ಇತಿಹಾಸ ಸೃಷ್ಟಿಸಿದ ಕಾಂತಾರ, ತಮ್ಮದೇ ಕರಾವಳಿ ಭಾಗದ ಮಂಗಳೂರಿನಲ್ಲಿ ಕಾಂತಾರ ಚಿತ್ರ ಗಳಿಸಿದ್ದೆಷ್ಟು

ಮಂಗಳೂರಿನ ಈ ಪ್ರಸಿದ್ದ ಥಿಯೇಟರ್ ಗಳಲ್ಲಿ ಕಾಂತಾರ ಕಲೆಕ್ಷನ್ ಎಷ್ಟು ಅಂತ ಗೊತ್ತಾದ್ರೇ ನಿಜಕ್ಕೂ ಕೂಡ ಭಾರಿ ಅಚ್ಚರಿ ಆಗುತ್ತೆ. ಕೆಲವು ದಿನಗಳ ಹಿಂದೆಯಷ್ಟೇ ದಸರಾ ಜಾತ್ರೆ ಮುಗಿದಿದೆ. ಆದರೆ ಕಾಂತಾರ ಸಿನಿಮಾದ ಜಾತ್ರೆ ಮಾತ್ರ ಮುಗಿದಿಲ್ಲ. ಎರಡು ವಾರಗಳ ನಂತರವೂ ಕೂಡ ಕಾಂತಾರ ಸಿನಿಮಾ ರಿಲೀಸ್ ಆದ ಎಲ್ಲಾ ಥಿಯೇಟರ್ ಗಳಲ್ಲಿ ಜನಜಂಗುಳಿಯಿಂದ ಥಿಯೇಟರ್ ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನದಲ್ಲಿ ಮೂಡಿ ಬಂದಿರೋ ಕಾಂತಾರ ಸಿನಿಮಾ ದಿನದಿಂದ ದಿನಕ್ಕೆ ಅಪಾರ ಜನಪ್ರಿಯತೆ ಗಳಿಸುತ್ತಿದೆ. ಕರ್ನಾಟಕ ಮಾತ್ರ ಅಲ್ಲದೆ ದೇಶ ಮತ್ತು ಹೊರ ದೇಶಗಳಲ್ಲಿಯೂ ಕೂಡ ಕಾಂತಾರ ಸಿನಿಮಾ ಬಗ್ಗೆ ಸಖತ್ ರೆಸ್ಪಾನ್ಸ್ ಕೇಳಿ ಬರುತ್ತಿದೆ.

ಇದೇ ಶುಕ್ರವಾರದಿಂದ ವರ್ಲ್ಡ್ ವೈಡ್ ಕಾಂತಾರ ಸಿನಿಮಾ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲೆಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಕೂಡ ರಿಲೀಸ್ ಆಗ್ತಿದೆ. ಈ ಮೂಲಕ ವರ್ಲ್ಡ್ ವೈಡ್ ಸಖತ್ ಸೌಂಡ್ ಮಾಡಲಿದೆ ಕಾಂತಾರ ಸಿನಿಮಾ. ಇನ್ನು ಕರಾವಳಿ ಮಂಗಳೂರಿನ ಸಂಸ್ಕೃತಿ ಆಚರಣೆಯನ್ನೇ ಚಿತ್ರದ ಪ್ರಧಾನ ಕಥಾ ವಸ್ತುವನ್ನಾಗಿ ಹೊಂದಿರೋ ಕಾಂತಾರ ಸಿನಿಮಾ ಮಂಗಳೂರಿನ ಸುಚಿತ್ರ ಮತ್ತು ಪ್ರಭಾತ್ ಚಿತ್ರಮಂದಿರಗಳಲ್ಲಿ ನಿರೀಕ್ಷೆಗೂ ಮೀರಿದ ಭಾರಿ ಕಲೆಕ್ಷನ್ ಮಾಡುತ್ತಿದೆ. ಇಲ್ಲಿನ ವಿತರಕರು ಕೂಡ ಕಾಂತಾರ ಸಿನಿಮಾ ಈ ಲೆವೆಲ್ ಗೆ ರೀಚ್ ಆಗುತ್ತೆ ಅಂತ ಊಹೆ ಮಾಡರಿಲಿಲ್ಲವಂತೆ. ಎರಡೂ ವಾರಗಳ ನಂತರವೂ ಕೂಡ ಈ ಎರಡು ಥಿಯೇಟರ್ ಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಟಿಕೆಟ್ ಗಳು ಅಡ್ವಾನ್ಸ್ ಬುಕ್ಕಿಂಗ್ ಆಗಿ ಥಿಯೇಟರ್ ನಿರ್ವಾಹಕರು ನಿರ್ವಹಣೆ, ನಿಯಂತ್ರಣ ಮಾಡದಷ್ಟು ಪ್ರೇಕ್ಷಕರು ಥಿಯೇಟರ್ ಕಡೆ ಜಮಾಯಿಸುತ್ತಿದ್ದಾರಂತೆ.

ಕೆಲವರಿಗೆ ಟಿಕೆಟ್ ಸಿಗದೇ ಬೇಸರದಿಂದ ವಾಪಸ್ ಹೋಗುತ್ತಿದ್ದಾರಂತೆ. ವಿತರಕರು ಹೇಳುವ ಪ್ರಕಾರ ಮಂಗಳೂರಿನ ಈ ಸುಚಿತ್ರ ಮತ್ತು ಪ್ರಭಾತ್ ಸಿನಿಮಾ ಮಂದಿರಗಳಲ್ಲಿಯೇ ಕಾಂತಾರ ಸಿನಿಮಾ ಇದುವರೆಗೆ ಬರೋಬ್ಬರಿ ಐವತ್ತು ಲಕ್ಷ ರೂಗಳನ್ನ ಬಾಚಿಕೊಂಡಿದೆ ಎಂದು ತಿಳಿದು ಬಂದಿದೆ. ಕಾಂತಾರ ಸಿನಿಮಾ ಕಲೆಕ್ಷನ್ ಸವಾರಿ ಇನ್ನೂ ಕೂಡ ನಿಂತಿಲ್ಲವಂತೆ. ಕಾಂತಾರ ಸಿನಿಮಾದ ಓಟ ನೋಡ್ತಿದ್ರೆ ಮಂಗಳೂರಿನಲ್ಲಿಯೇ ಈ ಚಿತ್ರ ಈಗಾಗಲೇ ಮೂರುವರೆ ಕೋಟಿ ಗಳಿಸಿದ್ದು, ಐದು ಕೋಟಿ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ ಎಂದು ಅಲ್ಲಿನ ಸಿನಿಮಾ ವಿತರಕರು ಅಂದಾಜು ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ರಿಷಬ್ ಶೆಟ್ಟಿ ಅವರ ನಿರ್ದೇಶನ ಮತ್ತು ಅವರ ಅಮೋಘ ನಟನೆಗೆ ಮಂಗಳೂರಿನ ಜನರು ಸೇರಿದಂತೆ ಇಡೀ ವರ್ಲ್ಢ್ ವೈಡ್ ಪ್ರೇಕ್ಷಕರು ಅಪಾರ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.