ಇದೇ ವಾರ ಮನೆಯಲ್ಲಿಯೇ ನೋಡಬಹುದು ಕಾಂತಾರ, ಕೊನೆಗೂ ಓಟಿಟಿಯಲ್ಲಿ ಬಿಡುಗಡೆ ಆಗುತ್ತಿರುವ ಕಾಂತಾರ ಚಿತ್ರ

ಕಡಿಮೆ ಬಜೆಟ್ ನಲ್ಲಿ ತಯಾರಾಗಿ ಇಂದು ಬರೋಬ್ಬರಿ ಮುನ್ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಸೂಪರ್ ಡೂಪರ್ ಹಿಟ್ ಆಗಿ ದಾಖಲೆ ಮಾಡುತ್ತಿರುವ ಕಾಂತಾರ ಸಿನಿಮಾ ಕೊನೆಗೂ ಓಟಿಟಿಗೆ ಹೆಜ್ಜೆ ಇಡ್ತಿದೆ. ಹೌದು ಇದು ರಿಷಬ್ ಶೆಟ್ಟಿ ಅವರ ಅಭಿಮಾನಿಗಳಿಗೆ ಸಂತಸದ ವಿಚಾರವಾಗಿದೆ. ಯಾಕಂದ್ರೆ ಈಗಾಗಲೇ ಕಾಂತಾರ ಸಿನಿಮಾವನ್ನ ಬಹುತೇಕ ಕನ್ನಡ ಸಿನಿ ಪ್ರೇಕ್ಷಕರು ಮೆಚ್ಚಿ ಹಾಡಿ ಹೊಗಳಿದ್ದಾರೆ. ಕಾಂತಾರ ಸಿನಿಮಾ ಕೇವಲ ಕರ್ನಾಟಕ ಮಾತ್ರ ಅಲ್ಲದೆ ಭಾರತದಾದ್ಯಂತ ಅಪಾರ ಜನಪ್ರಿಯತೆ ಪಡೆದುಕೊಂಡಿದೆ‌. ಗಲ್ಲಾ ಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡಿದೆ. ರಿಷಬ್ ಶೆಟ್ಟಿ ಅವರ ವೃತ್ತಿ ಜೀವನಕ್ಕೆ ಕಾಂತಾರ ಸಿನಿಮಾ ಒಂದು ಬಹುದೊಡ್ಡ ತಿರುವು. ಯಾಕಂದ್ರೆ ಕಾಂತಾರ ಸಿನಿಮಾ ಮೊದಲು ಕೇವಲ ಕನ್ನಡ ಮಾತ್ರ ಅಲ್ಲದೇ ತೆಲುಗು, ತಮಿಳು ಭಾಷೆ ಸೇರಿದಂತೆ ಪಂಚ ಭಾಷೆಗಳಲ್ಲಿ ರಿಲೀಸ್ ಆಗಿ ಎಲ್ಲಾ ಭಾಷೆಯ ಪ್ರೇಕ್ಷಕರಿಂದ ಅಭೂತಪೂರ್ವ ಪ್ರಶಂಸೆ ಪಡೆದುಕೊಂಡಿತು.

ಈ ಮೂಲಕ ಯಶ್ ಅವರಂತೆಯೇ ರಿಷಬ್ ಶೆಟ್ಟಿ ಕೂಡಾ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಕಾಂತಾರ ಸಿನಿಮಾ ನಮ್ಮ ಕರಾವಳಿ ಭಾಗದ ಜನರ ಆಚಾರ ವಿಚಾರ ಸಂಸ್ಕೃತಿಯ ಜೊತೆಗೆ ಅಲ್ಲಿನ ಕಾಡಿನ ಜನರಿಗೆ ಅರಣ್ಯ ಇಲಾಖೆ ನೀಡೋ ತೊಂದರೆ ತಾಪತ್ರಯ ಇತ್ಯಾದಿ ಅಂಶಗಳ ಜೊತೆಗೆ ಅವರ ನಂಬಿಕೆಯ ದೈವ ಪಂಜುರ್ಲಿ ದೈವಾರಾಧನೆಯನ್ನ ಅದ್ಭುತವಾಗಿ ತೋರಿಸಲಾಗಿದೆ. ಪ್ರಮುಖವಾಗಿ ಪಂಜುರ್ಲಿ ದೈವ ಪಾತ್ರದಲ್ಲಿ ರಿಷಬ್ ಶೆಟ್ಟಿ ಜೀವತುಂಬಿ ನಟಿಸಿ ಅಮೋಘವಾಗಿ ಅಭಿನಯಿಸಿದ್ದಾರೆ. ಇವರ ನಟನೆಗೆ ರಜಿನಿಕಾಂತ್ ಸೇರಿದಂತೆ ಭಾರತೀಯ ಚಿತ್ರರಂಗದ ಖ್ಯಾತ ನಟ ನಟಿಯರು ಫಿಧಾ ಆಗಿ ರಿಷಬ್ ಅವರ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಂತಾರ ಸಿನಿಮಾ ಅಪ್ಪಟ ಕನ್ನಡ ಮಣ್ಣಿನ ಸೊಗಡಿನ ಚಿತ್ರ. ಈ ಚಿತ್ರದಲ್ಲಿ ನಟಿಸಿದ ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ನಟಿ ಸಪ್ತಮಿಗೌಡ ಎಲ್ಲಾರೂ ಸಹ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸದ್ಯಕ್ಕೆ ಈ ಕಾಂತಾರ ಸಿನಿಮಾ ಯಶಸ್ವಿಯಾಗಿ ಎಲ್ಲಾ ಕಡೆ ಐವತ್ತು ದಿನಗಳನ್ನ ಪೂರೈಸಿದೆ. ಈ ಸಂತಸದ ಕ್ಷಣದ ಜೊತೆಗೆ ಚಿತ್ರತಂಡದಿಂದ ಮತ್ತೊಂದು ಗುಡ್ ನ್ಯೂಸ್ ಹೊರ ಬಿದ್ದಿದೆ. ಅದೇನಪ್ಪಾ ಅಂದರೆ ಕಾಂತಾರ ಸಿನಿಮಾ ಇದೇ ನವಂಬರ್ 24ರಿಂದ ಓಟಿಟಿ ದಿಗ್ಗಜ ಅಮೇಜಾನ್ ಪ್ರೈಮ್ ನಲ್ಲಿ ರಿಲೀಸ್ ಆಗಲಿದೆ ಎಂದು ತಿಳಿಸಿದೆ. ಕಾಂತಾರ ಸಿನಿಮಾವನ್ನ ಥಿಯೇಟರ್ ನಲ್ಲಿ ನೋಡಿ ಖುಷಿಯ ಜೊತೆಗೆ ವಿಶೇಷ ಅನುಭವ ಪಡೆದವರಿಗೆ ಓಟಿಟಿಯಲ್ಲಿಯೂ ಕೂಡ ಕಾಂತಾರ ಸಿನಿಮಾ ನೋಡಿ ಆನಂದಿಸಬಹುದಾಗಿದೆ.

Leave a Reply

%d bloggers like this: