ಐಪಿಎಸ್ ರವಿಚೆನ್ನಣ್ಣವರ ತಿಂಗಳ ಆದಾಯ ಮತ್ತು ಆಸ್ತಿ ಎಷ್ಟಿದೆ ಗೊತ್ತಾ? ಈಗಲೇ ನೋಡಿ

ಕನ್ನಡದ ದಕ್ಷ ಅಧಿಕಾರಿ ರವಿ ಚನ್ನಣ್ಣನವರ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ.ತಮ್ಮ ಖಡಕ್ ಶೈಲಿಯ ಅಧಿಕಾರದಿಂದ ಅವರು ಅನೇಕ ಯುವಕರಿಗೆ ಸ್ಪೂರ್ತಿ.ತಮ್ಮ ವಿಭಿನ್ನ ಕಾರ್ಯವೈಖರಿ ಹಾಗೂ ನಿಷ್ಠಾವಂತ ಆಡಳಿತದಿಂದ ಅವರು ಕರ್ನಾಟಕದ ಮನೆಮಾತಾದವರು.ಐಪಿಎಸ್ ಅಧಿಕಾರಿ ಅಂದ್ರೆ ಹೀಗಿರಬೇಕು ಅಂತ ತೋರಿಸಿಕೊಟ್ಟ ರವಿಯವರಿಗೆ ಸರ್ಕಾರ ನೀಡುವ ತಿಂಗಳ ವರಮಾನ ಒಂದು ಲಕ್ಷದ ಐದು ಸಾವಿರ ರೂಪಾಯಿ.ಮತ್ತು ಅದರ ಜೊತೆಗೆ ಅನೇಕ ಸರ್ಕಾರಿ ಸವಲತ್ತುಗಳು ಅವರಿಗೆ ಸಿಗುತ್ತದೆ.ಇಂತಹ ಜವಾಬ್ದಾರಿಯುತ ಅಧಿಕಾರಿಗಳಿಗೆ ಮನೆ ಯೋಚನೆ ಬರದಿರಲಿ ಅನ್ನುವ ಕಾರಣಕ್ಕೆ ಇವರ ಮನೆಯ ಖರ್ಚುವೆಚ್ಚಗಳನ್ನು ಸರ್ಕಾರವೇ ನೋಡಿಕೊಳ್ಳುತ್ತದೆ.

ಎಂಟು ಎಕರೆ ಪ್ರದೇಶದಲ್ಲಿ ಸುಸಜ್ಜಿತವಾದ ಸರ್ಕಾರಿ ಮನೆ,ಅದಕ್ಕೆ ಇಬ್ಬರು ಸರ್ಕಾರಿ ಗೇಟ್‌ಕೀಪರ್‌ಗಳು.ಮನೆಯ ಕೆಲಸಕ್ಕೆ ಇಬ್ಬರು,ಮತ್ತು ಇಬ್ಬರು ಅಡುಗೆಯವರನ್ನು ನೇಮಿಸಿರುತ್ತಾರೆ.ಆದರೆ ವಿಷಯ ಅದಲ್ಲ,ಇಷ್ಟೆಲ್ಲಾ ಸೌಲಭ್ಯ ಕೊಟ್ಟರೂ ರವಿಯವರು ಬಡವರ ನಡುವೆ ವಾಸ ಮಾಡಲು ಇಷ್ಟ ಪಡುತ್ತಾರೆ.ಬಡತನದ ಕಷ್ಟವನ್ನು ತಿಳಿದಿರುವ ರವಿಯವರು ಗ್ರಾಮ ವಾಸ್ತವ್ಯ ಹೂಡುವುದು,ಹಳ್ಳಿಗಳನ್ನು ದತ್ತು ತೆಗೆದುಕೊಂಡು ಬಯಲುಮುಕ್ತ ಶೌಚಾಲಯದಂತಹ ಸಾಮಾಜಿಕ ಕಾರ್ಯಗಳನ್ನು ‌ಮಾಡುತ್ತಾ ಹಳ್ಳಿಗಳನ್ನು ಉದ್ಧಾರ ಮಾಡುವ ಕೆಲಸ ಮಾಡ್ತಿದ್ದಾರೆ.ಕ್ರಿಮಿನಲ್ ಗಳನ್ನು ಹಿಡಿಯುವ ಜೊತೆಗೆ ಇಂಥ ಆದರ್ಶ ಬದುಕು ಬದುಕುತ್ತಿರುವ ರವಿ ಚನ್ನಣ್ಣನವರಿಗೆ ಶುಭವಾಗಲಿ.

Leave a Reply

%d bloggers like this: