ಇಂಡಿಯಾ- ಪಾಕಿಸ್ತಾನ್ ಪಂದ್ಯದ ಮೇಲೆ 1000 ಕೋಟಿ ಬೆಟ್ಟಿಂಗ್! ಎಲ್ಲಿ ಗೊತ್ತಾ

ಟಿ-ಟ್ವೆಂಟಿ ವಿಶ್ವಕಪ್ ಕ್ರಿಕೆಟ್ ನಲ್ಲಿ ಬೆಟ್ಟಿಂಗ್ ಆತಂಕ.ಈಗಾಗಲೇ ಆರಂಭವಾಗಿರುವ ಭಾರತ ಮತ್ತು ಪಾಕಿಸ್ತಾನ ಪಂದ್ಯದಲ್ಲಿ ಪಾಕಿಸ್ತಾನ ತಂಡ ಟಾಸ್ಕ್ ಗೆದ್ದರು ಕೂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.ಭಾರತ ತಂಡ ಬ್ಯಾಟಿಂಗ್ ಆರಂಭ ಮಾಡಿದೆ.ಇದರ ಬೆನ್ನಲ್ಲೇ ಬೆಟ್ಟಿಂಗ್ ಕೂಡ ಶುರುವಾಗಿದೆ.ಅದೂ ಕೂಡ ಈ ಭಾರತ ಮತ್ತು ಪಾಕಿಸ್ತಾನ ರಾಷ್ಟ್ರೀಯ ಪಂದ್ಯಗಳ ನಡುವೆ ನಡೆಯುವ ಕ್ರಿಕೆಟ್ ಪಂದ್ಯ ಭಾರಿ ರೋಚಕತೆಯನ್ನು ಮೂಡಿಸುತ್ತವೆ.ಹೀಗಾಗಿ ಮಾಹಿತಿಯ ಪ್ರಕಾರ ಬರೋಬ್ಬರಿ ಒಂದು ಸಾವಿರ ಕೋಟಿ.ರೂ.ಬೆಟ್ಟಿಂಗ್ ನಡೆಯುತ್ತಿದೆ ಎಂದು ತಿಳಿದು ಬಂದಿದೆ.ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಎರಡೂ ರಾಷ್ಟ್ರೀಯ ತಂಡಗಳ ಆಟಗಾರರ ಮೇಲೆ ಭ್ರಷ್ಟಾಚಾರ ನಿಗ್ರಹ ದಳವು ಗಂಭೀರ ನಿಗಾವಹಿಸಿದೆ. ಈಗಾಗಲೇ ಭ್ರಷ್ಟಾಚಾರ ನಿಗ್ರಹ ಘಟಕದ ಹಿರಿಯ ಅಧಿಕಾರಿಗಳು ದುಬೈ ಮತ್ತು ಅಬುಧಾಬಿಯಲ್ಲಿ ಬೀಡು ಬಿಟ್ಟಿದ್ದಾರೆ.

ನಡೆಯುವ ಪ್ರತಿಯೊಂದು ಪಂದ್ಯದ ಮೇಲೂ ಹದ್ದಿನ ಕಣ್ಣಿಟ್ಟಿದೆ.ಇಲ್ಲಿ ಬೆಟ್ಟಿಂಗ್ ಬುಕ್ಕಿಂಗ್ ಏಜೆಂಟ್ ಗಳು ಪ್ರಾಶಸ್ತ್ಯ ನೀಡರುವುದು ಭಾರತ ತಂಡದ ಮೇಲೆ.ಒಂದು ಸಾವಿರ ಕೋಟಿಯಿದ್ದ ಬೆಟ್ಟಿಂಗ್ ವಹಿವಾಟು ಇದ್ದಕಿದ್ದಂತೆ ಬರೋಬ್ಬರಿ ಎರಡು ಸಾವಿರ ಕೋಟಿಗೂ ಅಧಿಕ ಹಣಕಾಸ ವ್ಯವಹಾರ ವಹಿವಾಟು ನಡೆಯುವ ಸಾಧ್ಯತೆಯಿದೆ ಎಂದು ಮುನ್ನೆಚ್ಚರಿಕೆಯಾಗಿ ಭ್ರಷ್ಟಾಚಾರ ಘಟಕವು ಸಂಪೂರ್ಣವಾಗಿ ಅಲರ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದೆ.ಏಕೆಂದರೆ ಇಲ್ಲಿ ಬೆಟ್ಟಿಂಗ್ ಜೊತೆಗೆ ಫಿಕ್ಸಿಂಗ್ ಆತಂಕ ಕೂಡ ಇದೆ.ಆಟಗಾರರು ಹಣದಾಸೆಗಾಗಿ ಒಳಗೊಳಗೆ ಫಿಕ್ಸಿಂಗ್ ಮಾಡಿಕೊಂಡಿರುವ ಸಾದ್ಯತೆ ಕೂಡ ಹೆಚ್ಚಾಗಿಯೇ ಇರುತ್ತದೆ.

ಈ ಬುಕ್ಕಿಂಗ್ ಮಾಡುವ ಬಹುತೇಕ ವ್ಯಕ್ತಿಗಳು ದುಬೈನಲ್ಲಿಯೇ ತಮ್ಮ ಕೆಲಸವನ್ನು ಮಾಡುತ್ತಿರುತ್ತಾರೆ.ಅಲ್ಲಿಯೇ ಕೂತು ಪಂದ್ಯದ ಕಂಪ್ಲೀಟ್ ಅಪ್ಡೇಟ್ಸ್ ಗಳನ್ನು ಕೊಡುತ್ತಿರುತ್ತಾರೆ.ಸಂಪೂರ್ಣವಾಗಿ ಈ ಬೆಟ್ಟಿಂಗ್ ದಂಧೆಯು ಆನ್ಲೈನ್ ನಲ್ಲಿ ನಡೆಯುತ್ತದೆ.ಭಾರತ ಬೆಟ್ಟಿಂಗ್ ಶೇಕಡ 57.58 ರಷ್ಟಿದೆ.ಈ ಆನ್ಲೈನ್ ಬೆಟ್ಟಿಂಗ್ ವೆಬ್ ಸೈಟ್ ಮೇಲೆ ಸೈಬರ್ ಅಪರಾಧ ಇಲಾಖೆ ಕೂಡ ಸೂಕ್ಷ್ಮವಾಗಿ ಕಣ್ಣಿಟ್ಟಿದೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಈ ನಮ್ಮ ಲೇಖನದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ್ ನಮ್ಮ ಪೇಜ್ ನ್ನು ಅಪ್ಪದೇ ಲೈಕ್ ಮಾಡಿ.

Leave a Reply

%d bloggers like this: