ್ನದ ಹೋಟೆಲ್ ಇರುವುದು.ಇಲ್ಲಿ ಸಂಪೂರ್ಣವಾಗಿ ಚಿನ್ನವನ್ನ ಬಳಸಿಕೊಂಡು ನಿರ್ಮಾಣ ಆಗಿರುವ ಈ ಹೋಟೆಲ್ ಜಗತ್ತಿನಾದ್ಯಂತ ಭಾರಿ ಪ್ರಸಿದ್ದತೆ ಪಡೆದುಕೊಂಡಿದೆ.ಈ ಹೋಟೆಲ್ ವೀಕ್ಷಣೆ ಮಾಡಲೆಂದೇ ಹೊರ ದೇಶಗಳಿಂದ ದಿನಕ್ಕೆ ಸಾವಿರಾರು ಪ್ರವಾಸಿಗರು ಬರುತ್ತಾರಂತೆ.ಈ ಚಿನ್ನದ ಹೋಟೆಲ್ ನಲ್ಲಿ ತಂಗಲು ಕೇವಲ ಒಂದು ದಿನಕ್ಕೆ ಲಕ್ಷಾಂತರ ರೂ.ಗಳನ್ನು ಬಾಡಿಗೆಯಾಗಿ ನೀಡಬೇಕಾಗುತ್ತದೆ.

ಇನ್ನು ಈ ಗೋಲ್ಡನ್ ಹೋಟೆಲ್ ಇರುವುದು ಜಗತ್ತಿನ ಅತ್ಯಂತ ಪ್ರಸಿದ್ದ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ವಿಯೆಟ್ನಾಂ ನಗರದಲ್ಲಿ.ನದಿಯ ದಡದಲ್ಲಿ ಇರುವ ಈ ಗೋಲ್ಡ್ ಕೋಟೆಡ್ ಹೋಟೆಲ್ ನಲ್ಲಿರುವ ತನ್ನ ಬಾಹ್ಯ ಮತ್ತು ಒಳ ವಿನ್ಯಾಸವನ್ನು ಚಿನ್ನದಿಂದ ಮಾಡಲಾಗಿದೆಯಂತೆ.ಈ ಚಿನ್ನದ ಹೋಟೆಲ್ ವಿನ್ಯಾಸವನ್ನು ನೋಡಿ ಪ್ರವಾಸಿಗರು ವಿಸ್ಮಯದಂತೆ ಕಾಣುತ್ತಾರಂತೆ. ವಿಯೆಟ್ನಾ ನಗರದಲ್ಲಿರುವ ಈ ಗೋಲ್ಡನ್ ಲೇಕ್ ಹೋಟೆಲ್ ಪರಿಶುದ್ದ ಚಿನ್ನ 21 ಕ್ಯಾರೆಟ್ ನಿಂದಲೇ ನಿರ್ಮಾಣ ಆಗಿದ್ದು,ಇದರ ಕಲ್ಲಿನ ಇಟ್ಟಿಗೆಯ ಮೇಲೆ ಚಿನ್ನದ ಲೇಪನ ಹಾಕಿಸಿದ್ದಾರೆ.ಈ ಹೋಟೆಲ್ ನಲ್ಲಿ ಬಾತ್ ರೂಂ ಟಬ್,ಕಿಟಕಿ,ಟೇಬಲ್ ಸೇರಿದಂತೆ ಒಳ ವಿನ್ಯಾಸದ ಬಹುತೇಕ ಇಂಟೇರಿಯರ್ ವಸ್ತುಗಳು ಚಿನ್ನದಿಂದ ಕೂಡಿವೆಯಂತೆ.

ಈ ಗೋಲ್ಡನ್ ಲೇಕ್ ಹೋಟೆಲ್ ನಲ್ಲಿ ಒಂದು ದಿನ ಉಳಯಬೇಕಾದರೆ ಬರೋಬ್ಬರಿ ಹದಿನೈದು ಲಕ್ಷ ರೂ ಗಳ ಖರ್ಚಾಗುತ್ತದೆಯಂತೆ. ವಿಯೆಟ್ನಾಂ ನಗರದ ಈ ಗೋಲ್ಡನ್ ಲೇಕ್ ಹೋಟೆಲ್ ಜಗತ್ತಿನ ಮೊಟ್ಟ ಮೊದಲ ಬಂಗಾರದ ಹೋಟೇಲ್ ಎಂಬ ಖ್ಯಾತಿ ಪಡೆದುಕೊಂಡಿದೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದರೆ ಪ್ರತಿಯೊಬ್ಬರೂ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಈ ನಮ್ಮ ಲೇಖನದ ಬಗ್ಗೆ ನಿಮ್ಮ ಲೇಖನದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: