IPL ಲೀಗ್ ನಿಂದ ‘ಬಿಸಿಸಿಐ’ ಗಳಿಸುವ ಆದಾಯ ಎಷ್ಟು ಗೊತ್ತಾ..! ಈ ಬಾರಿ 40ಸಾವಿರ ಕೋಟಿಗಳಿಸಲು ಪ್ಲಾನ್ ಮಾಡಿದ ಬಿಸಿಸಿಐ

ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ನಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಗಳಿಸುವ ಆದಾಯ ಎಷ್ಟು ಗೊತ್ತಾ..! ಹೌದು ಕ್ರಿಕೆಟ್ ಅಂದರೆ ಯುವ ಸಮೂಹಕ್ಕೆ ಮಾತ್ರ ಅದೊಂದು ಕ್ರೇಜ಼್ ಹುಟ್ಟಿಸುವಂತಹ ಕ್ರೀಡೆಯಾಗಿದೆ. ಹೌದು ಜಗತ್ತಿನ ಪ್ರತಿಷ್ಟಿತ ದೇಶಿಯ ಕ್ರಿಕೆಟ್ ಅಂದರೆ ಅದು ಐಪಿಎಲ್ . ಈಗಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ 14 ನೇ ಆವೃತ್ತಿ ಮುಗಿದು, 15 ನೇ ಆವೃತ್ತಿ ಆರಂಭಗೊಳ್ಳಲು ಕೆಲವೇ ತಿಂಗಳುಗಳು ಬಾಕಿ ಉಳಿದಿವೆ. ಅಭಿಮಾನಿಗಳು ಐಪಿಎಲ್ ಪಂದ್ಯ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಈ ಐಪಿಎಲ್ 15 ನೇ ಸೀಸನ್ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ನಲ್ಲಿ ರಿಟೈನ್ ಎಂಬ ಹೊಸ ನಿಯಮವೊಂದನ್ನ ಸೇರಿಸಿದೆ.

ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯ ನಡೆಯುವ ಮೈದಾನದಿಂದ ಹಿಡಿದು ಸ್ಟಾರ್ ಕ್ರಿಕೆಟಿಗರು ನೀಡುವ ಒಂದೊಂದು ವೀಡಿಯೋ ಬೈಟ್ಸ್, ಅವರ ಮುಖ ಚಿತ್ರವಿರುವ ಫೋಟೋ ಕೂಡ ಮಾಧ್ಯಮದಲ್ಲಿ ಕೋಟಿ ಕೋಟಿ ಹಣ ಸಂಪಾದನೆ ಮಾಡುತ್ತವೆ. ಅಷ್ಟರ ಮಟ್ಟಿಗೆ ಈ ಐಪಿಎಲ್ ಕ್ರಿಕೆಟ್ ಪ್ರಮೋಶನ್ ಬಿಜಿ಼ನೆಸ್ ಮಾಡುತ್ತವೆ. ಈಗಾಗಲೇ ಬಿಸಿಸಿಐ ಈ ಐಪಿಎಲ್ 15 ನೇ ಸೀಸನ್ ಕ್ರಿಕೆಟ್ ಪಂದ್ಯಗಳ ಪ್ರಸಾರದ ಹಕ್ಕುಗಳನ್ನ ಮಾರಾಟ ಮಾಡಲು ಟೆಂಡರ್ ಕರೆಯುವ ಯೋಜನೆ ರೂಪಿಸುತ್ತಿದೆ. ಅನೇಕ ಪ್ರತಿಷ್ಟಿತ ಸ್ಪೋರ್ಟ್ಸ್ ವಾಹಿನಿಗಳು ಈ ಐಪಿಎಲ್ 15 ನೇ ಆವೃತ್ತಿಯ ಪಂದ್ಯಗಳ ಪ್ರಸಾರದ ಹಕ್ಕು ಪಡೆಯಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ನೂರಾರು ಕೋಟಿ ನೀಡಲು ಸಿದ್ದವಾಗಿದೆ. ಬಿಸಿಸಿಐ ಅಧ್ಯಕ್ಷರಾದ ಸೌರವ್ ಗಂಗೂಲಿ ಅವರು ಈಗಾಗಲೇ ಈ ಸೀಸನ್ ನಲ್ಲಿ ಬರೋಬ್ಬರಿ ಐವತ್ತು ಸಾವಿರ ಕೋಟಿ ಆದಾಯ ಗಳಿಸುವ ನಿರೀಕ್ಷೆ ಇಟ್ಟಿಕೊಂಡಿದೆ.

ಅದೂ ಕೂಡ ಕೇವಲ ವಾಹಿನಿಯ ಮೂಲಕ ಅಂದರೆ ಪ್ರಸಾರದ ಹಕ್ಕಿನ ಮೂಲಕವೇ ಸರಿ ಸುಮಾರು ನಲವತ್ತು ಸಾವಿರ ಕೋಟಿ ಗಳಿಸುವ ಯೋಜನೆ ಮಾಡಿಕೊಂಡಿದ್ದಾರೆ. ಕಳೆದ ಬಾರಿಯ ಅಂದರೆ 2018 ರಿಂದ 2022 ರವರೆಗೆ ಐಪಿಎಲ್ ಪಂದ್ಯಗಳ ಪ್ರಸಾರದ ಹಕ್ಕನ್ನು ಸ್ಟಾರ್ ಇಂಡಿಯಾ ನೆಟ್ ವರ್ಕ್ 16, 347.50 ಕೋಟಿಗೆ ಒಪ್ಪಂದ ಮಾಡಿಕೊಂಡಿದೆ. ಈ 15 ನೇ ಐಪಿಎಲ್ ಆವೃತ್ತಿಯ ನೇರ ಪ್ರಸಾರಕ್ಕಾಗಿ ಪ್ರಸಿದ್ದ ರಿಲಯನ್ಸ್ ಇಂಡಸ್ಟ್ರಿಸ್ ವಯಾಕಾಮ್ ಮತ್ತು ಸ್ಟಾರ್ ನೆಟ್ ವರ್ಕ್ ವಾಹಿನಿಗಳು ಉತ್ಸುಕತೆ ತೋರಿವೆ. ಒಟ್ಟಾರೆಯಾಗಿ ಬಿಸಿಸಿಐ ಅಧ್ಯಕ್ಷರಾದ ಸೌರವ್ ಗಂಗೂಲಿ ಅವರು ಪ್ರಸಾರದ ಹಕ್ಕಿನಿಂದಾನೇ ಬರೋಬ್ಬರಿ ಐವತ್ತು ಸಾವಿರ ಕೋಟಿ ಗಳಿಸುವ ಉದ್ದೇಶ ಹೊಂದಿದೆ ಎಂದು ತಿಳಿಸಿದ್ದಾರೆ.