IPL 2022: ಹರಾಜಿಗೂ ಮುನ್ನ ಉಳಿಸಿಕೊಳ್ಳುವ ಆಟಗಾರರ ಸಂಖ್ಯೆ ಮತ್ತು ಪರ್ಸ್ ಗಾತ್ರ ಹೆಚ್ಚಿಸಿದ ಐಪಿಎಲ್ ಮಂಡಳಿ

ನಮಸ್ಕಾರ ಸ್ನೇಹಿತರೆ ಇಂಡಿಯನ್ ಪ್ರೀಮಿಯರ್ ಲೀಗ್ ಐಪಿಎಲ್ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನೋಡೋಣ. ಪ್ರಪಂಚದ ಅತೀ ದೊಡ್ಡ ಲೀಗ್ ಎಂಬುದು ನಿಮಗೆಲ್ಲ ಗೊತ್ತೇ ಇದೆ. ಜಗತ್ತಿನ ಪ್ರತಿಷ್ಟಿತ ದೇಶಿಯ ಕ್ರಿಕೆಟ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ 15 ನೇ ಸೀಸನ್ ಪ್ರಾರಂಭವಾಗುವುದಕ್ಕೆ ಮೊದಲು ಬಿಸಿಸಿಐ ಒಂದಷ್ಟು ಹೊಸ ನಿಯಮಗಳನ್ನು ಸೇರಿಸಿದೆ.ಐಪಿಎಲ್ 14 ನೇ ಸೀಸನ್ ಸಿಎಸ್ ಕೆ ಟ್ರೋಫಿ ಎತ್ತಿ ಹಿಡಿಯುವ ಮೂಲಕ ಮುಕ್ತಾಯಗೊಂಡಿದೆ. ಇದುವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ನಲ್ಲಿ ಎಂಟು ಫ್ರಾಂಚೈಸಿ ತಂಡಗಳು ಪಾಲ್ಗೊಳ್ಳುತ್ತಿದ್ದವು.ಇದೀಗ 2022 ರ ಐಪಿಎಲ್ ಕ್ರಿಕೆಟ್ ನಲ್ಲಿ ಹೊಸದಾಗಿ ಇನ್ನೆರಡು ಹೊಸ ತಂಡಗಳು ಸೇರ್ಪಡೆಗೊಳ್ಳಲಿದೆ. ಹೊಸ ನಿಯಮದಡಿಯಲ್ಲಿ ನಾಲ್ಕು ಜನ ಆಟಗಾರರನ್ನ ಮಾತ್ರ ರಿಟೇನ್ ಮಾಡಿಕೊಳ್ಳುವುದಕ್ಕೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಇದರಲ್ಲಿ ಮೂವರು ಭಾರತ ದೇಶದ ಆಟಗಾರರನ್ನು ಮತ್ತು ಇಬ್ಬರು ವಿದೇಶಿ ಆಟಗಾರರನ್ನು ತಮ್ಮ ತಂಡದಲ್ಲಿ ಇರಿಸಿಕೊಳ್ಳಬಹುದು.

ಇನ್ನು ಈ ಆರ್.ಟಿ.ಎಮ್ ಅಂದರೆ ರೈಟ್ ಟು ಮ್ಯಾಚ್ ರೂಲ್ಸ್ ನಲ್ಲಿ ಈಗಗಾಲೇ ತಮ್ಮ ತಂಡದಲ್ಲಿ ಅಡಿದ ಕನಿಷ್ಟ ನಾಲ್ಕು ಆಟಗಾರರನ್ನು ಮಾತ್ರ ಬಿಡ್ ನಲ್ಲಿ ಹರಾಜಾದ ಮೊತ್ತವನ್ನು ನೀಡಿ ತಮ್ಮ ಆಟಗಾರರನ್ನು ತಮ್ಮಲ್ಲೇ ಉಳಿಸಿಕೊಳ್ಳುವ ಅವಕಾಶವಿದೆ. ಒಬ್ಬ ಆಟಗಾರನಿಗೆ ಗರಿಷ್ಟ ತೊಂಭತ್ತು ಕೋಟಿವರೆಗೆ ಬಿಡ್ ಮಾಡಬಹುದಾಗಿದೆ.ಇದೇ ಅಕ್ಟೋಬರ್ 25 ರಂದು ಈ ಹೊಸ ನಿಯಮವನ್ನು ಬಿಸಿಸಿಐ ಅಧಿಕೃತವಾಗಿ ಘೋಷಣೆ ಮಾಡಲಿದೆ.ಇನ್ನು ಈ ಆಟಗಾರರ ಬಿಡ್ ಪ್ರಕ್ರಿಯೆಯನ್ನು ಇದೇ ಅಕ್ಟೋಬರ್ 31 ರಂದು ನಡೆಸಲಿದೆ.ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಮತ್ತು ಅಶರ ಪತಿ ಸ್ಟಾರ್ ನಟ ರಣ್ ವೀರ್ ಸಿಂಗ್ ಹೊಸ ತಂಡವನ್ನು ಹೊಂದಲು ಬಿಡ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಒಟ್ಟಾರೆಯಾಗಿ ಸದ್ಯಕ್ಕೆ ನಡೆಯುತ್ತಿರುವ ಟಿ-ಟ್ವೆಂಟಿ ವಿಶ್ವಕಪ್ ಮೊದಲ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಂತರ ಈ ಐಪಿಎಲ್ ಕ್ರಿಕೆಟ್ ನಲ್ಲಿ ಒಂದಷ್ಟು ನಿಯಮಗಳನ್ನು ಸೇರ್ಪಡಿಸಿರುವ ಬಗ್ಗೆ ಬಿಸಿಸಿಐ ಸ್ಪಷ್ಟವಾಗಿ ಮಾಹಿತಿ ನೀಡಲಿದೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಈ ನಮ್ಮ ಲೇಖನದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.