ಇದೀಗ ಭಾರತ ಚಿತ್ರರಂಗದ ಎರಡು ದೊಡ್ಡ ನಟರ ಚಿತ್ರಗಳು ಒಂದೇ ದಿನ ಬಿಡುಗಡೆ

ಭಾರತೀಯ ಚಿತ್ರರಂಗದಲ್ಲಿ ಇದೀಗ ಹೊಸ ಹೊಸ ಸಿನಿಮಾಗಳ ಅಬ್ಬರ ಜೋರಾಗಿದೆ. ಅದರಲ್ಲಿಯೂ ಕೂಡ ಕನ್ನಡ ಸಿನಿಮಾಗಳು ಭಾರತ ಮಾತ್ರ ಅಲ್ಲದೇ ಹೊರ ದೇಶಗಳಲ್ಲಿಯೂ ಕೂಡ ಅಪಾರ ಜನಪ್ರಿಯತೆ ಪಡೆದು ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿವೆ‌. ಕನ್ನಡ ಸಿನಿಮಾಗಳೆಂದರೆ ಮೂಗು ಮುರಿಯುತ್ತಿದ್ದ ಮಂದಿ ಇದೀಗ ಕನ್ನಡ ಸಿನಿಮಾಗಳ ಕಂಟೆಂಟ್ ಅಂಡ್ ಮೇಕಿಂಗ್ ಸ್ಟೈಲ್ ನೋಡಿ ಥ್ರಿಲ್ ಆಗಿದ್ದಾರೆ. ಕನ್ನಡ ಸಿನಿಮಾ ಬರುತ್ತಿದೆ ಅಂತ ಪರಭಾಷಾ ಸಿನಿಮಾಗಳು ತಮ್ಮ ರಿಲೀಸಿಂಗ್ ಡೇಟ್ ಮುಂದೂಡಿಕೊಳ್ಳುತ್ತಿವೆ ಅಂದ್ರೆ ನಿಜಕ್ಕೂ ಕೂಡ ಇದು ಕನ್ನಡ ಚಿತ್ರರಂಗದ ಸುವರ್ಣ ಕಾಲ ಅಂತಾನೇ ಹೇಳಬಹುದು. ಇನ್ನು ಇದೀಗ ಇಂಡಿಯನ್ ಸಿನಿಮಾ ಲೋಕದಲ್ಲಿ ಒಂದಷ್ಟು ಹೊಸ ಅಪ್ ಡೇಟ್ ಗಳಾಗಿವೆ.

ಅವುಗಳೇನು ಎಂಬುದನ್ನ ನೋಡುವುದಾದರೆ ಇತ್ತೀಚೆಗಷ್ಟೇ ಹೊಂಬಾಳೆ ಫಿಲಂಸ್ ಸಂಸ್ಥೆ ತಮ್ಮ ಸಂಸ್ಥೆ ಅಡಿಯಲ್ಲಿ ನಿರ್ಮಾಣ ಆಗುತ್ತಿರುವ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾದ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದರು. ಸಲಾರ್ ಚಿತ್ರದ ಪೋಸ್ಟರ್ ವೊಂದನ್ನ ರೀಲಿಸ್ ಮಾಡಿ ರಿಲೀಸಿಂಗ್ ಡೇಟ್ ಅನೌನ್ಸ್ ಮಾಡಿದ್ರು. ಪೋಸ್ಟರ್ ನಲ್ಲಿ ಪ್ರಭಾಸ್ ಅವರ ಮಾಸ್ ಲುಕ್ ಸಿನಿ ಪ್ರೇಕ್ಷಕರಿಗೆ ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿದ್ದು, ಸಲಾರ್ ಸಿನಿಮಾ ನೋಡುವುದಕ್ಕೆ ಕಾತುರದಿಂದ ಕಾಯುತ್ತಿದ್ದಾರೆ. ಇದೀಗ ಸಲಾರ್ ಸಿನಿಮಾ ಎದುರು ಬಾಲಿವುಡ್ ಹ್ಯಾಂಡ್ಸಮ್ ಹಂಕ್ ಸ್ಟಾರ್ ನಟ ಹೃತಿಕ್ ರೋಷನ್ ಅವರ ಫೈಟರ್ ಸಿನಿಮಾ ಪೈಪೋಟಿ ನೀಡಲಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಈ ಇಬ್ಬರು ಸ್ಟಾರ್ ನಟರ ಸಿನಿಮಾಗಳು ಮುಂದಿನ ವರ್ಷ ರಿಲೀಸ್ ಆದ್ರೆ ಸಿನಿ ಪ್ರೇಕ್ಷಕರಿಗೆ ಮಸ್ತ್ ಮನರಂಜನೆ ಅಂತಾನೇ ಹೇಳ್ಬೋದು.

Leave a Reply

%d bloggers like this: