ಐಪಿಎಲ್ 2022 ಹರಾಜಿನಲ್ಲಿ ಶಕೀಬ್ ಅಲ್ ಹಾಸನ್ ರನ್ನು ಖರೀದಿಸದೆ ಇದ್ದಿದ್ದಕ್ಕೆ ಅವರ ಮುದ್ದಾದ ಪತ್ನಿ ಹೇಳಿದ್ದೆ ಬೇರೆ? ನಿಜಕ್ಕೂ ಹೇಳಿದ್ದೇನು ಗೊತ್ತಾ?

ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ 2022 ರ ಹರಾಜು ಪ್ರಕ್ರಿಯೆಯಲ್ಲಿ ಬಾಂಗ್ಲಾ ದೇಶದ ಗ್ರೇಟೆಸ್ಟ್ ಆಲ್ ರೌಂಡರ್ ಆಟಗಾರರನ್ನ ಯಾವ ಫ್ರಾಂಚೈಸಿಗಳು ಕೂಡ ತೆಗೆದುಕೊಳ್ಳದಿರಲು ಕಾರಣವೇನು ಗೊತ್ತಾ..! ದೇಶಿಯ ಕ್ರಿಕೆಟ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ 15 ನೇ ಆವೃತ್ತಿಯ ಆರಂಭಕ್ಕೆ ಇನ್ನು ಕೆಲವೇ ತಿಂಗಳು ಬಾಕಿಯಿದೆ. ಈಗಾಗಲೇ ಬಿಸಿಸಿಐ ಎಲ್ಲಾ ರೀತಿಯ ಪೂರ್ವ ಸಿದ್ದತೆಯನ್ನು ಕೂಡ ನಡೆಸುತ್ತಿದೆ. ಅದಕ್ಕೆ ತಕ್ಕಂತೆ ಐಪಿಎಲ್ ಕ್ರಿಕೆಟ್ ವಿವಿಧ ಫ್ರಾಂಚೈಸಿ ತಂಡಗಳು ಕೂಡ ಹರಾಜು ಪ್ರಕ್ರಿಯೆಯಲ್ಲಿ ತಮಗೆ ಅಗತ್ಯ ಸೂಕ್ತವಾದ ಆಟಗಾರರನ್ನು ಕೂಡ ಕೋಟ್ಯಾಂತರ ರೂ. ಗಳ ನೀಡಿ ಖರೀದಿ ಮಾಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ 15 ನೇ ಆವೃತ್ತಿಯಲ್ಲಿ ಬಿಸಿಸಿಐ ರಿಟೈನ್ ಎಂಬ ಹೊಸ ನಿಯಮ ತಂದು ಫ್ರಾಂಚೈಸಿಗಳಿಗೆ ಕಟ್ಟು ನಿಟ್ಟಾಗಿ ಪಾಲಿಸುವಂತೆ ಕೂಡ ನೋಡಿಕೊಂಡಿತು.

ಈ ರಿಟೈನ್ ನಿಯಮದ ಪ್ರಕಾರ ತಮ್ಮ ತಂಡದ ಆಟಗಾರರನ್ನ ಹರಾಜು ಪ್ರಕ್ರಿಯೆಗೆ ಒಳಪಡಿಸದೇ ಅವರ ಮೂಲ ಬೆಲೆಗಿಂತ ಆಟಗಾರರ ಗರಿಷ್ಟ ಬೇಡಿಕೆಯ ಅನುಸಾರ ಅವರಿಗೆ ಸಂಭಾವನೆ ನೀಡಿ ತಮ್ಮ ತಂಡದಲ್ಲೇ ಉಳಿಸಿಕೊಳ್ಳಬಹುದಾಗಿರುತ್ತದೆ. ಅಂತೆಯೇ ವಿವಿಧ ಫ್ರಾಂಚೈಸಿಗಳು ಈಗಾಗಲೇ ಕಳೆದ ಸೀಸನ್ ಗಳಿಂದ ಉತ್ತಮವಾಗಿ ಪ್ರದರ್ಶನ ತೋರಿದ ಆಟಗಾರರನ್ನ ತಮ್ಮಲ್ಲೇ ಉಳಿಸಿಕೊಂಡು ಅವರ ಹೆಸರುಗಳನ್ನು ಕೂಡ ಘೋಷಣೆ ಮಾಡಿತ್ತು. ಇದೀಗ ಉಳಿದಂತಹ ಆಟಗಾರರು ಬಿಡ್ಡಿಂಗ್ ನಲ್ಲಿ ತಮ್ಮ ಹೆಸರನ್ನ ನೊಂದಾಯಿಸಿಕೊಂಡಿದ್ದರು. ಅಂತೆಯೇ ಈ ಆಟಗಾರರನ್ನ ಐಪಿಎಲ್ ಕ್ರಿಕೆಟ್ ನಲ್ಲಿ ಭಾಗವಹಿಸುವ ಎಲ್ಲಾ ತಂಡಗಳು ಹರಾಜು ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡು ತಮಗೆ ಬೇಕಾದ ಆಟಗಾರರನ್ನು ಖರೀದಿ ಮಾಡಿದ್ದಾರೆ.

ಆದರೆ ಬಾಂಗ್ಲಾದೇಶದ ಗ್ರೇಟೆಸ್ಟ್ ಆಲ್ -ರೌಂಡರ್ ಆಟಗಾರ ಎಂದೇ ಹೆಸರಾಗಿರುವ ಶಕಿಬ್ ಅಲ್ ಹಸನ್ ಅವರನ್ನ ಯಾವ ಫ್ರಾಂಚೈಸಿ ತಂಡಗಳು ಕೂಡ ಖರೀದಿ ಮಾಡಿಲ್ಲ. ಇದು ನಿಜಕ್ಕೂ ಕೂಡ ಅವರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸುತ್ತದೆ. ಏಕೆಂದರೆ ಶಕಿಬ್ ಅಲ್ ಹಸನ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿರುತ್ತಾರೆ. ಇವರ ಸಾಮರ್ಥ್ಯವನ್ನು ಗಮನಿಸುವುದಾದರೆ ಇದುವರೆಗೆ ಶಕಿಬ್ ಅವರು 71 ಪಂದ್ಯಗಳಲ್ಲಿ ಆಟವಾಡಿದ್ದು, ಅದರಲ್ಲಿ 19.8 ಸರಾಸರಿ ಮತ್ತು 124.5 ಸ್ಟ್ರೈಕ್ ರೇಟ್ ನಲ್ಲಿ 793 ರನ್ ಕಲೆ ಹಾಕಿದ್ದಾರೆ.

ಜೊತೆಗೆ 29.2 ಮತ್ತು 7.43 ರ ಎಕಾನಮಿ ಯಲ್ಲಿದ್ದು 63 ವಿಕೆಟ್ ಪಡೆದು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕೂಡ ಉತ್ತಮ ಪ್ರದರ್ಶನ ತೋರಿದ್ದಾರೆ. ಹೀಗಿದ್ದರು ಕೂಡ ಅನುಭವಿ ಕ್ರಿಕೆಟಿಗ ಸ್ಪಿನ್ನರ್ ಆಗಿರುವ ಶಕೀಬ್ ಅವರನ್ನ ಯಾವ ತಂಡವೂ ಕೂಡ ಖರೀದಿ ಮಾಡಿಲ್ಲ. ಇದಕ್ಕೆ ಶಕೀಬ್ ಅವರ ಪತ್ನಿ ಉಮ್ಮೆ ಅಹ್ಮದ್ ಶಿಶಿರ್ ಅವರು ತಮ್ಮ ಸೋಶೀಯಲ್ ಮೀಡಿಯಾ ಖಾತೆಯಲ್ಲಿ ಶಕಿಬ್ ಅವರನ್ನ ಖರೀದಿ ಮಾಡಲು ಮುಂಚೇನೇ ಎರಡು ಫ್ರಾಂಚೈಸಿ ತಂಡಗಳು ಭೇಟಿ ಆಗಿದ್ದವು. ಆದರೆ ಶ್ರೀಲಂಕಾದ ಸರಣಿ ಕ್ರಿಕೆಟ್ ಇರುವುದರಿಂದ ಶಕಿಬ್ ಅವರಿಗೆ ಐಪಿಎಲ್ ಪಂದ್ಯಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲಾಗುವುದಿಲ್ಲ.

ಈ ವಿಚಾರವನ್ನು ತಿಳಿದ ಫ್ರಾಂಚೈಸಿ ತಂಡಗಳು ಶಕಿಬ್ ಅವರನ್ನ ಹರಾಜು ಪ್ರಕ್ರಿಯೆಯಲ್ಲಿ ಖರೀದಿ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇನ್ನು ಶಕಿಬ್ ಅವರು ಹರಾಜಿನಲ್ಲಿ ಎರಡು ಕೋಟಿ ಮೂಲ ಬೆಲೆಯನ್ನೊಂದಿದ್ದರು. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಈ ನಮ್ಮ ಲೇಖನದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.