ಇವರೇ ಬಿಗ್ ಬಾಸ್ ಓಟಿಟಿ ಶೋನಲ್ಲಿ ಭಾಗವಹಿಸುತ್ತಿರುವ ಆ ಹದಿನಾರು ಮಂದಿ ಸ್ಪರ್ಧಿಗಳು

ಕನ್ನಡ ಕಿರುತೆರೆಯಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿರುವ ಬಿಗ್ ಬಾಸ್ ಸೀಸನ್9 ಇನ್ನೂ ಕೆಲವೇ ದಿನಗಳಲ್ಲಿ ಬರಲಿದೆ. ಅದಕ್ಕೂ ಮುನ್ನ ಮಿನಿ ಬಿಗ್ ಬಾಸ್ ಆರಂಭಗೊಂಡಿದೆ. ಸಾಮಾನ್ಯವಾಗಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವ್ಯಕ್ತಿಗಳನ್ನ, ಅದರಲ್ಲಿಯೂ ಸಿನಿಮಾ, ಕಿರುತೆರೆ, ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿರುವ ಮತ್ತು ಪ್ರತಿಭಾವಂತ ವ್ಯಕ್ತಿಗಳನ್ನ ಕರೆತರಲಾಗುತ್ತಿತ್ತು. ಆದರೆ ಈ ಬಿಗ್ ಬಾಸ್ ಓಟಿಟಿ ಯಲ್ಲಿ ಕಿರುತೆರೆ ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ಜನಪ್ರಿಯ ಆಗಿರೋ ವ್ಯಕ್ತಿಗಳು ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಹೌದು ಈಗಾಗಲೇ ಬಿಗ್ ಬಾಸ್ ಓಟಿಟಿಗೆ ಚಾಲನೆ ಸಿಕ್ಕಿದ್ದು ನಿರೂಪಣೆಯ ಜವಬ್ದಾರಿಯನ್ನ ಹೊತ್ತಿರುವ ಕಿಚ್ಚ ಸುದೀಪ್ ಈ ಬಿಗ್ ಬಾಸ್ ಓಟಿಟಿಯಲ್ಲಿ ಭಾಗವಹಿಸುವ ಎಲ್ಲಾ ಸ್ಪರ್ಧಿಗಳನ್ನ ವೆಲ್ ಕಮ್ ಮಾಡಿಕೊಂಡಿದ್ದಾರೆ.

ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದೆ ಜ್ಯೋತಿಷಿ ಆರ್ಯವರ್ಧನ್. ಖಾಸಗಿ ವಾಹಿನಿಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಬಗ್ಗೆ ಭವಿಷ್ಯ ನುಡಿಯುತ್ತ ತಾವು ಹೇಳುತ್ತಿದ್ದ ಒಂದಷ್ಟು ಭವಿಷ್ಯಗಳು ನಿಜವಾಗಿ ತಮ್ಮ ವಿಭಿನ್ನ ಮಾತಿನ ಶೈಲಿಯ ಮೂಲಕ ಮನರಂಜನೆ ನೀಡುತ್ತಿದ್ದ ಇವರು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದರು. ಕೆಲವರಿಗೆ ಆರ್ಯವರ್ಧನ್ ಬಿಗ್ ಬಾಸ್ ಶೋ ಗೆ ಬರುತ್ತಾರೆ ಎಂಬ ನಿರೀಕ್ಷೆ ಇತ್ತು. ಅದರಂತೆ ಇದೀಗ ಆರ್ಯವರ್ಧನ್ ಬಿಗ್ ಬಾಸ್ ಓಟಿಟಿಗೆ ಎಂಟ್ರಿ ಕೊಟ್ಟಿದ್ದಾರೆ. ಇವರ ನಂತರ ಎರಡನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದು ಟಿಕ್ ಟಾಕ್ ಸ್ಟಾರ್ ಅಂತಾನೇ ಕರೆಸಿಕೊಳ್ಳುವ ಸೋನು ಶ್ರಿನಿವಾಸ್ ಗೌಡ. ಟ್ರೋಲ್ ಪೇಜ್ ಗಳಲ್ಲಿ ಸಖತ್ ಟ್ರೋಲ್ಗೆ ಒಳಗಾಗಿದ್ದ ವ್ಯಕ್ತಿಗಳ ಪೈಕಿ ಇವರು ಕೂಡ ಒಬ್ಬರು.

ಟಿಕ್ ಟಾಕ್, ಇನ್ಸ್ಟಾ ಗ್ರಾಮ್ ರೀಲ್ಸ್ ನಲ್ಲಿ ವೀಡಿಯೋಗಳನ್ನ ಮಾಡುವ ಮೂಲಕ ಸಾಕಷ್ಟು ಫೇಮಸ್ ಆದವರು ಈ ಸೋನು ಶ್ರೀನಿವಾಸ್ ಗೌಡ. ತದ ನಂತರ ತುಳು ಸಿನಿಮಾ ರಂಗದ ನಟ ರೂಪೇಶ್ ಶೆಟ್ಟಿ ಮೂರನೇ ಸ್ಪರ್ಧಿಯಾಗಿ ಹೀಗೆ ಬಿಗ್ ಬಾಸ್ ಓಟಿಟಿಗೆ ಎಂಟ್ರಿಯಾದರು. ಇವರಂತೆ ಸ್ಪೂರ್ತಿಗೌಡ, ಸಾನ್ಯ ಅಯ್ಯರ್, ಕಾಮಿಡಿ ಕಲಾಡಿಗಳು ಖ್ಯಾತಿಯ ಹಾಸ್ಯ ನಟ ಲೋಕೇಶ್, ಅಕ್ಷತಾ ಕುಕಿ, ನಟ ರಾಕೇಶ್ ಅಡಿಗ, ಕಿರಣ್ ಕೆ ಯೋಗೇಶ್ವರ್, ಚೈತ್ರಾ ಹಳ್ಳಿಕೇರಿ, ಉದಯ್ ಸೂರ್ಯ, ಜಯಶ್ರೀ ಆರಾಧ್ಯ, ಅರ್ಜುನ್ ರಮೇಶ್, ನಂದು, ಜಶ್ವಂತ್ ಮತ್ತು ಸುದ್ದಿ ವಾಚಕ, ನಿರೂಪಕ ಸೋಮಣ್ಣ ಮಾಚಿಮಾಡ ಬಿಗ್ ಬಾಸ್ ಓಟಿಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಒಟ್ಟು 16 ಮಂದಿ ಬಿಗ್ ಬಾಸ್ ಮನೆಯೊಳಗೆ ಹೆಜ್ಜೆ ಇಟ್ಟಾಗಿದೆ. ಇನ್ನುವೀಕ್ಷಕರನ್ನ ಯಾವ ರೀತಿ ಮನರಂಜಿಸಲಿದ್ದಾರೆ, ಯಾವ್ಯಾವ ವ್ಯಕ್ತಿಯ ಯಾವ ರೀತಿಯ ವ್ಯಕ್ತಿತ್ವ ಹೊರ ಬೀಳಲಿದೆ ಅನ್ನೋದನ್ನ ಮುಂದಿನ ದಿನಗಳಲ್ಲಿ ನೋಡಬಹುದಾಗಿದೆ.