ಐಪಿಎಲ್ ಆದಾಯದಲ್ಲಿ ಮತ್ತೊಮ್ಮೆ ಭರ್ಜರಿ ದಾಖಲೆ ಬರೆದ ಎಂಎಸ್‌ ಧೋನಿ

ಐಪಿಎಲ್‌ನ ಮೊದಲ ಸೀಸನ್ನಿಂದಲೂ ಸಿಎಸ್‌ಕೆ ತಂಡವನ್ನು ಮುನ್ನಡೆಸಿದವರು ಧೋನಿಯೇ.ಎರಡು ವರ್ಷ ಸಿ‌ಎಸ್‌ಕೆ ಬ್ಯಾನ್ ಆಗಿದ್ದಾಗ ಹೊರತುಪಡಿಸಿದರೆ ಧೋನಿ ಇಲ್ಲದ ಸಿಎಸ್‌ಕೆನ ಊಹೆ ಮಾಡಲು ಕೂಡ ಸಾಧ್ಯವಿಲ್ಲ ಎನ್ನುವಷ್ಟಿದೆ ಧೋನಿ ಹಾಗೂ ಸಿಎಸ್‌ಕೆ ಬಾಂಧವ್ಯ.ಕಳೆದ ಸೀಸನ್ನಲ್ಲಿ ಸಿ‌ಎಸ್‌ಕೆ ನೀಡಿದ ಕಳಪೆ ಪ್ರದರ್ಶನ ಕಂಡವರು ಸಿ‌ಎಸ್‌ಕೆ ನಾಯಕತ್ವ ಬದಲಾವಣೆ ಆಗುತ್ತದೆ ಧೋನಿ ಸಿಎಸ್‌ಕೆನ ಮುನ್ನಡೆಸಲು ಅಸಮರ್ಥ ಅಂತ ಆಡಿಕೊಂಡರು. ಆದರೂ ಕೂಡ ಸಿ‌ಎಸ್‌ಕೆ ಫ್ರಾಂಚೈಸಿ ಧೋನಿರನ್ನ ಬಿಟ್ಟುಕೊಡುವುದಿಲ್ಲ.ಈ ಬಾರಿಯೂ ನಾಯಕತ್ವದ ಜವಾಬ್ದಾರಿಯು ಧೋನಿ ಹೆಗಲ ಮೇಲೇ ಇರಲಿದೆ ಅನ್ನೋದನ್ನ ಸಿಎಸ್‌ಕೆ ಫ್ರಾಂಚೈಸಿ ಕನ್ಫರ್ಮ್ ಮಾಡಿದೆ.ಧೋನಿ ಕೂಡ ತಾವೇ ನಾಯಕ ಅನ್ನೋದನ್ನ ಸ್ಪಷ್ಟ ಪಡಿಸಿದ್ದಾರೆ.ಇದರೊಂದಿಗೆ ಐಪಿಎಲ್ ರಲ್ಲಿ ಈವರೆಗೂ ಗಳಿಸಿದ ಆದಾಯದ ವಿಷಯದಲ್ಲಿ ಧೋನಿಯೇ ನಂ.೧ ಅಂತೆ.ಹೌದು,ಈ ಮುಂಬರುವ ಸೀಸನ್‌ಗೆ ಬರೋಬ್ಬರಿ 15 ಕೋಟಿ ಪಡೆಯುವ ಮೂಲಕ ಐಪಿಎಲ್‌ ನಲ್ಲಿ ಈವರೆಗೂ ಗಳಿಸಿದ ಆದಾಯ ಬರೋಬ್ಬರಿ 150ಕೋಟಿ ದಾಟಿದೆಯಂತೆ.
ಅದರೊಂದಿಗೆ ಐಪಿಎಲ್ ರಲ್ಲಿ 150ಕೋಟಿ ಆದಾಯ ಗಳಿಸಿದ ಮೊದಲ ಆಟಗಾರ ಎಂಬ ದಾಖಲೆ ಕೂಡ ಎಂಎಸ್‌ಡಿ ಪಾಲಾಗಿದೆ.

ಮೊದಲ ಸೀಸನ್‌ನಿಂದ ಹಿಡಿದು ಇಲ್ಲಿಯವರೆಗೂ ಎಂಎಸ್‌ಡಿ 137 ಕೋಟಿ ಗಳಿಸಿದ್ದು,ಈ ಬಾರಿ 15 ಕೋಟಿ ಸಂಭಾವನೆ ಸೇರಿ ಒಟ್ಟು 152 ಕೋಟಿ ಬೃಹತ್ ಮೊತ್ತ ಗಳಿಸಿದ್ದಾರೆ.ಇನ್ನು ಐಪಿಎಲ್ ರಲ್ಲಿ ಅತಿ ಹೆಚ್ಚು ಆದಾಯ ಗಳಿಸಿರುವ ಎರಡನೇ ಆಟಗಾರ ಬೇರೆ ಯಾರೂ ಅಲ್ಲ ನಮ್ಮ ಆರ್‌ಸಿ‌ಬಿ ನಾಯಕ ವಿರಾಟ್ ಕೊಹ್ಲಿ.ವಿರಾಟ್ ಈ ಮುಂಬರುವ ಸೀಸನ್‌ಗೆ ಬರೋಬ್ಬರಿ 17ಕೋಟಿ ಸಂಭಾವನೆ ಪಡೆಯಲಿದ್ದಾರೆ.ಇದು ಎಂಎಸ್‌ಡಿ ಗಿಂತ ಜಾಸ್ತಿ ಆದರೂ ವಿರಾಟ್ ಈವರೆಗೂ ಐಪಿಎಲ್ ರಲ್ಲಿ ಗಳಿಸಿದ ಆದಾಯ ಈ ಸೀಸನ್ನಿನ 17 ಕೋಟಿ ಸೇರಿಸಿ 143.2 ಕೋಟಿ ಅಂತೆ.ಇನ್ನೂ ಭಾರತದ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್‌ ‌ಮತ್ತೊಬ್ಬ ದಿಗ್ಗಜ ಆಟಗಾರ, ಮುಂಬಯಿ ನಾಯಕ ರೋಹಿತ್ ಶರ್ಮಾ ಪ್ರತಿ ಸೀಸನ್ನಿಗೂ 15 ಕೋಟಿ ಆದಾಯ ಗಳಿಸುತ್ತಿದ್ದು ಈ ವರ್ಷದ ಸಂಭಾವನೆ ಸೇರಿದರೆ ಒಟ್ಟಾರೆ ಐಪಿಎಲ್ ರಲ್ಲಿ 146.6 ಕೋಟಿ ಆದಾಯ ಗಳಿಸಿದ್ದಾರೆ ಅನ್ನಬಹುದು.ಒಟ್ನಲ್ಲಿ ಐಪಿಎಲ್ ರಲ್ಲಿ ಅತಿಹೆಚ್ಚು ಆದಾಯ ಗಳಿಸಿದವರ ಪಟ್ಟಿಯಲ್ಲಿ ಎಂ.ಎಸ್.ಡಿ ನಂ.೧,ರೋಹಿತ್ ನಂ.೨,ಕೊಹ್ಲಿ ನಂ.೩. ಐಪಿಎಲ್ ಹದಿನಾಲ್ಕನೇ ಸೀಸನ್‌ಗೆ ಸಿದ್ಧತೆ.ಈಗ ಸಧ್ಯಕ್ಕೆ ಬಿಸಿಸಿಐ ಇಂಗ್ಲೆಂಡ್ ಸರಣಿಯ ಆಯೋಜನೆಯಲ್ಲಿ ಬ್ಯುಸಿ‌.ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮುಗಿದ ಮಾರನೇ ದಿನವೇ ಐಪಿಎಲ್ ಮಿನಿ ಹರಾಜಿದೆ.ಅದಕ್ಕೆ ಅಭಿಮಾನಿಗಳು ರೆಡಿಯಾಗಿ.

Leave a Reply

%d bloggers like this: