IPL ಧಾಖಲೆ, ಒಬ್ಬನೇ ಬೌಲರ್ ಅತೀ ಹೆಚ್ಚು ಬಾರಿ ಔಟಾದ ಬ್ಯಾಟ್ಸಮನ್ ಗಳು ಇವರೇ

ಜಗತ್ತಿನ ಯಾವ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೂ ಕಡಿಮೆ ಇಲ್ಲದಂತೆ ಅದ್ದೂರಿಯಾಗಿ ಯಶಸ್ವಿಯಾಗಿ ನಡೆಯುವ (ಐಪಿಎಲ್)ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ನಲ್ಲಿ ವಿದೇಶಿ ಆಟಗಾರರ ಜೊತೆಗೂಡಿ ದೇಶದ ಪ್ರಸಿದ್ದ ಆಟಗಾರರು ಭಾಗವಹಿಸುತ್ತಾರೆ. ಈ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ನಲ್ಲಿ ಹಲವಾರು ರೀತಿಯ ದಾಖಲೆಗಳು ಒಂದಷ್ಟು ಆಟಗಾರರ ಹೆಸರಿನಲ್ಲಿದೆ.ಕೆಲವು ಆಟಗಾರರು ಅತಿ ಹೆಚ್ಚು ರನ್ ಗಳನ್ನ ಕಲೆ ಹಾಕುವ ಮೂಲಕ ದಾಖಲೆ ಮಾಡಿದಂತೆ,ಒಂದಷ್ಟು ಬೌಲಿಂಗ್ ಪರಿಣಿತರು ಕೂಡ ಹೆಚ್ಚು ವಿಕೆಟ್ ಪಡೆಯುವ ಮೂಲಕ ದಾಖಲೆ ನಿರ್ಮಾಣ ಮಾಡಿದ್ದಾರೆ.ಪ್ರಮುಖವಾಗಿ ಈ ಒಬ್ಬ ಬೌಲರ್ ಘಟಾನುಗಟಿ ಆಟಗಾರರನ್ನ ಪದೆ ಪದೇ ತನ್ನ ಬೌಲಿಂಗ್ ಶೈಲಿಯ ಮೂಲಕ ಕಟ್ಟಿಹಾಕಿ ಔಟ್ ಮಾಡಿರುವುದು ವಿಶೇಷ.

ಭಾರತ ತಂಡದ ನಾಯಕ ಮತ್ತು ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡದ ಕ್ಯಾಪ್ಟನ್ ಆಗಿರುವ ವಿರಾಟ್ ಕೊಹ್ಲಿ ಈತನ ಬೌಲಿಂಗ್ ಹೆಚ್ಚು ಬಾರಿ ತಮ್ಮ ವಿಕೆಟ್ ಒಪ್ಪಿಸಿದ್ದಾರೆ.ಕೊಹ್ಲಿ ಪಂಜಾಬ್ ತಂಡದ ಆಟಗಾರ ಸಂದೀಪ್ ಶರ್ಮಾ ಅವರಿಗೆ ಬರೋಬ್ಬರಿ ಏಳು ಭಾರಿ ವಿಕೆಟ್ ಒಪ್ಪಿಸಿದ್ದಾರೆ. ಇನ್ನು ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಕೂಡ ಸ್ಪಿನ್ನರ್ ಅಮಿತ್ ಮಿಶ್ರಾ ಗೆ ಹೆಚ್ಚು ಬಾರಿ ವಿಕೆಟ್ ಒಪ್ಪಿಸಿದ್ದಾರೆ.ಅದೇ ರೀತಿಯಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ಒಬ್ಬನೇ ಬೌಲರ್ ಗೆ ಅತಿ ಹೆಚ್ಚು ಬಾರಿ ಔಟ್ ಆದಂತಹ ಆಟಗಾರ ಎಂಬ ಕೆಟ್ಟ ಹೆಸರಿಗೆ ಸೇರಿದ್ದಾರೆ.ಜಹೀರ್ ಖಾನ್ ಅವರ ಬೌಲಿಂಗ್ ನಲ್ಲಿಯೇ ಧೋನಿ ಏಳು ಬಾರಿ ವಿಕೆಟ್ ಒಪ್ಪಿಸಿದ್ದಾರೆ.ಇನ್ನು ರೋಹಿತ್ ಶರ್ಮಾ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಬೌಲರ್ ಆಗಿರುವ ಅಮಿತ್ ಮಿಶ್ರಾ ಅವರಿಗೆ ಏಳು ಬಾರಿ ವಿಕೆಟ್ ನೀಡಿದ್ದಾರೆ.