ಇಂದ್ರಜಿತ್ ಲಂಕೇಶ್ ಅವರ ಪತ್ನಿ ಯಾರು ಗೊತ್ತಾ? ಯಾವ ಹೀರೋಯಿನ್ ಗೂ ಕಮ್ಮಿಯಿಲ್ಲ

ಕಳೆದೊಂದು ತಿಂಗಳಿಂದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿಚಾರವಾಗಿ ಪತ್ರಿಕಾ,ದೃಶ್ಯ ಮಾಧ್ಯಮ ಸೇರಿದಂತೆ ಸೋಶಿಯಲ್ ಮೀಡಿಯಾಗಳಲ್ಲಿಯೂ ಕೂಡ ಭಾರಿ ಸುದ್ದಿ ಆಗಿರುವುದು ಪತ್ರಕರ್ತ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್. ಹೌದು ಇಂದ್ರಜಿತ್ ಲಂಕೇಶ್ ಈ ಹಿಂದೆ ಮಾದಕ ವಸ್ತು ವಿಚಾರವಾಗಿ ದನಿ ಎತ್ತಿದ್ದರು. ಇಂದ್ರಜಿತ್ ಲಂಕೇಶ್ ಅವರ ಬಗ್ಗೆ ಬಹುತೇಕರಿಗೆ ತಿಳಿದಿರುವುದು ಪತ್ರಕರ್ತ,ನಿರ್ದೇಶಕ ಎಂಬುದರ ಜೊತೆಗೆ ಸೃಜನ್ ಲೋಕೇಶ್ ಸಾರಥ್ಯದಲ್ಲಿ ಪ್ರಸಾರವಾಗುತ್ತಿರುವ ಕಿರುತೆರೆಯ ಜನಪ್ರಿಯ ಮಜಾ ಟಾಕೀಸ್ ಶೋ ನ ಭಾಗವಾಗಿದ್ದಾರೆ ಇಂತಿಷ್ಟು ಮಾಹಿತಿ ಇರುತ್ತದೆ.ಆದರೆ ಇದೆಲ್ಲಕ್ಕಿಂತ ಮುಖ್ಯವಾಗಿ ಇಂದ್ರಜಿತ್ ಲಂಕೇಶ್ ಒಬ್ಬ ಅತ್ಯುತ್ತಮ ಕ್ರಿಕೆಟ್ ಆಟಗಾರ,ಉತ್ತಮ ವಿಕೆಟ್ ಕೀಪರ್ ಆಗಿದ್ದರು.ಅಷ್ಟೇ ಅಲ್ಲದೆ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಸ್ಪರ್ಧಿಸಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಟ್ರೋಫಿ ಗೆದ್ದುಕೊಂಡು ಬಂದಿದ್ದರು ಎಂಬುದು ಅನೇಕರಿಗೆ ತಿಳಿದಿರುವುದಿಲ್ಲ.

ಇಂದ್ರಜಿತ್ ಲಂಕೇಶ್ ಅವರ ಕೌಟುಂಬಿಕ ಹಿನ್ನೆಲೆ ವಿಚಾರವಾಗಿ ತಿಳಿಯುವುದಾರೆ ಇಂದ್ರಜಿತ್ ಲಂಕೇಶ್ ಕನ್ನಡ ನಾಡಿನ ಖ್ಯಾತ ಪರ್ತಕರ್ತ ರಾಗಿದ್ದ ಪಿ.ಲಂಕೇಶ್ ಮತ್ತು ಇಂದಿರಾ ಲಂಕೇಶ್ ಅವರು ಪುತ್ರ.1976 ರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಜನಿಸಿದರು.ತಂದೆಯಂತೆ ಪತ್ರಿಕಾ ಮಾಧ್ಯಮದಲ್ಲಿ ತೊಡಗಿಸಿಕೊಂಡ ಇಂದ್ರಜಿತ್ ತದ ನಂತರ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು.2001 ರಲ್ಲಿ ತುಂಟಾಟ ಚಿತ್ರ ನಿರ್ದೇಶನ ಮಾಡುವ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟರು.ತಮ್ಮ ಚೊಚ್ಚಲ ಪ್ರಯತ್ನದಲ್ಲಿಯೇ ಬೆಸ್ಟ್ ಡೆಬ್ಯೂ ಡೈರೆಕ್ಟರ್ ಅವಾರ್ಡ್ ಕೂಡ ಪಡೆದುಕೊಂಡರು.ತದ ನಂತರ ದರ್ಶನ್ ಅವರೊಟ್ಟಿಗೆ ಲಂಕೇಶ್ ಪತ್ರಿಕೆ,ಧ್ಯಾನ್ ಅವರಿಗೆ ಮೊನಲಿಸ ಚಿತ್ರ ನಿರ್ದೇಶನ ಮಾಡಿದರು.ಉಪೇಂದ್ರ ಅವರ ಜೊತೆ ಐಶ್ವರ್ಯ ಎಂಬ ಸಿನಿಮಾ ನಿರ್ದೇಶಿಸಿದ್ದಾರೆ.

ಈ ಚಿತ್ರದಲ್ಲಿ ಇಂದು ಬಾಲಿವುಡ್ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ದೀಪಿಕಾ ಪಡುಕೋಣೆ ಅವರನ್ನು ನಾಯಕಿ ನಟಿಯಾಗಿ ಪರಿಚಯಿಸಲಾಗಿತ್ತು.ಜೊತೆಗೆ ಇದೇ ಇಂದ್ರಜಿತ್ ಲಂಕೇಶ್ ಅವರೇ ಬಾಲಿವುಡ್ ಬ್ಯೂಟಿ ನಟಿ ಇಲಿಯಾನ ಅವರನ್ನು ಕನ್ನಡಕ್ಕೆ ಕರೆತಂದಿದ್ದಾರೆ.ಹೀಗೆ ಒಂದಷ್ಟು ಯಶಸ್ವಿ ಚಿತ್ರಗಳನ್ನು ನೀಡಿರುವ ಇಂದ್ರಜಿತ್ ಲಂಕೇಶ್ ಕೆಲವು ವರ್ಷಗಳ ಹಿಂದೆಯಷ್ಟೇ ಹುಡುಗ-ಹುಡುಗಿ, ಲವ್ ಯೂ ಆಲಿಯಾ ಎಂಬ ಚಿತ್ರಗಳನ್ನು ಕೂಡ ನೀಡಿದ್ದಾರೆ.ಇದೀಗ ಇವರ ಕೌಟುಂಬಿಕ ವೈಯಕ್ತಿಕ ವಿಚಾಯವಾಗಿ ತಿಳಿಯುವುದಾದರೆ ಪತ್ರಕರ್ತ, ಬರಹಗಾರ ಪಿ.ಲಂಕೇಶ್ ಅವರ ತೃತೀಯ ಪುತ್ರರಾಗಿರುವ ಇಂದ್ರಜಿತ್ ಲಂಕೇಶ್ ಅವರಿಗೆ ಇಬ್ಬರು ಸೋದರಿಯರು.

ಒಬ್ಬರು ದಿವಂಗತ ಪತ್ರಕರ್ತೆಯಾದ ಗೌರಿ ಲಂಕೇಶ್ ಮತ್ತು ನಿರ್ದೇಶಕಿ ಕವಿತಾ ಲಂಕೇಶ್.ಕವಿತಾ ಲಂಕೇಶ್ ಅನಂತ್ ನಾಗ್,ಅನು ಪ್ರಭಾಕರ್,ಸುನೀಲ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಪ್ರೀತಿ ಪ್ರೇಮ ಪ್ರಣಯ ಎಂಬ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಇನ್ನು ಲಂಕೇಶ್ ಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅರ್ಪಿತಾ ಎಂಬುವರನ್ನು ಇಂದ್ರಜಿತ್ ಲಂಕೇಶ್ ಪ್ರೀತಿಸಿ ವಿವಾಹವಾಗಿದ್ದಾರೆ.ಈ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳಿದ್ದು ಅವರಿಬ್ಬರನ್ನು ಕೂಡ ಸಿನಿಮಾರಂಗಕ್ಕೆ ಕರೆತರಲು ಇಂದ್ರಜಿತ್ ಲಂಕೇಶ್ ಸಕಲ ತರಬೇತಿ ಕೊಡಿಸುತ್ತಿದ್ದಾರೆ.ಹೀಗೆ ತುಂಬು ಕುಟುಂಬ ಹೊಂದಿರುವ ಇಂದ್ರಜಿತ್ ಲಂಕೇಶ್ ಇತ್ತೀಚೆಗೆ ಕೆಲವು ಸುದ್ದಿಗಳಿಗೆ ವಿವಾದಕ್ಕೀಡಾಗುತ್ತಿದ್ದಾರೆ.

Leave a Reply

%d bloggers like this: