IPL 2022 ಮೆಗಾ ಹರಾಜಿಗೆ ಆಟಗಾರರ ಪಟ್ಟಿ ಬಿಡುಗಡೆ, ಯಾವ ಆಟಗಾರರಿಗೆ ಎಷ್ಟು ಬೆಲೆ, 1000 ಕ್ಕೂ ಹೆಚ್ಚು ಆಟಗಾರರು ನೋಂದಾಯಿಸಿಕೊಂಡಿದ್ದಾರೆ

ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ 15 ನೇ ಆವೃತ್ತಿಯ ಆರಂಭವಾಗುವುದಕ್ಕೆ ಕೆಲವು ತಿಂಗಳಷ್ಟೇ ಬಾಕಿ ಉಳಿದಿವೆ. ಈ ನಿಟ್ಟಿನಲ್ಲಿ ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡದ ಆಟಗಾರರ ಹೆಸರಿನ ಪಟ್ಟಿಯನ್ನ ಇತ್ತೀಚೆಗೆ ತಾನೇ ಬಿಡುಗಡೆ ಮಾಡಿತ್ತು. ಇನ್ನು ಉಳಿದಂತೆ ದೇಶಿಯ ಮತ್ತು ವಿದೇಶಿಯ ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಹರಾಜು ಪ್ರಕ್ರಿಯೆಗೆ ತಮ್ಮನ್ನು ನೋಂದಾಯಿಸಿಕೊಂಡಿದ್ದಾರೆ. 2022 ರ ಐ.ಪಿ.ಎಲ್ ಕ್ರಿಕೆಟ್ 15 ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಇದೇ ಫೆಬ್ರವರಿ 12 ಮತ್ತು 13 ರಂದು ನಡೆಯಲಿದೆ. ಈ ಬಾರಿ ವಿಶೇಷ ಅಂದರೆ ಹೆಚ್ಚುವರಿಯಾಗಿ ಎರಡು ನೂತನ ಫ್ರಾಂಚೈಸಿ ತಂಡಗಳು ಸೇರ್ಪಡೆಯಾಗಿವೆ. ಹೌದು ನೂತನ ಫ್ರಾಂಚೈಸಿಗಳಾದ ಲಖನೌ ತಂಡ ಮತ್ತು ಅಹಮದಾಬಾದ್ ಫ್ರಾಂಚೈಸಿ ತಂಡಗಳು ತಮ್ಮ ಟೀಮ್ ಕ್ಯಾಪ್ಟನ್ ಯಾರೆಂಬುದನ್ನ ಬಹಿರಂಗ ಪಡಿಸಿವೆ. ಅಹಮದಾಬಾದ್ ತಂಡದಿಂದ ಹಾರ್ಧಿಕ್ ಪಾಂಡ್ಯ ಅವರನ್ನ ಬರೋಬ್ಬರಿ 15 ಕೋಟಿಗೆ ಖರೀದಿ ಮಾಡಿದರೆ, ಲಖನೌ ಫ್ರಾಂಚೈಸಿ ತಂಡ ಹದಿನೇಳು ಕೋಟಿ ನೀಡಿ ಕನ್ನಡಿಗ ಕೆ.ಎಲ್‌. ರಾಹುಲ್ ಅವರನ್ನ ತನ್ನ ತಂಡದ ಕ್ಯಾಪ್ಟನ್ ಆಗಿ ನೇಮಿಸಿಕೊಂಡಿದೆ.

ಈಗಾಗಲೇ ಎಲ್ಲಾ ಉಳಿದ ಫ್ರಾಂಚೈಸಿ ತಂಡಗಳು ಬಿಸಿಸಿಐ ಪರಿಚಯಿಸಿರುವ ರೀಟೈನ್ ನಿಯಮದಡಿಯಲ್ಲಿ ತಮ್ಮ ನೆಚ್ಚಿನ ಆಟಗಾರರನ್ನು ಉಳಿಸಿಕೊಂಡಿದೆ. ಅವರುಗಳ ಪಟ್ಟಿಯನ್ನು ಕೂಡ ಪ್ರಕಟ ಮಾಡಿದೆ. ಈ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ 15 ನೇ ಆವೃತ್ತಿಯ ಹರಾಜು ಪ್ರಕ್ರಿಯೆಯಲ್ಲಿ ಸರಿ ಸುಮಾರು 1214 ಆಟಗಾರರು ನೋಂದಾಯಿಸಿಕೊಂಡಿದ್ದಾರಂತೆ. ಇದರಲ್ಲಿ ಒಬ್ಬೊಬ್ಬ ಆಟಗಾರರಿಗೇ ಒಂದೊಂದು ಮೌಲ್ಯವನ್ನೊಂದಿದೆ. ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಹಾಲ್, ದೀಪಕ್ ಚಹಾರ್, ಶಿಖರ್ ಧವನ್, ಶ್ರೇಯಸ್ ಅಯ್ಯರ್, ಮೊಹಮ್ಮದ್ ಶಮಿ, ದೇವದತ್ ಪಡಿಕ್ಕಲ್, ಕ್ರುನಾಲ್ ಪಾಂಡ್ಯ, ಹರ್ಷಲ್ ಪಟೇಲ್, ಸುರೇಶ್ ರೈನಾ, ಅಂಬಟಿ ರಾಯುಡು, ಶಾರ್ದುಲ್ ಠಾಕೂರ್, ರಾಬಿನ್ ಉತ್ತಪ್ಪ, ಉಮೇಶ್ ಯಾದವ್, ದಿನೇಶ್ ಕಾರ್ತಿಕ್, ಡೇವಿಡ್ ವಾರ್ನರ್, ಆಡಂ ಜಂಪಾ, ಕ್ರಿಸ್ ಜೋರ್ಡನ್, ಗ್ರೈಗ್ ಓವರ್ಟನ್, ಆದಿಲ್ ರಶೀದ್, ಜೇಸನ್ ರಾಯ್, ಮಾರ್ಕ್ ವುಡ್, ಎವಿನ್ ಲೆವೀಸ್ ಮ, ಡೇವಿಡ್ ವಿಲ್ಲೆ ಈ ಆಟಗಾರರು ಎರಡು ಕೋಟಿಯ ವಿಭಾಗದಲ್ಲಿ ಲಭ್ಯವಾಗಿದ್ದಾರೆ.

ಅದರಂತೆ ಒಂದೂವರೆ ಕೋಟಿ ವಿಭಾಗದಲ್ಲಿ ಇಶಾಂತ್ ಶರ್ಮಾ, ನಿಕೋಲಸ್ ಪೂರನ್, ಜೇಸನ್ ಹೋಲ್ಡರ್, ಶಿಮ್ರೋನ್ ಹೆಟ್ಮೇರ್, ಟಿಮ್ ಸೌಥಿ, ಕಾಲಿನ್ ಮುನ್ರೋ, ಇಯಾನ್ ಮಾರ್ಗನ್, ಕೇನ್ ರಿಚರ್ಡ್ ಸನ್, ಅಮಿತ್ ಮಿಶ್ರಾ ಇದ್ದಾರೆ. ಜೊತೆಗೆ ಒಂದು ಕೋಟಿ ಬೆಲೆಯಲ್ಲಿ ಲಭ್ಯವಿರುವ ಆಟಗಾರರು ಅಂದರೆ ಮಿಚೆಲ್ ಸ್ಯಾಂಟನರ್, ಆಂಡ್ರೋ ಟೈ, ಲ್ಯಾಮ್ ಲಿವಿಂಗ್ ಸ್ಟೋನ್, ಜಯಂತ್ ಯಾದವ್, ವೃದ್ದಿಮಾನ್ ಸಾಹ, ಅಜಿಂಕ್ಯಾ ರಹಾನೆ, ಮನೀಶ್ ಪಾಂಡ್ಯ ಇತ್ಯಾದಿ ಆಟಗಾರರಿದ್ದಾರೆ. ಒಟ್ಟಾರೆಯಾಗಿ ದೇಶಿಯ ಪ್ರಸಿದ್ದ ಕ್ರಿಕೆಟ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಕ್ರೇಜ಼್ ಇನ್ನಷ್ಟೇ ಆರಂಭವಾಗಬೇಕಿದೆ.

Leave a Reply

%d bloggers like this: