IPL ನಲ್ಲಿ ಒಂದು ಪದ್ಯಕ್ಕೆ ಅಂಪೈರ್ ಗಳು ಪಡೆಯುತ್ತಿರುವ ಸಂಬಳ ಎಷ್ಟು ಗೊತ್ತಾ

ದೇಶ ದೇಶಗಳ ನಡುವೆ ಪರಸ್ಪರ ಸೌಹಾರ್ದಯುತ ಸಂಬಂಧ ಏರ್ಪಟ್ಟು ಉತ್ತಮ ಭಾಂಧವ್ಯ ಬೆಳೆಯಲು ಕ್ರೀಡೆ ಎಂಬುದರ ಮೂಲಕ ಒಟ್ಟುಗೂಡಿಸಲಾಗುತ್ತದೆ. ಆಯಾ ದೇಶದ ಪ್ರತೀಕವಾಗಿ ಒಂದೊಂದು ತಂಡವನ್ನಾಗಿ ಮಾಡಿ ಆಟಗಾರರನ್ನ ತಯಾರು ಕೂಡ ಮಾಡಲಾಗುತ್ತದೆ.ಇಂದು ಕ್ರೀಡೆಗಳು ಜಗತ್ತಿನಾದ್ಯಂತ ಉತ್ತಮವಾಗಿ ನಡೆಯುತ್ತಿವೆ.ಅದರಲ್ಲಿಯೂ ಈ ಕ್ರಿಕೆಟ್ ಅಪಾರ ಜನಪ್ರಿಯತೆಯನ್ನ ಪಡೆದುಕೊಂಡಿದೆ.ದೇಶಿಯ ಕ್ರಿಕೆಟ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಅಂತೂ ಯುವ ಸಮೂಹವನ್ನ ಹುಚ್ಚೆಬ್ಬಿಸಿವೆ.ಈ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ನಲ್ಲಿ ಅಂತರಾಷ್ಟೀಯ ಕ್ರಿಕೆಟಿಗರು ವಿವಿಧ ಫ್ರಾಂಚೈಸಿಗಳಲ್ಲಿ ಆಟವಾಡುತ್ತಾರೆ.ಪ್ರತಿಯೊಬ್ಬ ಆಟಗಾರರಿಗೂ ಕೂಡ ಕೋಟಿ ಕೋಟಿ ಹಣ ನೀಡಿ ಫ್ರಾಂಚೈಸಿಗಳು ತಮ್ಮ ತಂಡದ ಜೊತೆಗೆ ಆಟವಾಡಲು ಖರೀದಿ ಮಾಡಿರುತ್ತಾರೆ.ಆಟಗಾರರಷ್ಟೇ ಪ್ರಾಮುಖ್ಯವನ್ನು ಅಂಪೈರ್ ಗಳಿಗೂ ಕೂಡ ನೀಡಬೇಕಾಗುತ್ತದೆ.

ಅಂಪೈರ್ ಗಳ ನಿರ್ಧಾರ ಅವರ ಒಂದು ಸೂಚನೆ ಇಡೀ ಪಂದ್ಯದ ದಿಕ್ಕನ್ನೇ ಬದಲಾಯಿಸಬಿಡಬಹುದು.ಅಷ್ಟರ ಮಟ್ಟಿಗೆ ಅವರ ಅಧಿಕಾರ ಕೆಲಸ ಮಾಡುತ್ತದೆ.ಅಂಪೈರ್ ಗಳು ಮೈದಾನಕ್ಕಿಳಿದ ಮೇಲೆ ಒಂದೇ ಸ್ಥಳದಲ್ಲಿ ನಿಂತರು ಅವರ ಗಮನ ಆಟಗಾರರ ಚಲನವಲನ,ವಿಕೆಟ್,ಬೌಲರ್,ಚೆಂಡು ಹೀಗೆ ಅವರ ಸಂಪೂರ್ಣ ದೃಷ್ಟಿ ಇಷ್ಟರ ಮೇಲೆಯೇ ನೆಟ್ಟಿರುತ್ತದೆ.ಅಂಪೈರ್ ಆಗಬೇಕಾದರೆ ಬಹು ಮುಖ್ಯವಾಗಿ ಒಂದಷ್ಟು ನಿಯಮಗಳನ್ನ ಅರಿತಿರಬೇಕು.ಒಬ್ಬ ಕ್ರಿಕೆಟಿಗ ಅಥವಾ ಇನ್ನಿತರ ಯಾವುದೇ ಕ್ರಿಕೆಟ್ ಆಸಕ್ತ ಅಭ್ಯರ್ಥಿಗಳು ಅಂಪೈರ್ ಆಗುವ ಅವಕಾಶಗಳಿವೆ.ಇದಕ್ಕಾಗಿ ಕಾಲಕಾಲಕ್ಕೆ ಆಯಾ ರಾಜ್ಯದ ಕ್ರೀಡಾ ಮಂಡಳಿಗಳು ಲಿಖಿತ ಪರೀಕ್ಷೆ ಮತ್ತು ಪ್ರಾಯೋಗಿಕ ಪರೀಕ್ಷೆಗಳನ್ನ ನಡೆಸುತ್ತವೆ.ಆಸಕ್ತ ಅಭ್ಯರ್ಥಿಗಳು ಪರೀಕ್ಷೆ ಬರೆದು ಉತ್ತೀರ್ಣರಾಗಿ ಅಂಪೈರ್ ಹುದ್ದೆಯನ್ನ ಪಡೆಯಬಹುದಾಗಿದೆ.

ಇನ್ನು ಈ ಪರೀಕ್ಷೆ ಉತ್ತೀರ್ಣ ಆದವರು ಬಿಸಿಸಿಐ ನಡೆಸುವ ಅಂಪೈರ್ ಆಯ್ಕೆ ಪ್ರಕ್ರಿಯೆಯಲ್ಲಿ ಅವಕಾಶ ಪಡೆಯಬಹುದಾಗಿರುತ್ತದೆ.ಸೂಕ್ತ ಸಮರ್ಪಕವಾಗಿ ಕಾಲಕ್ಕೆ ತಕ್ಕಂತೆ ಬಿಸಿಸಿಐ ಕೂಡ ಈ ಅಂಪೈರ್ ಆಯ್ಕೆಯನ್ನ ಮಾಡಲಾಗುತ್ತಿರುತ್ತದೆ.ಬಿಸಿಸಿಐ ಆಯ್ಕೆ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಅವರು ನೇರವಾಗಿ ರಾಷ್ಟ್ರೀಯ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್ ಗಳಾಗಿ ಕಾರ್ಯ ನಿರ್ವಹಿಸಬಹುದಾಗಿರುತ್ತದೆ.ಅಂಪೈರ್ ಹುದ್ದೆಗಳಲ್ಲಿಯೂ ಕೂಡ ವಿವಿಧ ರೀತಿಯ ಕ್ರಮಾಂಕಗಳನ್ನ ನೋಡಬಹುದಾಗಿದ್ದು,ಆಯಾ ಕ್ರಮಾಂಕದ ಅಂಪೈರ್ ಗಳ ಅನುಗುಣವಾಗಿ ವೇತನವನ್ನ ನೀಡಲಾಗುತ್ತದೆ.ಮೂಲಗಳ ಪ್ರಕಾರ ದರ್ಜೆ ಅಥವಾ ಶ್ರೇಣಿಕೃತ ಅಂಪೈರ್ ಗಳ ಆಧಾರದ ಮೇಲೆ ಅವರಿಗೆ ವಾರ್ಷಿಕವಾಗಿ ಮೂವತ್ತರಿಂದ ನಲವತ್ತು ಲಕ್ಷದವರೆಗೆ ಸಂಭಾವನೆ ಇರುತ್ತದೆ ಎಂದು ತಿಳಿಸಿವೆ.

Leave a Reply

%d bloggers like this: