ಐಷಾರಾಮಿ ಹೋಟೆಲ್ ನಲ್ಲಿ ನಟಿ ಕತ್ರಿನಾ ಕೈಫ್’ನ 5 ದಿನಗಳ ಮದುವೆ! ಒಂದು ರಾತ್ರಿಗೆ ಎಷ್ಟು ಲಕ್ಷ ಹಣ ಗೊತ್ತಾ

ಬಾಲಿವುಡ್ ಸ್ಟಾರ್ ನಟಿ ಕ್ಯಾಟ್ ಖ್ಯಾತಿಯ ಕತ್ರಿನಾ ಕೈಫ್ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡಲು ಮುಹೂರ್ತ ಫಿಕ್ಸ್..! ಹಿಂದಿ ಚಿತ್ರರಂಗದ ಅಪಾರ ಜನಪ್ರಿಯತೆ ಮತ್ತು ಭಾರಿ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿರುವ ನಟಿ ಕತ್ರಿನಾ ಕೈಫ್ ಬಾಲಿವುಡ್ ಸ್ಟಾರ್ ನಟ ವಿಕ್ಕಿ ಕೌಶಲ್ ಅವರನ್ನು ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸುತ್ತಿದ್ದಾರೆ.ನಟಿ ಕತ್ರಿನಾ ಕೈಫ್ ಮತ್ತು ನಟ ವಿಕ್ಕಿ ಕೌಶಲ್ ಅವರು ಪರಸ್ಪರ ಪ್ರೀತಿಸಿ ತಮ್ಮ ಕುಟುಂಬದವರನ್ನ ಒಪ್ಪಿಸಿ ಅದ್ದೂರಿಯಾಗಿ ವಿವಾಹ ಆಗುತ್ತಿದ್ದಾರೆ. ಈ ಸ್ಟಾರ್ ಜೋಡಿಗಳ ಅದ್ದೂರಿ ಮದುವೆ ಬರೋಬ್ಬರಿ ಐದು ದಿನಗಳ ಕಾಲ ನಡೆಯಲಿದೆಯಂತೆ. ಐದು ದಿನಗಳ ಈ ಅದ್ದೂರಿ ವಿವಾಹವು ಇದೇ ಮುಂದಿನ ಡಿಸೆಂಬರ್ ತಿಂಗಳ 7 ರಿಂದ 12 ನೇ ತಾರೀಖಿನವರೆಗೆ ರಾಜಸ್ಥಾನದ ಐಷಾರಾಮಿ ದುಬಾರಿ ಸಿಕ್ಸ್ ಸೆನ್ಸಸ್ ಫೋರ್ಟ್ ಎಂಬ ಹೋಟೆಲನಲ್ಲಿ ವೈಭವದಿಂದ ಜರುಗಲಿದೆ ಎಂದು ತಿಳಿದು ಬಂದಿದೆ.

ರಾಜಸ್ಥಾನದ ಪ್ರತಿಷ್ಟಿತ ಹೋಟೆಲ್ ಆದಂತಹ ಸಿಕ್ಸ್ ಸೆನ್ಸಸ್ ಫೋರ್ಟ್ ಹೋಟೇಲ್ ಎಷ್ಟು ದುಬಾರಿ ಅಂದರೆ ಕೇವಲ ಒಂದು ದಿನ ಅಲ್ಲಿ ವಾಸ ಮಾಡುವುದಕ್ಕೆ ಬರೋಬ್ಬರಿ ಎಂಭತ್ತು ಸಾವಿರದಿಂದ ಐದು ಲಕ್ಷ ರೂ.ದವರೆಗೆ ಬಾಡಿಗೆ ನೀಡಬೇಕಾಗಿರುತ್ತದೆ. ಮದುವೆಯ ಎಲ್ಲಾ ಶಾಸ್ತ್ರಗಳು ಬಹಳ ಅದ್ದೂರಿಯಾಗಿ ವಾರಗಳ ಕಾಲ ನಡೆಯಲಿದ್ದು,ಈಗಾಗಲೇ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಕುಟುಂಬಗಳು ಸಕಲ ಸಿದ್ದತೆ ಮಾಡಿಕೊಳ್ಳುತ್ತಿವೆಯಂತೆ. ಮತ್ತೊಂದು ವಿಚಾರ ಅಂದರೆ ನಟಿ ಕತ್ರಿನಾ ಕೈಫ್ ಅವರು ಮುಸ್ಲಿಂ ಧರ್ಮದವರಾಗಿದ್ದು,ನಟ ವಿಕ್ಕಿ ಕೌಶಲ್ ಹಿಂಧೂ ಧರ್ಮದವರಾಗಿರುವುದರಿಂದ ಮದುವೆಯಲ್ಲಿ ಎರಡು ಧರ್ಮಗಳ ಶಾಸ್ತ್ರ-ಸಂಪ್ರದಾಯಗಳನ್ನು ಪಾಲಿಸಲಾಗುತ್ತದೆ ಎಂದು ತಿಳಿದು ಬಂದಿದೆ.

ಈಗಾಗಲೇ ಈ ಜೋಡಿ ಬಾಲಿವುಡ್ ಸ್ಟಾರ್ ನಟ-ನಟಿಯರಿಗೆಲ್ಲಾ ವಿವಾಹ ಆಮಂತ್ರಣ ಪತ್ರಿಕೆಯನ್ನು ನೀಡಲಾಗುತ್ತಿದೆಯಂತೆ.ಸದ್ಯಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿರುವುದರಿಂದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ವಿವಾಹವು ಅದ್ದೂರಿಯಾಗಿ ಜರುಗಲಿದೆ ಎಂದು ಕುಟುಂಬ ತಿಳಿಸಿದೆ. ಒಟ್ಟಾರೆಯಾಗಿ ನಟಿ ಕತ್ರಿನಾ ಕೈಫ್ ಮತ್ತು ನಟ ವಿಕ್ಕಿ ಕೌಶಲ್ ಅವರ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡುತ್ತಿದ್ದು ಇವರಿಬ್ಬರ ವಿವಾಹ ಮಹೋತ್ಸವಕ್ಕೆ ಬಾಲಿವುಡ್ ನ ಎಲ್ಲಾ ದಿಗ್ಗಜ ಸ್ಟಾರ್ ನಟ-ನಟಿಯರು ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

%d bloggers like this: