ಜಗತ್ತಿನ ನಂಬರ್ ಒನ್ ಕಾರ್ ರೇಸರ್ ಜೊತೆ ಕಾಣಿಸಿಕೊಂಡ ರಾಕಿಂಗ್ ಸ್ಟಾರ್ ಯಶ್ ಅವರು, ಏನ್ ವಿಷಯ

ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಫೈನಲ್ ಆಗೋಯ್ತಾ! ಈ ಒಂದು ಪ್ರಶ್ನೆ ಹುಟ್ಟೋದಕ್ಕೆ ಯಶ್ ಅವರ ಇತ್ತೀಚೆಗೆನ ನಡೆಗಳು ಬಹಳ ಪುಷ್ಟಿ ನೀಡುತ್ತಿವೆ. ಕೆಜಿಎಫ್2 ಸಿನಿಮಾದ ಭರ್ಜರಿ ಸಕ್ಸಸ್ ನಂತರ ಯಶ್ ಅವರ ಲೆವೆಲ್ ಭಾರಿ ಬದಲಾಗಿದೆ. ರಾಷ್ಟ್ರ ಅಲ್ಲ ಅಂತರಾಷ್ಟ್ರೀಯ ಮಟ್ಟದ ಸಿನಿಮಾ ತಂತ್ರಜ್ಞರು ಅವರ ಸುತ್ತ ಮುತ್ತ ಕಾಣಿಸಿಕೊಳ್ತಿದ್ದಾರೆ. ಕೆಜಿಎಫ್2 ನಂತರ ಯಶ್ ಅವರಿಗೆ ಮಫ್ತಿ ಸಿನಿಮಾ ನಿರ್ದೇಶಕ ನರ್ಥನ್ ಆಕ್ಷನ್ ಕಟ್ ಹೇಳಲಿದ್ದಾರೆ ಅಂತ ಸುದ್ದಿ ಇತ್ತು. ಅದಾದ ನಂತರ ಕೆಜಿಎಫ್3 ಬರುತ್ತೆ ಅದಕ್ಕಾಗಿಯೇ ಯಶ್ ಗಡ್ಡ ಬಿಟ್ಟಿದ್ದಾರೆ‌. ಪ್ರಶಾಂತ್ ನೀಲ್ ಅವರೇ ಯಶ್ ಅವ್ರಿಗೆ ಆಕ್ಷನ್ ಕಟ್ ಹೇಳ್ತಾರೆ ಅಂತಾಯ್ತು. ಅದರ ಹಿಂದೆಯಿಂದಾನೂ ಕೂಡ ತಮಿಳಿನ ಶಂಕರ್ ನಿರ್ದೇಶನ ಮಾಡ್ತಾರೆ ಅನ್ನೋ ಸುದ್ದಿ ಸಹ ಇತ್ತು. ಆದರೆ ಯಶ್ ಅವರು ತಮ್ಮ ಮುಂದಿನ ಸಿನಿಮಾ ಯಾವ್ದು ಅನ್ನೋದರ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಯಶ್ ಸದ್ಯಕ್ಕೆ ಅಮೆರಿಕಾ ಪ್ರವಾಸದಲ್ಲಿದ್ದಾರೆ.

ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಾಲಿವುಡ್ ಸ್ಟಾರ್ ಸಿನಿಮಾ ತಂತ್ರಜ್ಞರ ಜೊತೆ ಫೋಟೋ ತೆಗೆದುಕೊಂಡು ಪೋಸ್ಟ್ ಮಾಡುತ್ತಿದ್ದಾರೆ. ಅದರಂತೆ ಯಶ್ ಇತ್ತೀಚೆಗೆ ಹಾಲಿವುಡ್ ಖ್ಯಾತ ನಿರ್ದೇಶಕ ಜೆಜೆ ಪೆರ್ರಿ ಅವರೊಟ್ಟಿಗೆ ಒಂದಷ್ಟು ಕಾಲ ಕಳೆದು ಅವರೊಟ್ಟಿಗೆ ಮಾತುಕತೆ ನಡೆಸಿದ್ದಾರೆ. ಅದಲ್ಲದೆ ಗನ್ ಹಿಡಿದು ಶೂಟ್ ಮಾಡುತ್ತಿದ್ರು. ಈ ಪೋಟೋವನ್ನ ಶೇರ್ ಮಾಡಿದ್ರು. ಆಗ ಸಖತ್ ವೈರಲ್ ಆಗಿತ್ತು. ಆಗ ಯಶ್ ತಮ್ಮ ಮುಂದಿನ ಸಿನಿಮಾವನ್ನ ಜೆಜಿಪೆರ್ರಿ ಅವರೊಟ್ಟಿಗೆ ಒಂದು ಆಕ್ಷನ್ ಸಿನಿಮಾ ಮಾಡಲಿದ್ದಾರೆ ಅನ್ನೋ ಮಾತು ಅಭಿಪ್ರಾಯ ಕೂಡ ಕೇಳಿ ಬಂದಿತ್ತು. ಜೆಜೆ ಪೆರ್ರಿ ಹಾಲಿವುಡ್ ನ ಫೇಮಸ್ ಸ್ಟಂಟ್ ಮಾಸ್ಟರ್. ಐರನ್ ಮ್ಯಾನ್, ಅವತಾರ್, ಅರ್ಗೋ, ಡಿಜಾಂಗೋ ಅನ್ ಚೈನ್ಡ್ ಅಂತಹ ಸೂಪರ್ ಡೂಪರ್ ಹಿಟ್ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಅದರ ಜೊತೆಗೆ ಡೇ ಶಿಫ್ಟ್ ಅನ್ನೋ ಒಂದು ಸಿನಿಮಾ ನಿರ್ದೇಶನ ಮಾಡಿದ್ದಾರೆ.

ಹಾಗಾಗಿ ಯಶ್ ಹಾಲಿವುಡ್ ನಲ್ಲಿ ಆಕ್ಷನ್ ಸಿನಿಮಾವೊಂದನ್ನ ಮಾಡಲು ಎಲ್ಲಾ ರೀತಿಯ ತಯಾರಿ ನಡೆಸುತ್ತಿದ್ದಾರ ಮತ್ತು ಅದಕ್ಕಾಗಿಯೇ ಹಾಲಿವುಡ್ನ ಸ್ಟಾರ್ ಟೆಕ್ನಿಷಿಯನ್ಸ್ ಜೊತೆ ಸಮಯ ಕಳೆಯುತ್ತಿದ್ದಾರ ಅನ್ನೋ ಪ್ರಶ್ನೆ ಮೂಡಿದೆ. ಅದರ ಜೊತೆಗೆ ಈಗ ಯಶ್ ಮತ್ತೊಂದು ಸಖತ್ ಕ್ಯೂರಿಯಾಸಿಟಿ ಹುಟ್ಟಿಸೋ ಫೋಟೋ ಶೇರ್ ಮಾಡಿದ್ದಾರೆ. ಈ ಬಾರಿ ಯಶ್ ಫೋಟೋ ಶೇರ್ ಮಾಡಿರೋದು ಹಾಲಿವುಡ್ ಕಾರ್ ರೇಸಿಂಗ್ ದಂತಕಥೆ ಎಂದೇ ಕರೆಸಿಕೊಳ್ಳೋ ‘ಲೀವಿಸ್ ಹ್ಯಾಮಿಲ್ಟನ್’ ಜೊತೆ. ಈ ಲೀವಿಸ್ ಹ್ಯಾಮಿಲ್ಟನ್ ಫಾರ್ಮುಲಾ ಕಾರ್ ರೇಸರ್. ಈ ಮರ್ಸಿಡಿಸ್ ಬೆಂಝ಼್ ಕಂಪನಿಯ ಪರವಾಗಿ ಸ್ಪರ್ಧಿಸೋ ಕಾರ್ ರೇಸರ್. ರಾಕಿಂಗ್ ಸ್ಟಾರ್ ಯಶ್ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಬೆನ್ನಲ್ಲೇ ಹಾಲಿವುಡ್ ಸಿನಿ‌ಮಾ ಮಾಡಲು ಮುಂದಾಗಿದ್ದಾರೆ ಅನ್ನೋ ಮಾತುಗಳು ಕೇಳಿ ಬರಲು ಈ ಹಾಲಿವುಡ್ ಖ್ಯಾತ ಕಾರ್ ರೇಸರ್ ಭೇಟಿಯೂ ಕೂಡ ಒಂದು ಪ್ರಮುಖ ಕಾರಣವಾಗಿದೆ. ಒಟ್ಟಾರೆಯಾಗಿ ಯಶ್ ಮುಂದಿನ ಸಿನಿಮಾ ಯಾವ್ದು ಅನ್ನೋ ಬಗ್ಗೆ ಸ್ವತಃ ಯಶ್ ಅವರೇ ಹೇಳೋವರೆಗೆ ಬರೀ ಊಹಾಪೋಹ ಸುದ್ದಿಗಳನ್ನೇ ಕೇಳಬೇಕಾಗಿದೆ.

Leave a Reply

%d bloggers like this: