ಜಗತ್ತಿನಲ್ಲೇ ಇದೇ ಮೊದಲ ಬಾರಿಗೆ ನಟನೊಬ್ಬನಿಗೆ ದೇವಾಲಯ ನಿರ್ಮಾಣ ಮಾಡಿದ್ದಾರೆ. ನಿರ್ಮಾಣಕ್ಕೆ ಆದ ಖರ್ಚು ಮತ್ತು ಸ್ಥಳ ಎಲ್ಲಿ ಗೊತ್ತಾ?

ಜಗತ್ತಿನಲ್ಲೇ ಇದೇ ಮೊದಲ ಬಾರಿಗೆ ನಟನೊಬ್ಬನಿಗೆ ದೇವಾಲಯ ನಿರ್ಮಾಣ ಮಾಡಿದ್ದಾರೆ. ಹೌದು ಕನ್ನಡ ಚಿತ್ರರಂಗ ಮಾತ್ರ ಅಲ್ಲದೆ ತೆಲುಗು,ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ದಿಗ್ಗಜ ನಟರೊಂದಿಗೆ ನಟಿಸಿ ಸೈ ಎನಿಸಿಕೊಂಡಿರುವ ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಅವರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಅದರಲ್ಲೂ ಅಭಿನಯ ಚಕ್ರವರ್ತಿ ಕನ್ನಡದ ಬಾದ್ ಶಾ ಕಿಚ್ಚ ಸುದೀಪ್ ಅವರಿಗೆ ಕರ್ನಾಟಕದಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಕೇವಲ ಅವರ ನಟನೆಗೆ ಮಾತ್ರ ಅಭಿಮಾನಿಗಳಾಗಿರೋದು ಮಾತ್ರ ಅಲ್ಲ. ಅವರ ಸಮಾಜಮುಖಿ ಕೆಲಸ ಕಾರ್ಯಗಳು, ಮಾನವೀಯ ಕಾರ್ಯಗಳು ತನ್ನ ಅಭಿಮಾನಿಗಳಿಗೆ ಅವರು ತೋರುವ ಪ್ರೀತಿ ವಿಶ್ವಾಸ ಎಷ್ಟೋ ಜನರಿಗೆ ಅವರು ಜೀವನಕ್ಕೆ ಆಧಾರ ಕೂಡ ಮಾಡಿಕೊಟ್ಟಿದ್ದಾರೆ. ಹಾಗಾಗಿ ಅವರು ಅಂದರೆ ಅವರ ಅಭಿಮಾನಿಗಳಿಗೆ ಅಪಾರ ಅಭಿಮಾನ ಪ್ರೀತಿ ಗೌರವ.

ಸಾಮಾನ್ಯವಾಗಿ ದೇವರಿಗೆ ಗುಡಿ ಕಟ್ಟೋದನ್ನ ನೋಡಿರುತ್ತೇವೆ, ಕೇಳಿರುತ್ತೇವೆ. ಆದರೆ ನೆಚ್ಚಿನ ನಟನೊಬ್ಬನಿಗೆ ದೇವಸ್ಥಾನವನ್ನೇ ನಿರ್ಮಾಣ ಮಾಡಿರುವುದು ವಿಶ್ವದ ಚಿತ್ರರಂಗದ ಇತಿಹಾಸದಲ್ಲಿ ಇದೇ ಮೊದಲು. ಹೌದು ರಾಯಚೂರು ಜಿಲ್ಲೆಯ ಕುರುಕುಂದ ಎಂಬ ಗ್ರಾಮದಲ್ಲಿ ಕಿಚ್ಚ ಸುದೀಪ್ ಅವರಿಗೆ ಬಹು ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಈ ಊರಿನ ಗ್ರಾಮಸ್ಥರಿಗೆ ಸುದೀಪ್ ಅವರೆಂದರೆ ಪಂಚ ಪ್ರಾಣ. ಅವರನ್ನು ದೇವರ ರೂಪದಲ್ಲಿ ಕಾಣುತ್ತಾರೆ. ಅಂತೆಯೇ ಇದೀಗ ತಮ್ಮ ಊರಿನಲ್ಲಿ ಬರೋಬ್ಬರಿ 15 ಲಕ್ಷ ರೂ.ಗಳ ವೆಚ್ಚದಲ್ಲಿ ಸುದೀಪ್ ಅವರ ಪ್ರತಿಮೆ ನಿರ್ಮಾಣ ಮಾಡಿ ಗುಡಿ ಕಟ್ಟಿಸುತ್ತಿದ್ದಾರೆ. ಈಗಾಗಲೇ ಶೇಕಡಾ 70 ರಷ್ಟು ಸುದೀಪ್ ಅವರ ಈ ದೇವಾಲಯ ನಿರ್ಮಾಣಗೊಂಡಿದ್ದು ಇನ್ನುಳಿದ ಭಾಗವನ್ನು ಇನ್ನೆರಡು ತಿಂಗಳಲ್ಲಿ ಪೂರ್ಣಗೊಳಿಸುತ್ತಾರಂತೆ.

ಬಳಿಕ ಈ ದೇವಾಲಯದ ಲೋಕಾರ್ಪಣೆಗೆ ಸ್ವತಃ ಕಿಚ್ಚ ಸುದೀಪ್ ಅವರೇ ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ.ಇನ್ನೂ ಈ ಸುದೀಪ್ ಪ್ರತಿಮೆ ಇಟ್ಟು ನಿರ್ಮಾಣ ಮಾಡಿರುವ ದೇವಾಲಯದಲ್ಲಿ ಮಹರ್ಷಿ ವಾಲ್ಮಿಕಿ ಅವರ ಪ್ರತಿಮೆಯನ್ನ ಕೂಡ ನಿರ್ಮಿಸಿದ್ದಾರಂತೆ. ಜೊತೆಗೆ ದಿ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಡಿಜಿಟಲ್ ಎಲ್ ಇ ಡಿ ಫೋಟೋವನ್ನು ಕೂಡ ಇರಿಸಲಿದ್ದಾರಂತೆ.ಒಟ್ಟಾರೆಯಾಗಿ ಕಿಚ್ಚ ಸುದೀಪ್ ಅಭಿಮಾನಿಗಳು ಸುದೀಪ್ ಅವರಿಗೆ ಗುಡಿಯನ್ನೇ ನಿರ್ಮಾಣ ಮಾಡಿ ಇತಿಹಾಸ ಸೃಷ್ಟಿಸಿದ್ದಾರೆ.

Leave a Reply

%d bloggers like this: