ಇಟಲಿ ಅಭಿಮಾನಿಗಳ ಜೊತೆ ವಿಶೇಷ ಫೋಟೋ ಹಂಚಿಕೊಂಡ ರಾಕಿಂಗ್ ಸ್ಟಾರ್ ಯಶ್ ಅವರು

ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಿತ್ರದ ನಂತರ ಕೇವಲ ಕರ್ನಾಟಕ, ಭಾರತ ಮಾತ್ರ ಅಲ್ಲದೇ ದೇಶ ವಿದೇಶಗಳಲ್ಲಿ ಅಪಾರ ಜನಪ್ರಿಯತೆಯ ಜೊತೆಗೆ ಅಸಂಖ್ಯಾತ ಅಭಿಮಾನಿ ಬಳಗವನ್ನೊಂದಿದ್ದಾರೆ‌. ಯಶ್ ಇಂದು ಯಾವುದೇ ರಾಜ್ಯ ಅಥವಾ ದೇಶಕ್ಕೆ ಹೋಗಲಿ ಅಲ್ಲಿ ಯಶ್ ಅವರ ಸುತ್ತ ಅಪಾರ ಜನಸ್ತೋಮ ಮುತ್ತಿಕೊಳ್ಳುತ್ತದೆ. ಅದರಂತೆ ಕೆಜಿಎಫ್2 ಸಿನಿಮಾಗೆ ಸಿಕ್ಕ ಅಭೂತ ಪೂರ್ವ ಯಶಸ್ಸಿನ ನಂತರ ಸದ್ಯಕ್ಕೆ ರಾಕಿಬಾಯ್ ತಮ್ಮ ಪ್ರೀತಿಯ ಮಡದಿ ರಾಧಿಕಾ ಪಂಡಿತ್ ಅವರೊಟ್ಟಿಗೆ ವರ್ಲ್ಡ್ ಟೂರ್ ನಲ್ಲಿದ್ದಾರೆ. ಯುರೋಪ್, ಇಟಲಿ, ಪ್ರವಾಸ ಮಾಡುತ್ತಿರುವ ಯಶ್ ಮತ್ತು ರಾಧಿಕಾ ಪಂಡಿತ್ ಅಲ್ಲಿನ ಒಂದಷ್ಟು ವಿಶೇಷ ಸ್ಥಳಗಳಿಗೆ ಭೇಟಿ ನೀಡಿ ಪೋಟೋ ತೆಗೆದುಕೊಂಡು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡುತ್ತಿದ್ದಾರೆ.

ಅದರಂತೆ ಇತ್ತೀಚೆಗೆ ಹೊರ ದೇಶದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರನ್ನು ಕಂಡು ಅಲ್ಲಿನ ಯಶ್ ಅಭಿಮಾನಿಗಳು ಫೋಟೋಗೆ ಬೇಡಿಕೆ ಇಟ್ಟು ಯಶ್ ದಂಪತಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಫಾರಿನ್ ಫ್ಯಾನ್ಸ್ ಗಳ ಜೊತೆ ಫೋಟೋಗೆ ಫೋಸ್ ಕೊಟ್ಟ ಯಶ್ ಈ ಫೋಟೋವನ್ನ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋದ ಜೊತೆಗೆ ಗಡಿಯ ಆಚೆಗೂ ನನ್ನ ಮೇಲಿನ ನಿಮ್ಮ ಪ್ರೀತಿ ಪಸರಿಸಿದೆ. ಮುಕ್ತವಾಗಿ ತೆರೆದ ನನ್ನ ಬಾಹುಗಳಿಂದ ನಿಮ್ಮ ಪ್ರೀತಿಯನ್ನ ನಾನು ಬಾಚಿಕೊಳ್ಳುತ್ತೇನೆ. ಇಟಲಿ ಮತ್ತು ಬಾಂಗ್ಲಾದೇಶದ ಅಭಿಮಾನಿಗಳಿಗೆ ನನ್ನ ತುಂಬು ಹೃದಯದ ಧನ್ಯವಾದಗಳು ಎಂದು ಬರೆಯುವುದರ ಜೊತೆಗೆ.

ಈ ಪೋಸ್ಟ್ ಸದಾ ಎಂದೆಂದಿಗೂ ಹೀಗೆ ವಿಶೇಷವಾಗಿ ಉಳಿಯಲಿ ಅನ್ನೋದಕ್ಕೆ ಹಂಚಿಕೊಳ್ಳುತ್ತಿದ್ದೆನೆ ಎಂದು ತಿಳಿಸಿದ್ದಾರೆ. ಇನ್ನು ವರ್ಲ್ಡ್ ಟೂರ್ ನಲ್ಲಿ ಇರುವ ಯಶ್ ಮತ್ತು ರಾಧಿಕಾ ಪಂಡಿತ್ ಅವರು ಯಾವಾಗ ಬೆಂಗಳೂರಿಗೆ ಬಂದು ಯಶ್ ತಮ್ಮ ಮುಂದಿನ ಚಿತ್ರದ ಬಗ್ಗೆ ಅಪ್ ಡೇಟ್ ನೀಡಲಿದ್ದಾರೆ ಎಂದು ರಾಕಿಭಾಯ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಯಶ್ ಗಡ್ಡ ಬಿಟ್ಟಿರುವುದರಿಂದ ಕೆಜಿಎಫ್3 ಚಿತ್ರವೇ ಯಶ್ ಅವರ ಮುಂದಿನ ಚಿತ್ರ ಆಗಿರಲಿದೆ. ಇದಾದ ನಂತರ ಮಫ್ತಿ ಚಿತ್ರದ ನಿರ್ದೇಶಕ ನರ್ತನ್ ಅವರೊಟ್ಟಿಗೆ ಸಿನಿಮಾ ಮಾಡಲಿದ್ದಾರೆ ಎಂದು ತಿಳಿದು ಬರುತ್ತಿದೆ‌. ಆದರೆ ಫೈನಲ್ ಆಗಿ ಯಶ್ ಅವರೇ ಇದಕ್ಕೆ ಸ್ಪಷ್ಟನೆ ನೀಡಬೇಕಾಗಿದೆ.

Leave a Reply

%d bloggers like this: