ಇವನಿಗೆ ಇಂಗ್ಲಿಷೇ ಬರಲ್ಲ, ಹತ್ತಿರಕ್ಕೆ ಸೇರಿಸಬೇಡಿ, ಆಚೆ ಕಳಿಸಿ ಎಂದವರ ಎದುರೇ 1,18,400 ಕೋಟಿಯ ಕಂಪನಿ ಬೆಳೆಸಿದ ಯುವಕ.. ಯಾರು ಗೊತ್ತಾ ಅವರು

ಎಲ್ಲವೂ ಮುಳುಗಿ ಹೋಯಿತು ಎನ್ನುವಷ್ಟರಲ್ಲಿ ತನ್ನ ಆತ್ಮವಿಶ್ವಾಸ ಛಲದಿಂದ ಕಟ್ಟಿ ಬೆಳೆಸಿದ್ದು ಲಕ್ಷಕ್ಕೂ ಅಧಿಕ ಮೌಲ್ಯದ ಕಂಪನಿ..! ಹೌದು ಮನುಷ್ಯನಿಗೆ ತಾಳ್ಮೆ ಸಹನೆಯಿದ್ದು ಹಠವೊಂದಿದ್ದರೆ ತನ್ನ ಗುರಿ ಕನಸು ಎಷ್ಟೇ ದೊಡ್ಡದಿದ್ದರು ಕೂಡ ಆತ ಸಾಧಿಸುತ್ತಾನೆ ಎಂಬುದಕ್ಕೆ ಈ ಯಶಸ್ವಿ ಉದ್ಯಮಿ ಸಾಕ್ಷಿಯಾಗಿದ್ದಾನೆ. ಈ ಉದ್ಯಮಿ ಬೇರಾರು ಅಲ್ಲ ಜನಪ್ರಿಯ ಆನ್ಲೈನ್ ಪಾವತಿ ಆಪ್ ಆದಂತಹ ಪೇಟಿಎಂ ಸಂಸ್ಥೆಯ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾರಂತೆ. ಒಬ್ಬ ಮಹಿಳೆ ಇರುತ್ತಾರೋ ಇಲ್ವೋ ಆದರೆ ಕಡುಕಷ್ಟ, ಅನುಭವಿಸಲಾಗದಂತಹ ಅವಮಾನ ನೋವು ಮಾತ್ರ ಇದ್ದೇ ಇರುತ್ತದೆ. ಹೌದು ಪೇಟಿಯಂ ಸಂಸ್ಥೆಯ ಸ್ಥಾಪಕರಾದ ವಿಜಯ್ ಶೇಖರ್ ಶರ್ಮಾ ಅವರ ಯಶೋಗಾಥೆ ತಿಳಿಯುವುದಕ್ಕೆ ಮುನ್ನ ಅವರ ಹಿನ್ನೆಲೆಯ ಬಗ್ಗೆ ಕೊಂಚ ತಿಳಿದುಕೊಳ್ಳೋಣ.

ವಿಜಯ್ ಶೇಖರ್ ಶರ್ಮಾ ಅವರು ಉತ್ತರ ಪ್ರದೇಶದ ಅಲಿಘರ್ ನ ಸಾಮಾನ್ಯ ಕುಟುಂಬದವರು. ಇವರ ತಂದೆ ಸುಲೋಮ್ ಪ್ರಕಾಶ್ ಶರ್ಮಾ ಶಾಲಾ ಶಿಕ್ಷಕರಾಗಿರುತ್ತಾರೆ. ತಾಯಿ ಆಶಾ ಶರ್ಮಾ ಗೃಹಿಣಿ ಆಗಿರುತ್ತಾರೆ. ಮೃದಲಾ ಶರ್ಮಾ ಎಂಬುವರನ್ನ ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸಿರುವ ವಿಜಯ್ ಶೇಖರ್ ಅವರಿಗೆ ವಿವಾನ್ ಶರ್ಮಾ ಎಂಬ ಮಗು ಕೂಡ ಇದೆ. ವಿಜಯ್ ಶೇಖರ್ ಶರ್ಮಾ ಅವರ ಶೈಕ್ಷಣಿಕ ಸಾಧನೆ ಬಹಳ ವಿಶೇಷವಾಗಿದೆ ಎಂದು ಹೇಳಬಹುದು. ಏಕೆಂದರೆ ಇವರು ಕೇವಲ ತಮ್ಮ ಹನ್ನೆರಡನೇ ವಯಸ್ಸಿನಲ್ಲಿಯೇ ಹತ್ತನೇ ಪರೀಕ್ಷೆ ಬರೆದು ಪಾಸಾದರು. ಅದೇ ರೀತಿಯಾಗಿ ತಮ್ಮ 14 ನೇ ವಯಸ್ಸಿನಲ್ಲಿ ಹನ್ನೆರಡನೇ ತರಗತಿಯನ್ನ ಕೂಡ ತೇರ್ಗಡೆ ಮಾಡಿಕೊಳ್ಳುತ್ತಾರೆ.

ತದ ನಂತರ ದೆಹಲಿಯಲ್ಲಿ ಇಂಜಿನಿಯರಿಂಗ್ ಅಧ್ಯಾಯನ ಮಾಡುತ್ತಾರೆ. ಈ ಸಂಧರ್ಭದಲ್ಲಿ ಅವರಿಗೆ ಆಂಗ್ಲ ಭಾಷೆ ಕಬ್ಬಿಣದ ಕಡೆಲೆಯಾಗಿತ್ತಂತೆ. ಇವರಿಗೆ ಇಂಗ್ಲೀಷ್ ಬರುವುದಿಲ್ಲ ಎಂಬ ಕಾರಣಕ್ಕೆ ವಿಜಯ್ ಶೇಖರ್ ಶರ್ಮಾ ಅವರನ್ನ ಗೆಳೆಯರು ತುಂಬಾ ನಿರ್ಲಕ್ಷ್ಯದಿಂದ ಕಾಣುತ್ತಿದ್ದರಂತೆ. ಆದರೆ ತನ್ನ ನ್ಯುನತೆ ಅರಿತು ಇಂಗ್ಲೀಷ್ ಭಾಷೆಯ ಬಗ್ಗೆ ಹಿಡಿತ ಸಾಧಿಸಿಕೊಳ್ಳುತ್ತಾರೆ ವಿಜಯ್ ಶೇಖರ್ ಶರ್ಮಾ. ತದ ನಂತರ 1997 ರಲ್ಲಿ ಇಂಡಿಯಾ ಸೈಟ್.ನೆಟ್ ಎಂಬ ಕಂಪನಿ ಆರಂಭಿಸುತ್ತಾರೆ. ಆದರೆ ತಮ್ಮ ಕಂಪನಿಯನ್ನ ಅಮೆರಿಕಾ ಕಂಪನಿಯೊಂದಕ್ಕೆ ಮಾರಾಟ ಮಾಡಿ ಅದೇ ಸಂಸ್ದೆಯಲ್ಲಿ ಒಂದಷ್ಟು ವರ್ಷಗಳ ಕಾಲ ಕೆಲಸ ಮಾಡುತ್ತಾರಂತೆ. ಬಳಿಕ 2001 ರಲ್ಲಿ ಒನ್ 97 ಎಂಬ ಸ್ವಂತ ಕಂಪನಿ ಆರಂಭ ಮಾಡುತ್ತಾರೆ.

ಮೊಬೈಲ್ ರಿಲೇಟೆಡ್ ಉದ್ಯಮವಾಗಿದ್ದ ಇದು 2011 ರಲ್ಲಿ ಸಂಪೂರ್ಣವಾಗಿ ದಿವಾಳಿ ಆಗುತ್ತದೆ. ಆಗ ವಿಜಯ್ ಶೇಖರ್ ಶರ್ಮಾ ಅವರು ತನ್ನ ಕುಟುಂಬದ ವರಿಂದ, ಗೆಳೆಯರಿಂದ ಲಕ್ಷಾಂತರ ರೂ.ಗಳನ್ನ ಸಾಲ ಪಡೆಯುತ್ತಾರೆ. ಅದೂ ಕೂಡ ಬರೋಬ್ಬರಿ ಶೇ. 25 ರಷ್ಟು ಬಡ್ಡಿಗೆ ಹಣ ತಂದು ಮತ್ತೆ ಕಂಪನಿಯನ್ನ ಮೇಲೆತ್ತಲು ಪ್ರಯತ್ನ ಮಾಡುತ್ತಾರೆ. ಇದರಿಂದ ಕಂಪನಿ ಮತ್ತೆ ಆರಂಭವಾದರು ನಿರೀಕ್ಷೆ ಮಟ್ಟದಷ್ಟು ಲಾಭದಾಯಕ ಆಗುತ್ತಿರಲಿಲ್ಲ. ಬರುವ ಆದಾಯವೆಲ್ಲವು ಸಾಲದ ಬಡ್ಡಿಗೆ, ಬಾಡಿಗೆಗೆ ಸರಿ ಹೋಗುತ್ತಿರುತ್ತದೆ. ಇದೇ ಸಮಯದಲ್ಲಿ ಭಾರತದಲ್ಲಿ ಆಗತಾನೇ ಸ್ಮಾರ್ಟ್ ಫೋನ್ ಗಳ ವೈಭವ ಜೋರಾಗಿರುತ್ತದೆ.

ಈ ಸ್ಮಾರ್ಟ್ ಪೋನ್ ಫೀಲ್ಡ್ ಬೆಳೆಯುತ್ತಿರುವ ವೇಗವನ್ನು ಸೂಕ್ಷ್ಮವಾಗಿ ಗಮನಿಸಿದ ವಿಜಯ್ ಶೇಖರ್ ಶರ್ಮಾ ತನ್ನ ಒನ್ 97 ಕಂಪನಿಯಡಿಯಲ್ಲಿ ಪೇಟಿಯಂ.ಕಾಮ್ ವೆಬ್ಸೈಟ್ ಆರಂಭ ಮಾಡುತ್ತಾರೆ. ಆರಂಭದ ದಿನಗಳಲ್ಲಿ ಪೇಟಿಯಂ ಆಪ್ ನಲ್ಲಿ ಕೇವಲ ಮೊಬೈಲ್ ರೀಚಾರ್ಜ್ ಗಾಗಿ ಮಾತ್ರ ಬಳಸಲಾಗುತ್ತಿರುತ್ತದೆ. ತದ ನಂತರ ಬ್ಯಾಂಕ್ ಟ್ರಾನ್ಸಾಕ್ಷನ್ ಕೂಡ ಮಾಡುವಂತಹ ಫೀಚರ್ ಸೇರಿಸಲಾಗುತ್ತದೆ. ಅದಲ್ಲದೆ ಬಿಲ್ ಪಾವತಿ, ಬುಕ್ಕಿಂಗ್, ಮನಿ ಟ್ರಾನ್ಸ್ ಫರ್, ಮ್ಯೂಚ್ಯೂಯಲ್ ಫಂಡ್ ಹೀಗೆ ಅನೇಕಾನೇಕ ಅವಕಾಶಗಳನ್ನ ಸೇರಿಸಲಾಗುತ್ತದೆ. ಇಂದು ಈ ಪೇಟಿಯಂ ಸಂಸ್ಥೆ 18.400 ಕೋಟಿ ಮೌಲ್ಯದ ಕಂಪನಿಯಾಗಿ ಬೆಳೆದು ಸಾವಿರಾರು ಮಂದಿಗೆ ಉದ್ಯೋಗ ನೀಡಿದೆ.