ಜಾಹಿರಾತು ಚಿತ್ರೀಕರಣದಲ್ಲಿ ಬಾಲಿವುಡ್ ಖ್ಯಾತ ನಟನ ಜೊತೆ ಕಾಣಿಸಿಕೊಂಡ ರಶ್ಮಿಕಾ ಅವರು

ವಿಜಯ್ ದೇವರಕೊಂಡ, ಸಿದ್ದಾರ್ಥ್ ಮಲ್ಹೋತ್ರಾ, ವಿಕ್ಕಿ ಕೌಶಲ್, ಆಯ್ತೂ ಇದೀಗ ಬಾಲಿವುಡ್ ಮತ್ತೊಬ್ಬ ಸ್ಟಾರ್ ನಟನ ಜೊತೆ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ. ಸದ್ಯದ ಮಟ್ಟಿಗೆ ಭಾರತೀಯ ಚಿತ್ರರಂಗದಲ್ಲಿ ಸಖತ್ ಶೈನ್ ಆಗುತ್ತಿರೋ ನಟಿ ಅಂದರೆ ಅದು ಒನ್ ಅಂಡ್ ಓನ್ಲೀ ರಶ್ಮಿಕಾ ಮಂದಣ್ಣ. ಇತ್ತೀಚೆಗೆ ಬಿಡುಗಡೆಗೊಂಡು ಸಿನಿ ಪ್ರೇಕ್ಷಕರ ಮನ ಗೆದ್ದ ದುಲ್ಖರ್ ಸಲ್ಮಾನ್, ರಶ್ಮಿಕಾ ಮಂದಣ್ಣ, ಮೃಣಾಲ್ ಠಾಕೂರ್ ಅಭಿನಯದ ಸೀತಾ ರಾಮಂ ಸಿನಿಮಾದಲ್ಲಿ ರಶ್ಮಿಕಾರ ನಟನೆಯ ಬಗ್ಗೆ ಎಲ್ಲೆಡೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಸಿನಿಮಾದಲ್ಲಿ ಮುಸ್ಲಿಂ ಹುಡುಗಿಯ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಅಮೋಘವಾಗಿ ನಟಿಸಿದ್ದರು. ಸೀತಾ ರಾಮಂ ಸಿನಿಮಾದ ಯಶಸ್ಸಿನಲ್ಲಿ ತೇಲುತ್ತಿರುವ ರಶ್ಮಿಕಾ ಮಂದಣ್ಣ ಅವರಿಗೆ ಈಗಾಗಲೇ ಸಾಕಷ್ಟು ಸಿನಿಮಾಗಳು ಕೈಯಲ್ಲಿವೆ.

ರಶ್ಮಿಕಾ ಮಂದಣ್ಣ ತೆಲುಗು, ತಮಿಳು ಸೇರಿದಂತೆ ಎರಡೂ ಹಿಂದಿ ಸಿನಿಮಾಗಳಲ್ಲಿ ನಟಿಸಿ, ಮತ್ತೊಂದು ಹಿಂದಿ ಹೊಸ ಚಿತ್ರಕ್ಕೆ ಆಯ್ಕೆ ಆಗಿದ್ದಾರೆ. ಹೀಗೆ ಭಾರತೀಯ ಚಿತ್ರರಂಗದ ನಿರ್ದೇಶಕ, ನಿರ್ಮಾಪಕರ ನೆಚ್ಚಿನ ನಟಿಯಾಗಿರೋ ರಶ್ಮಿಕಾ ಮಂದಣ್ಣ ಅನೇಕ ಪ್ರಾಡಕ್ಟ್ ಕಂಪನಿಗಳಿಗೂ ಕೂಡ ಅಚ್ಚುಮೆಚ್ಚಿನ ನಟಿಯಾಗಿದ್ದಾರೆ. ಸಿನಿಮಾ ಮಾತ್ರ ಅಲ್ಲದೆ ಹಲವು ಕಂಪನಿಗಳ ಪ್ರಾಡಕ್ಟ್ ಜಾಹೀರಾತುಗಳಿಗೂ ಕೂಡ ರಶ್ಮಿಕಾ ಮಂದಣ್ಣ ಭಾರಿ ಡಿಮ್ಯಾಂಡ್ ಹೊಂದಿದ್ದಾರೆ. ಇತ್ತೀಚೆಗೆ ಬಾಲಿವುಡ್ ನಟ ವಿಕ್ಕಿ ಕೌಶಲ್ ಅವರೊಟ್ಟಿಗೆ ಪುರುಷರ ಒಳ ಉಡುಪು ಜಾಹೀರಾತಿನಲ್ಲಿ ಕಾಣಿಸಿಕೊಂಡು ಸುದ್ದಿ ಆಗಿದ್ರು. ಇದೀಗ ಬಾಲಿವುಡ್ ಸ್ಟಾರ್ ನಟ ಕಾರ್ತಿಕ್ ಆರ್ಯನ್ ಅವರೊಟ್ಟಿಗೆ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಹಾಗಂತ ಇವರಿಬ್ಬರು ಒಟ್ಟಿಗೆ ಯಾವುದೇ ಸಿನಿಮಾದಲ್ಲಿ ನಟಿಸುತ್ತಿಲ್ಲ.

ಜೊತೆಗೆ ರಶ್ಮಿಕಾ ಮಂದಣ್ಣ ಮತ್ತು ಕಾರ್ತಿಕ್ ಆರ್ಯನ್ ನಡುವೆ ಡೇಟಿಂಗ್ ಕೂಡ ನಡೆಯುತ್ತಿಲ್ಲ. ಇವರಿಬ್ರು ಒಟ್ಟಿಗೆ ಕಾಣಿಸಿಕೊಳ್ತಿರೋದಕ್ಕೆ ಬೇರೆಯದ್ದೇ ಕಾರಣವಿದೆ. ಬಾಲಿವುಡ್ ಸೂಪರ್ ಸ್ಟಾರ್ ನಟರ ಸಿನಿಮಾಗಳೇ ಬಾಕ್ಸ್ ಆಫೀಸ್ ನಲ್ಲಿ ಸೋತು ಸುಣ್ಣವಾಗುತ್ತಿರೋವಾಗ ಕಾರ್ತಿಕ್ ಆರ್ಯನ್ ಅವರ ನಟನೆಯ ಬೂಲ್ ಬೂಲಯ್ಯ2 ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತ್ತು. ಕಾರ್ತಿಕ್ ಆರ್ಯನ್ ಅವರಿಗೆ ಸದ್ಯಕ್ಕೆ ಬಾಲಿವುಡ್ ನಲ್ಲಿ ಭಾರಿ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಹಾಗಾಗಿ ಜಾಹೀರಾತು ಕಂಪನಿಗಳು ಕೂಡ ಕಾರ್ತಿಕ್ ಆರ್ಯನ್ ಅವರನ್ನ ತಮ್ಮ ಕಂಪನಿಯ ಪ್ರಾಡಕ್ಟ್ ಗಳ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾವೆ. ಅದರಂತೆ ಇತ್ತೀಚೆಗೆ ಪ್ರಾಡಕ್ಟ್ ಪ್ರಚಾರಕ್ಕಾಗಿ ನಟಿ ರಶ್ಮಿಕಾ ಮಂದಣ್ಣ ಮತ್ತು ಕಾರ್ತಿಕ್ ಆರ್ಯನ್ ಒಟ್ಟಿಗೆ ಜಾಹೀರಾತು ಶೂಟಿಂಗ್ ನಲ್ಲಿ ಕಾಣಿಸಿಕೊಂಡಿದ್ದಾರೆ.