ಇನ್ಫೋಸಿಸ್ ಸಂಸ್ಥೆಗೆ ವಿಧಾಯ ಹೇಳುತ್ತಿರುವ ಸುಧಾಮೂರ್ತಿ! ಅಸಲಿ ಕಾರಣವೇನು ಗೊತ್ತಾ?

ಭಾರತೀಯ ಐಟಿ ಕ್ಷೇತ್ರದ ವೈಭವದ ಸಂಕೇತವಾಗಿರುವ ಕರ್ನಾಟಕದ ಹೆಮ್ಮೆಯ ಐಟಿ ದಿಗ್ಗಜ ಸಂಸ್ಥೆಯಾಗಿರುವ ಇನ್ಫೋಸಿಸ್ ಕಂಪನಿಯ ಸುಧಾಮೂರ್ತಿ ಅವರು ಇದೇ ಸ್ವಯಂ ನಿವೃತ್ತಿ ಘೋಷಣೆ ಮಾಡುತ್ತಿದ್ದಾರಂತೆ..! ಇಡೀ ವಿಶ್ವವೇ ಭಾರತ ದೇಶದತ್ತ ತಿರುಗಿ ನೋಡುವ ಹಾಗೆ ಮಾಡಿದಸಾಫ್ಟ್ ವೇರ್ ಕಂಪನಿಗಳಲ್ಲಿ ಇನ್ಫೋಸಿಸ್ ಪ್ರಮುಖ ಪಾತ್ರವಹಿಸುತ್ತದೆ. ನಾರಾಯಣ ಮೂರ್ತಿ ಅವರ ಕನಸಿನ ಕೂಸಾಗಿದ್ದ ಇನ್ಫೋಸಿಸ್ ಕಂಪನಿಯನ್ನು ಆರಂಭಿಸುವ ಬಗ್ಗೆ ಆಲೋಚನೆ ಬಂದಿದ್ದು 1981 ರಲ್ಲಿ. ನಾರಾಯಣ್ ಮೂರ್ತಿ ಅವರ ಮನೆಯಲ್ಲಿ ಅವರ ಆಪ್ತ ಗೆಳೆಯರೆಲ್ಲಾ ಒಂದು ಹೊಸ ಕಂಪನಿಯನ್ನು ಆರಂಭಿಸುವ ಬಗ್ಗೆ ಚರ್ಚೆ ನಡೆಸುತ್ತಾರೆ. ಅದಾದ ಆರು ತಿಂಗಳ ಬಳಿಕ ಇನ್ಫೋಸಿಸ್ ಕಂಪನಿಯನ್ನು ನೋಂದಾವಣೆ ಮಾಡಿಸಿಕೊಳ್ಳುತ್ತಾರೆ. ತದ ನಂತರ ಸಹ ಸಂಸ್ಥಾಪಕರಾದ ಎನ್.ಎಸ್. ರಾಘವನ್ ಅವರ ಮುಂಬೈ ನಿವಾಸದಲ್ಲಿ ರಿಜಿಸ್ಟರ್ಡ್ ಕಛೇರಿಯನ್ನು ಆರಂಭಿಸುತ್ತಾರೆ.

ಇದಕ್ಕೆ ಪಾಲುದಾರರಾಗಿ ನಂದನ್ ನಿಲೇಕಣಿ,ಎನ್.ಎಸ್.ರಾಘವನ್,ಗೋಪಾಲ್ ಕೃಷ್ಣನ್, ಎಸ್.ಡಿ.ಶಿಬುಲಾಲ್, ಕೆ.ದಿನೇಶ್,ಅಶೋಕ್ ಅರೋರ ಅವರು ಇನ್ಫೋಸಿಸ್ ಸಂಸ್ಥೆಯ ಸಹ ಸಂಸ್ಥಾಪಕರಾಗುತ್ತಾರೆ. ಇನ್ಫೋಸಿಸ್ ಕಂಪನಿಯ ಪ್ರಾರಂಭಿಕ ಬಂಡವಾಳ ಕೇವಲ 250 ಡಾಲರ್ ಅಷ್ಟೇ ಆಗಿತ್ತು.ಇನ್ಫೋಸಿಸ್ ಆರಂಭಿಸಿದ ಸಂಧರ್ಭದಲ್ಲಿ ನಾರಾಯಣ ಮೂರ್ತಿ ಅವರ ಬಳಿ ಹಣ ವಿರಲಿಲ್ಲ.ಸುಧಾ ಅವರಿಂದಲೇ ಈ ಹಣವನ್ನು ಪಡೆದಿರುತ್ತಾರೆ.ಸುಧಾ ಅವರೊಂದಿಗೆ ಮೂರ್ತಿ ಅವರು ಹೊರಗೆ ಊಟಕ್ಕೆಂದು ಹೋದಾಗ ಸುಧಾ ಅವರ ಹತ್ತಿರ ನೀನು ನನ್ನ ಭಾಗದ ಹಣವನ್ನು ಕೊಡು,ತದ ನಂತರ ಮರಳಿಸುತ್ತೇನೆ ಎಂದು ತಿಳಿಸುತ್ತಿದ್ದರಂತೆ.

ಇದಾದ ಮೂರು ವರ್ಷಗಳ ಬಳಿಕ ನಾರಾಯಣ್ ಮೂರ್ತಿ ಅವರನ್ನು ಮದುವೆಯಾದ ಸುಧಾ ಮೂರ್ತಿ ಅವರು ತಾವು ನೀಡಿದ ಹಣವನ್ನೆಲ್ಲಾ ಬರೆದಿಟ್ಟಿದ್ದರಂತೆ.ಆಗ ಆ ಹಣದ ಮೊತ್ತ ನಾಲ್ಕು ಸಾವಿರ ರೂ. ಆಗಿತ್ತು. ಮದುವೆಯಾದ ಬಳಿಕ ಈ ಸಾಲದ ರೆಕಾರ್ಡ್ ಬುಕ್ ಅನ್ನು ಹರಿದಾಕಿದ್ದರಂತೆ. ಇವರಿಬ್ಬರ ಮದುವೆ ನಡೆದದ್ದು 1978 ರಲ್ಲಿ. ಆ ಸಮಯದಲ್ಲಿ ನಾರಾಯಣ್ ಮೂರ್ತಿ ಅವರು ಪಾಟ್ನಿ ಕಂಪ್ಯುಟರ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು. ತದ ನಂತರ ಸುಧಾ ಮೂರ್ತಿ ಅವರ ಬಳಿ ಹತ್ತು ಸಾವಿರ ಪಡೆದ ನಾರಾಯಣ್ ಮೂರ್ತಿ ಅವರು ಇನ್ಫೋಸಿಸ್ ಕಂಪನಿಯನ್ನು ಆರಂಭಿಸಿದರು.ಸುಧಾ ಮೂರ್ತಿ ಅವರ ಈ ಹತ್ತು ಸಾವಿರ ಅವರ ಉಳಿತಾಯದ ಹಣವಾಗಿತ್ತು. ಮೂರ್ತಿ ಅವರು 1981 ರಲ್ಲಿ ಪುಣೆಯಲ್ಲಿ ಇನ್ಫೋಸಿಸ್ ಕಂಪನಿಯ ಮೊದಲ ಆಪರೇಟಿಂಗ್ ಕಛೇರಿಯನ್ನಾಗಿ ಮಾಡುತ್ತಾರೆ.

ಇದರ ನಡುವೆ ಸುಧಾಮೂರ್ತಿ ಅವರು ವಾಲ್ ಚಾಂದೂರ್ ಪಾಪ್ ಇಂಡಸ್ಟ್ರಿಯಲ್ಲಿ ಸಿಸ್ಟಮ್ ಅನಾಲಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.1983 ರಲ್ಲಿ ಇನ್ಫೋಸಿಸ್ ಕಂಪನಿಯನ್ನು ಪುಣೆಯಿಂದ ಬೆಂಗಳೂರಿಗೆ ವರ್ಗಾಯಿಸಲಾಯಿತು. ಆಗ ಮೊದಲ ಕ್ಲೈಂಟ್ ಆಗಿ ಡೇಟಾ ಬೇಸಿಕ್ಸ್ ಕಾರ್ಪೋರೇಷನ್ ಕೈ ಜೋಡಿಸಿತು. ಈ ಸಂಧರ್ಭದಲ್ಲಿ ಇನ್ಫೋಸಿಸ್ ಸಂಸ್ಥೆಯಲ್ಲಿ ಒಂದು ಟೆಲಿಫೋನ್ ಕೂಡ ಇರಲಿಲ್ಲ.ಆದಾದ ಬಳಿಕ ಮೊಟ್ಟ ಮೊದಲ ಬಾರಿಗೆ ಕಂಪ್ಯೂಟರ್ ಒಂದನ್ನು ಖರೀದಿಸಿದರು. ಇದಾದ ಬಳಿಕ ಕಂಪನಿಯು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು.ತದ ನಂತರ ಕರ್ಟ್ಸ್ ಮೋಲ್ ಅಸೋಸಿಯೇಟ್ಸ್ ನೊಂದಿಗೆ ಕೂಡು ಬಂಡವಾಳ ಸಂಸ್ಥೆಯಾಗಿ ಕೈಜೋಡಿಸಿತು. ಆದರೆ ಈ ಸಂಸ್ಥೆಯೊಂದಿಗೆ ಮಾಡಿಕೊಂಡ ಒಪ್ಪಂದ ಕೇವಲ ಐದೇ ವರ್ಷದಲ್ಲಿ 1989 ರ ಹೊತ್ತಿಗೆ ಮುರಿದು ಬಿತ್ತು.

ಇನ್ಫೋಸಿಸ್ ಸಂಸ್ಥೆ ಆರಂಭವಾದ ಕೇವಲ 8 ವರ್ಷಗಳಲ್ಲಿ ಗಳಿಸಿದ ಸಂಪತ್ತನ್ನೆಲ್ಲಾ ಕಳೆದುಕೊಂಡು ನಷ್ಟದ ಸುಳಿವಿಗೆ ಸಿಲುಕಿತು. ಕಂಪನಿಯು ಮುಚ್ಚುವ ಹಂತಕ್ಕೆ ತಲುಪಿತು.ಈ ಸಂಧರ್ಭದಲ್ಲಿ ಸಹ ಸಂಸ್ಥಾಪಕರಾದ ಅಶೋಕ್ ಅರೋರಾ ಅವರು ಇನ್ಫೋಸಿಸ್ ನಿಂದ ಹೊರ ನಡೆದರು.ಈ ಸಂಕಷ್ಟದ ಸಂಧರ್ಭದಲ್ಲಿ ನಾರಾಯಣ್ ಮೂರ್ತಿ ಅವರು ತನ್ನ ಪಾಲುದಾರರನ್ನು ಕರೆದು ಕಂಪನಿಯನ್ನು ಬಿಟ್ಟು ಹೋಗುವವರು ಹೋಗಬಹುದು.ಆದರೆ ನಾನು ಈ ಸಂಸ್ಥೆಯನ್ನು ಮುನ್ನೆಡೆಸುತ್ತೇನೆ ಎಂದು ಹೇಳುತ್ತಾರೆ.ಆಗ ಉಳಿದ ಪಾಲುದಾರರು ನಾವೂ ಕೂಡ ನಿಮ್ಮ ಜೊತೆ ನಿಲ್ಲುತ್ತೇವೆ ಎಂದು ಕೈ ಜೋಡಿಸುತ್ತಾರೆ.ಇದಾದ ಬಳಿಕ ಇನ್ಫೋಸಿಸ್ ಸಂಸ್ಥೆ ವೇಗವಾಗಿ ಬೃಹತ್ ಸಂಸ್ಥೆಯಾಗಿ ಬೆಳೆದು ನಿಂತಿದ್ದು ಇತಿಹಾಸ.

ದೊಡ್ಡ ದೊಡ್ಡ ಪ್ರತಿಷ್ಟಿತ ಸಂಸ್ಥೆಗಳಾದ ರೀಬಾಕ್,ವೀಸಾ,ಬೋಯಿಂಗ್,ಸಿಸ್ಕೋ ಸಿಸ್ಟಮ್, ನ್ಯುಯಾರ್ಕ್ ಲೈಫ್ ಅಂತಹ ಸಂಸ್ಥೆಗಳು ಸೇರಿದಂತೆ ಬರೋಬ್ಬರಿ 315 ಕಂಪನಿಗಳು ಇನ್ಫೋಸಿಸ್ ಕಂಪನಿಯ ಕ್ಲೈಂಟ್ಸ್ ಗಳಾಗಿವೆ.ಇಂದು ಇನ್ಫೋಸಿಸ್ ಸಂಸ್ಥೆ ನಾಜ಼ಡಕ್ ಲಿಸ್ಟ್ ನಲ್ಲಿ ಮೊದಲ ಭಾರತೀಯ ಕಂಪನಿಯಾಗಿ ಹೊರಹೊಮ್ಮಿದೆ.ಇಂದು ಇನ್ಫೋಸಿಸ್ ಸಂಸ್ಥೆ ಭಾರತದ ಎರಡನೇ ಅತಿದೊಡ್ಡ ಸಾಫ್ಟ್ ವೇರ್ ಎಕ್ಸ್ಪೋರ್ಟಿಂಗ್ ಕಂಪನಿಯಾಗಿದೆ.ಇನ್ಫೋಸಿಸ್ ಯಲ್ಲಿ ಮಾರ್ಚ್ 2020 ರ ಮಾಹಿತಿಯಂತೆ 2,42,375 ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದು,ಇನ್ಫೋಸಿಸ್ ಸಂಸ್ಥೆಯ ಒಟ್ಟು ಆಸ್ತಿಯ ಮೌಲ್ಯ ಬರೋಬ್ಬರಿ 8355 ಕೋಟಿ.ರೂ ಗಳಾಗಿದೆ.

ಹೀಗೆ ಇನ್ಫೋಸಿಸ್ ಸಂಸ್ಥೆ ಇಂದು ಯಶಸ್ಸಿನ ಉತ್ತುಂಗಕ್ಕೆ ಏರಬೇಕಾದರೆ ಸುಧಾಮೂರ್ತಿ ಅವರು ತಮ್ಮ ಪತಿ ನಾರಾಯಣ ಮೂರ್ತಿ ಅವರಿಗೆ ಬೆನ್ನೆಲುಬಾಗಿ ನಿಂತಿದ್ದಕ್ಕೆ ಇಷ್ಟೆಲ್ಲಾ ಸಾಧನೆ ಆಗಲು ಕಾರಣವಾಯಿತು ಎಂದರೆ ಅತಿಶಯೋಕ್ತಿ ಅಲ್ಲ. ಇದೀಗ ಈ ಇನ್ಫೋಸಿಸ್ ಕಂಪನಿಯ ಬೆನ್ನೆಲುಬಾಗಿದ್ದ ಸುಧಾಮೂರ್ತಿ ಅವರು ವಯಸ್ಸಾದ ಕಾರಣ ಇದೇ ಡಿಸೆಂಬರ್ 31 ರಂದು ಸ್ವಯಂ ನಿವೃತ್ತಿಯಾಗಲಿದ್ದಾರೆ. ಅಂತಿಮವಾಗಿ ಸುಧಾಮೂರ್ತಿ ಅವರು ಇನ್ಫೋಸಿಸ್ ಸಂಸ್ಥೆಯ ಬಗ್ಗೆ ಈ ಕಂಪನಿಯ ಮೂಲಕ ನಮ್ಮ ಬದುಕು ಮತ್ತು ನೂರಾರು ಜನರಿಗೆ ಸಹಾಯ ಮಾಡಲು ಸಾಧ್ಯವಾಯಿತು. ಇನ್ಫೋಸಿಸ್ ಸಂಸ್ಥೆಗೆ ನಾನು ಸದಾ ಆಭಾರಿಯಾಗಿರುತ್ತೇನೆ ನನ್ನ ಎಲ್ಲಾ ಯಶಸ್ಸಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಾರಣರಾದ ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದು ತಮ್ಮ ಎಲ್ಲಾ ಸಹೋದ್ಯೋಗಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

Leave a Reply

%d bloggers like this: