ಅಧಿಕೃತ ಮಾಹಿತಿ, ಈ ಬಾರಿ IPL ನಲ್ಲಿ ಬಲಿಸುವ ಬೆಲ್ಸ್ ಗಳ ಬೆಲೆ ಎಷ್ಟು ಗೊತ್ತಾ

ಸಾಮಾನ್ಯವಾಗಿ ನಮಗೆ ನಮ್ಮ ಇಚ್ಚೆಯ ಕ್ಷೇತ್ರ ಅಥವಾ ಇನ್ಯಾವುದೇ ವಿಚಾರಗಳ ಬಗ್ಗೆ ಪರಿಪೂರ್ಣವಾಗಿ ತಿಳಿದಿರುವುದಿಲ್ಲ‌.ಆದರೆ ನಮ್ಮ ಅಭಿರುಚಿಗಳನ್ನ ದೈನಂದಿನದ ಭಾಗವಾಗಿ ಪರಿಗಣಿಸಿರುತ್ತೇವೆ.ಅಂತೆಯೇ ಕ್ರೀಡೆಗಳ ಬಗ್ಗೆ ಅಪಾರ ಆಸಕ್ತಿ ಇರುತ್ತದೆ.ಅದರಲ್ಲಿಯೂ ಈ ಕ್ರಿಕೆಟ್ ಅನ್ನ ಮಾತ್ರ ಬಿಟ್ಟ ಕಣ್ಣನ್ನ ಮುಚ್ಚದೆಯೇ ನಡೆಯುತ್ತಿರುವ ಪಂದ್ಯದ ನಡುವೆ ಜಾಹೀರಾತು ಬರುವವರೆಗೆ ಒಂದೇ ಸಮನೆ ನಿರಂತರವಾಗಿ ನೋಡುತ್ತಲೇ ಇರುತ್ತೇವೆ. ಆದರೆ ಈ ಕ್ರಿಕೆಟ್ ನಲ್ಲಿ ಬಳಸುವ ಕೆಲವು ಟೆಕ್ನಿಕಲ್ ವರ್ಡ್ ಇರಲಿ ಅದರಲ್ಲಿ ಬಳಸುವ ವಿಕೆಟ್,ಸ್ಟಂಪ್ಸ್ ಗಳ ಬಗ್ಗೆಯೂ ಕೂಡ ತಿಳಿದಿರುವುದಿಲ್ಲ.ಇಂದು ಈ ಲೇಖನದಲ್ಲಿ ಕ್ರಿಕೆಟ್ ಪ್ರಿಯರಿಗೆ ಈ ಸ್ಟಂಪ್ಸ್ ಗಳ ಬಗ್ಗೆ ಮಾಹಿತಿ ನೀಡುತ್ತೇವೆ. ಜಗತ್ತಿನಲ್ಲಿ ಅತ್ಯಂತ ಜನಪ್ರಿಯ ಕ್ರೀಡೆ ಅಂದರೆ ಅದು ಕ್ರಿಕೆಟ್.ಈ ಕ್ರಿಕೆಟ್ ನಲ್ಲಿ ಪ್ರಮುಖವಾಗಿ ಬಳಸುವ ಸ್ಟಂಪ್ ಗಳು ದಶಕಗಳ ಹಿಂದೆ ಮರದಿಂದ ತಯಾರಿಸಲ್ಪಟ್ಟವಾಗಿದ್ದವು.

ಆದರೆ ಈಗ ಬಳಸುವ ಸ್ಟಂಪ್ ಗಳು ಎಲ್.ಇ.ಡಿ. ಗಳದ್ದಾಗಿದೆ.ಈ ಸ್ಟಂಪ್ಸ್ ಗಳನ್ನ ಆಸ್ಟ್ರೇಲಿಯಾ ದೇಶದ ಕೈಗಾರಿಕೋದ್ಯಮಿ ಬ್ರಾಂಟೆ ಎಕೆರ್ಮನ್ ಅವರು ಮೂರು ವರ್ಷಗಳ ಕಾಲ ಸಂಶೋಧನೆ ಮಾಡಿ ಕಂಡು ಹಿಡಿಯುತ್ತಾರೆ.ಪ್ರಸ್ತುತ ಈ ಸ್ಟಂಪ್ಗಳನ್ನ ಆಫ್ರಿಕಾದ ಜಿಂಗ್ ವಿಕೆಟ್ ಸಿಸ್ಟಮ್ಸ್ ಇಂಟರ್ ನ್ಯಾಶನಲ್ ಎಂಬ ಕಂಪನಿಯು ಎಲ್. ಇ.ಡಿ.ಸ್ಟಂಪ್ ಗಳನ್ನ ತಯಾರು ಮಾಡುತ್ತಿದೆ.ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಈ ಎಲ್.ಡಿ.ಡಿ.ಸ್ಟಂಪ್ಗಳನ್ನ 2013 ರಲ್ಲಿ ನಡೆದ ಐಸಿಸಿ ವಿಶ್ವಕಪ್ ಕ್ರಿಕೆಟ್ ನಲ್ಲಿ ಬಳಸಿಕೊಳ್ಳಲಾಯಿತು.ಈ ಎಲ್.ಇ.ಡಿ.ಸ್ಟಂಪ್ ಗಳಿಂದಾಗಿ ಅಂಪೈರ್ ಗಳಿಗೆ ತೀರ್ಪು ನೀಡಲು ಸಹಾಯಕವಾಗುತ್ತವೆ. ಐಪಿಎಲ್ ನಲ್ಲೂ ಈ ಬಾರಿ ಅಧಿಕ ಬೆಳೆಯ ಸ್ಟಂಪ್ಸ್ ಗಳನ್ನ ಬಲಿಸುತ್ತಿದ್ದಾರೆ.

ಇನ್ನು ಈ ಎಲ್.ಇ.ಡಿ ಸ್ಟಂಪ್ ಗಳ ಒಂದು ಸೆಟ್ಟಿನ ಬೆಲೆ ಸರಿ ಸುಮಾರು ನಲವತ್ತು ಯು.ಎಸ್.ಡಾಲರ್ ನಷ್ಟಿದೆ.ಅಂದರೆ ಭಾರತದ ರುಪಾಯಿ ಮೌಲ್ಯಕ್ಕೆ ಒಳಪಡಿಸಿದರೆ ಮೂವತ್ತು ಲಕ್ಷ ಸನಿಹದಷ್ಟು ಬೆಲೆ ತಗಲುತ್ತದೆ.ಈ ಎಲ್.ಇ.ಡಿ ಸ್ಟಂಪ್ ಗಳಲ್ಲಿ ಬ್ಯಾಟರಿ ಬೆಲ್ಸ್ ಇದ್ದು,ಚೆಂಡು ತಾಗಿದೊಡನೆ ಅಟೋಮೆಟಿಕ್ ಆಗಿ ಕೆಂಪು ಬೆಳಕು ತೋರುತ್ತದೆ.ಇದೊಂದು ಬೆಲ್ ಒಂದು ಐಫೋನ್ ಗೆ ಸರಿಸಮವಾಗಿರುತ್ತದೆ.ಈ ಎಲ್.ಇ.ಡಿ ಸ್ಟಂಪ್ ಗಳನ್ನ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಬಳಸುವಂತೆ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಏಳನೇ ಸೀಸನ್ ನಿಂದ ಬಳಸುತ್ತಿದ್ದಾರೆ.

Leave a Reply

%d bloggers like this: