ಇಂದಿಗೂ ಒಂದೇ ಒಂದು ಬಾರಿ ಕೂಡ ಎಣ್ಣೆ ಮುಟ್ಟದ ಕನ್ನಡದ ನಟರು ಯಾರ್ಯಾರು ಗೊತ್ತಾ? ನೋಡಿ ಒಮ್ಮೆ

ಕನ್ನಡ ಚಿತ್ರರಂಗದ ಈ ಸ್ಟಾರ್ ನಟರು ನಿಜ ಜೀವನದಲ್ಲಿ ಈ ಎರಡು ಕೆಲಸವನ್ನು ಮಾಡಿಯೇ ಇಲ್ಲವಂತೆ..! ಸಿನಿಮಾ ಲೋಕ ಅಂದಾಕ್ಷಣ ಅದೊಂದು ರೀತಿಯ ನಶೆ ಎಂದು ಹೇಳುತ್ತಾರೆ. ಒಂದು ಬಾರಿ ಸಿನಿಮಾ ಎಂಬ ನಶೆಯನ್ನ ಜೀವನದಲ್ಲಿ ಆವರಿಸಿಕೊಂಡು ಬಿಟ್ಟರೆ. ಇನ್ನು ಏನೇ ಮಾಡಿದರು ತಮ್ಮ ಜೀವನವನ್ನು ಸಿನಿಮಾದಲ್ಲಿಯೇ ಕಳಿಯಬೇಕು ಎಂದುಕೊಳ್ಳುವುದು ಸಾಮಾನ್ಯವಾಗಿರುತ್ತದೆ. ಕೆಲವರಿಗೆ ಅಷ್ಟರ ಮಟ್ಟಿಗೆ ಈ ಸಿನಿಮಾ ಜಗತ್ತು ಮೋಡಿ ಮಾಡಿರುತ್ತದೆ. ಇಲ್ಲಿ ಒಂದು ಮಾತಿದೆ ಸಿನಿಮಾ ಮಂದಿ ಅಂದಾಕ್ಷಣ ಇವರಿಗೆ ಎಲ್ಲಾ ರೀತಿಯ ಚಟಗಳಿರುತ್ತವೆ ಎಂಬುದು. ಅದು ಮಧ್ಯಪಾನ ಧೂಮಪಾನ ಇನ್ನಿತರ ಯಾವುದೇ ಹವ್ಯಾಸ ಇವರನ್ನ ಆವರಿಸಿಕೊಂಡಿರುತ್ತದೆ. ಸಿನಿಮಾ ಕ್ಷೇತ್ರದಲ್ಲಿ ಇರೋರಿಗೆ ಹೆಣ್ಣು ಕೊಡಲು ಕೂಡ ಪೋಷಕರು ಹಿಂದೇಟು ಹಾಕುತ್ತಾರೆ ಎಂದು ಸ್ವತಃ ಅನೇಕ ಕಲಾವಿದರೇ ಹೇಳಿಕೊಂಡಿದ್ದಾರೆ.

ಆದರೆ ಸಿನಿಮಾ ಕ್ಷೇತ್ರದಲ್ಲಿ ಇರುವವರೆಲ್ಲಾ ಕೂಡ ದುರಾಭ್ಯಾಸಕ್ಕೆ ದಾಸರಾಗಿರುತ್ತಾರೆ ಎಂಬುದು ತಪ್ಪು ಕಲ್ಪನೆ. ಒಂದು ಕೈಯಲ್ಲಿ ಎಲ್ಲಾ ಬೆರಳುಗಳು ಹೇಗೆ ಸಮವಾಗಿ ಇರುವುದಿಲ್ಲವೋ ಅದೇ ರೀತಿಯಾಗಿ ಸಿನಿಮಾ ಕ್ಷೇತ್ರದಲ್ಲಿ ಇರುವ ಎಲ್ಲರೂ ಕೂಡ ಒಂದೇ ರೀತಿ ಇರುವುದಿಲ್ಲ. ಒಂದು ಅಚ್ಚರಿ ಅಂದರೆ ಕನ್ನಡ ದಿಗ್ಗಜ ನಟರು ಎಂದೇ ಕರೆಸಿಕೊಳ್ಳುವ ಕ್ರೇಜಿ಼ಸ್ಟಾರ್ ವಿ. ರವಿಚಂದ್ರನ್ ಅವರು ತಮ್ಮ ಸಿನಿಮಾಗಳಲ್ಲಿ ಮಧ್ಯಪಾನ ಸೇವಿಸಿರುವಂತೆ, ಧೂಮಪಾನ ಮಾಡುವಂತಹ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ ಅವರ ನಿಜ ಜಿವನದಲ್ಲಿ ಈ ಎರಡು ಕೆಲಸವನ್ನು ಅವರು ಮಾಡೇ ಇಲ್ಲವಂತೆ. ಅದರಂತೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಕೂಡ ಯಾವುದೇ ರೀತಿಯಾಗಿ ಧೂಮಪಾನ, ಮಧ್ಯಪಾನ ಮಾಡಿಲ್ಲವಂತೆ. ಇನ್ನು ಕಿಚ್ಚ ಸುದೀಪ್ ಅವರು ಆರಂಭದ ದಿನಗಳಲ್ಲಿ ಧೂಮಪಾನ ಮಾಡುತ್ತಿದ್ದರು.

ಆದರೆ ನಂತರದ ದಿನಗಳಲ್ಲಿ ಮೈಗ್ರೇನ್ ತಲೆನೋವು ಕಾಡಿದರಿಂದ ಸುದೀಪ್ ಅವರು ಧೂಮಪಾನವನ್ನ ತ್ಯಜಿಸುತ್ತಾರೆ. ಇಂತಹ ಅನೇಕ ಕಲಾವಿದರನ್ನ ನಾವು ಕಾಣಬಹುದು. ಬಹುತೇಕರಿಗೆ ಸ್ಟಾರ್ ನಟ-ನಟಿಯರು ಅಂದಾಕ್ಷಣ ಅವರಿಗೆ ಈ ರೀತಿಯ ಹವ್ಯಾಸಗಳು ಇದ್ದೇ ಇರುತ್ತವೆ ಎಂಬುದು ಅನೇಕರಿಗೆ ಅನಿಸುತ್ತದೆ. ಆದರೆ ಅದು ಸತ್ಯಕ್ಕೆ ದೂರವಾದ ಮಾತಾಗಿರುತ್ತದೆ. ಆಗಂತ ಕೆಲವು ನಟ -ನಟಿಯರಿಗೆ ಈ ಧೂಮಪಾನ ಮಧ್ಯಪಾನದ ಹವ್ಯಾಸ ಇಲ್ಲ ಎಂದು ಹೇಳಲಾಗುವುದಿಲ್ಲ. ಅದು ಅವರವರ ವೈಯಕ್ತಿಕ ವಿಚಾರ ಎಂಬುದು ಒಂದಷ್ಟು ಮಂದಿಯ ಅನಿಸಿಕೆ ಅಭಿಪ್ರಾಯ ಆಗಿರುತ್ತದೆ.