ಟೀಮ್ ಇಂಡಿಯಾದ ಕ್ರಿಕೆಟ್ ನ ಮುಖ್ಯ ಕೋಚ್ ಸ್ಥಾನ ನನಗೆ ಬೇಡ: ರವಿಶಾಸ್ತ್ರಿ

ಕ್ರಿಕೆಟ್ ಭಾರತ ತಂಡದ ಮುಖ್ಯ ಕೋಚ್ ಸ್ಥಾನ ಒಲ್ಲೇ ಎಂದ ರವಿಶಾಸ್ತ್ರಿ.ಇತ್ತೀಚೆಗಷ್ಟೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟಿ-ಟ್ವೆಂಟಿ ವಿಶ್ಪಕಪ್ ಕ್ರಿಕೆಟ್ ಪಂದ್ಯದ ನಾಯಕ ಸ್ಥಾನ್ಕಕೆ ವಿದಾಯ ಹೇಳುವುದಾಗಿ ತಿಳಿಸಿದ್ದಾರೆ.ಇದರ ಬೆನ್ನಲ್ಲೇ ಕೋಚ್ ರವಿಶಾಸ್ತ್ರಿ ಕೂಡ ಟಿ ಟ್ವೆಂಟಿ ವಿಶ್ವಕಪ್ ಪಂದ್ಯ ಮುಗಿದ ನಂತರ ಮುಂದೆ ಭಾರತ ತಂಡಕ್ಕೆ ಕೋಚ್ ಆಗಿ ಮುಂದುವರಿಯುವುದಿಲ್ಲ ಎಂದು ಆಂಗ್ಲ ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ತಿಳಿಸಿದ್ದಾರೆ.ರವಿ ಶಾಸ್ತ್ರಿ ಕೋಚ್ ಹುದ್ದೆಯ ಅವಧಿ ಟಿ.ಟ್ವೆಂಟಿ ವಿಶ್ವಕಪ್ ಬಳಿಕ ಅಂತ್ಯವಾಗಲಿದೆ.ಈ ಅವಧಿ ಬಳಿಕ ಮತ್ತೆ ರವಿಶಾಸ್ತ್ರಿ ಅವರೇ ಮುಂದುವರಿಯಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.ಆದರೆ ಈ ಬಗ್ಗೆ ರವಿಶಾಸ್ತ್ರಿ ಅವರೇ ನನಗೆ ಟಿ ಟ್ವೆಂಟಿ ವಿಶ್ವಕಪ್ ಪಂದ್ಯ ಆದ ಬಳಿಕ ಭಾರತ ತಂಡಕ್ಕೆ ಕೋಚ್ ಆಗಿ ಮುಂದುವರಿಯಲು ಆಸಕ್ತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಭಾರತ ತಂಡ ಈಗಾಗಲೇ ಸಾಕಷ್ಟು ಸಾಧನೆ ಮಾಡಿದೆ.ನಾವು ವೈಟ್ ಬಾಲ್ ಕ್ರಿಕೆಟ್ ನಲ್ಲಿ ವಿಶ್ವದ ಎಲ್ಲಾ ದೇಶಗಳನ್ನ ಮಣಿಸಿದ್ದೇವೆ.ಇನ್ನು ಟಿ ಟ್ವೆಂಟಿ ವಿಶ್ವಕಪ್ ಪಂದ್ಯ ಜಯಶಾಲಿ ಆದರೆ ಅದಕ್ಕಿಂತ ಮತ್ತೊಂದು ಹೆಮ್ಮೆ ನಮಗೆ ಬೇಕಿಲ್ಲ.ನಾನು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ನನಗೆ ಸಿಕ್ಕಿದೆ.ನಾನು ಭಾರತ ತಂಡಕ್ಕೆ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸಿದ ಈ ಐದು ವರ್ಷಗಳ ಅವಧಿಯಲ್ಲಿ ಆಸ್ಟ್ರೇಲಿಯಾ ಸರಣಿ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಎರಡು ಭಾರಿ,ಇಂಗ್ಲೆಂಡ್ ವಿರುದ್ದ ಜಯ ಗಳಿಸಿದ್ದೇವೆ.ಈಗ ಟಿ ಟ್ವೆಂಟಿ ವಿಶ್ವಕಪ್ ಪಂದ್ಯ ಗೆದ್ದರೆ ಅದಕ್ಕಿಂತ ಮಿಗಿಲಾದದ್ದು ನನಗೆ ಏನು ಇಲ್ಲ.

ಮುಂದಿನ ಟಿ ಟ್ವೆಂಟಿ ಕ್ರಕೆಟ್ ಅಷ್ಟೊತ್ತಿಗೆ ನಾನು ನಿವೃತ್ತಿ ಹೊಂದುವುದು ಇದು ಸೂಕ್ತ ಸಮಯ ಎಂದು ತಮ್ಮ ಕೋಚ್ ಆಗಿ ಮುಂದುವರಿಯದಿರುವ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯಗಳ್ನು ಹಂಚಿಕೊಂಡಿದ್ದಾರೆ.ಇನ್ನು ಇವರ ನಂತರ ಭಾರತ ತಂಡಕ್ಕೆ ಮುಖ್ಯ ತರಬೇತುದಾರರಾಗಿ ಈಗ ಕನ್ನಡಿಗ ಅನಿಲ್ ಕುಂಬ್ಳೆ ಮತ್ತು ವಿವಿಎಸ್ ಲಕ್ಷ್ಮಣ್ ಅವರು ಮುಖ್ಯ ಕೋಚ್ ಆಗಲು ಅರ್ಜಿ ಹಾಕಲು ಬಿಸಿಸಿಐ ಈ ಇಬ್ಬರನ್ನು ಭೇಟಿ ಮಾಡಿ ಮಾಹಿತಿ ತಿಳಿಸಿದ್ದಾರೆ ಎನ್ನಲಾಗಿದೆ.

Leave a Reply

%d bloggers like this: