ಇದೇ ತಿಂಗಳು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ ಡಾ.ರಾಜಕುಮಾರ್ ಕುಟುಂಬದ ಮತ್ತೊಬ್ಬ ನಟ

ಕನ್ನಡ ಚಿತ್ರರಂಗದಲ್ಲಿ ದೊಡ್ಮನೆ ಅಂದರೆ ಅದು ಡಾ.ರಾಜ್ ಕುಮಾರ್ ಅವರ ಕುಟುಂಬ. ಈ ಕುಟುಂಬದಲ್ಲಿ ಈಗಾಗಲೇ ಅಣ್ಣಾವ್ರು ಮತ್ತು ಅವರ ಮಕ್ಕಳು ಚಿತ್ರರಂಗವನ್ನಾಳಿದ್ದಾರೆ. ಶಿವಣ್ಣ ಇಂದಿಗೂ ಚಿತ್ರರಂಗದಲ್ಲಿ ಎನರ್ಜೆಟಿಕ್ ಆಗಿ ಅರವತ್ತರಲ್ಲಿಯೂ ಕೂಡ ಸಖತ್ ಆಗಿಯೇ ಫಾರ್ಮ್ ನಲ್ಲಿದ್ದುಕೊಂಡು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ರಾಜ್ ಕಟುಂಬದ ಮೊಮ್ಮಕ್ಕಳ ಸರದಿ ಆರಂಭವಾಗಿದೆ. ಹೌದು ಈಗಾಗಲೇ ರಾಘಣ್ಣ ಅವರ ಹಿರಿಯ ಪುತ್ರ ವಿನಯ್ ರಾಜ್ ಕುಮಾರ್ ಅವರು ಸಿದ್ದಾರ್ಥ್ ಚಿತ್ರದ ಮೂಲಕ ಎಂಟ್ರಿ ಕೊಟ್ಟು ರನ್ ಆಂಟೋನಿ ಆಗಿ ಇದೀಗ ಗ್ರಾಮಾಯಣ ಅಂತ ಸಿನಿಮಾ ಮಾಡುತ್ತಿದ್ದಾರೆ. ಇವರ ಸೋದರ ಯುವ ರಾಜ್ ಕುಮಾರ್ ಕೂಡ ಸಿನಿಮಾವೊಂದರ ತಯಾರಿಯಲ್ಲಿದ್ದಾರೆ. ಇತ್ತೀಚೆಗೆ ರಾಜ್ ಅವರ ಮೊಮ್ಮಗಳು ರಾಮ್ ಕುಮಾರ್ ಪುತ್ರಿ ಧನ್ಯಾ ರಾಮ್ ಕುಮಾರ್ ನಿನ್ನ ಸನಿಹಕೆ ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದು.

ತಮ್ಮ ಚೊಚ್ಚಲ ಚಿತ್ರದಲ್ಲೇ ಭರವಸೆ ಮೂಡಿಸಿ ಇದೀಗ ಬೆಳ್ಳಿ ಕಾಲುಂಗರ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಇವರ ಸೋದರ ಧೀರನ್ ರಾಮ್ ಕುಮಾರ್ ಶಿವ 143 ಎಂಬ ಚಿತ್ರದ ಮೂಲಕ ಸ್ಯಾಂಡಲ್ ವುಡ್ಗೆ ಎಂಟ್ರಿ ಆಗುತ್ತಿದ್ದಾರೆ. ಶಿವ 143 ಸಿನಿಮಾ ಇದೇ ಆಗಸ್ಟ್ 26ರಂದು ನಾಡಿನಾದ್ಯಂತ ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ನಟ ಧೀರನ್ ರಾಮ್ ಕುಮಾರ್ ಅವರು ಸಖತ್ ರಗಡ್ ಅಂಡ್ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರಂತೆ. ಈಗಾಗಲೇ ಈ ಶಿವ 143 ಸಿನಿಮಾದ ಟೀಸರ್ ಅಂಡ್ ಟ್ರೇಲರ್ ರಿಲೀಸ್ ಆಗಿದ್ದು, ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಹುಟ್ಟು ಹಾಕಿದೆ. ಚಿತ್ರದಲ್ಲಿ ಚಿಕ್ಕಣ್ಣ, ಸಾಧುಕೋಕಿಲ, ಚರಣ್ ರಾಜ್ ಸೇರಿದಂತೆ ಅನೇಕ ನಟರು ಇದ್ದು, ಧೀರನ್ ಅವರಿಗೆ ಜೋಡಿಯಾಗಿ ಮಾನ್ವಿತಾ ಕಾಮತ್ ನಟಿಸಿದ್ದಾರೆ. ಈ ಹಿಂದೆ ರ್ಯಾಂಬೋ2, ಕಾಣೆಯಾದವರ ಬಗ್ಗೆ ಪ್ರಕಟಣೆ ಅಂತಹ ಸಿನಿಮಾ ನಿರ್ದೇಶನ ಮಾಡಿರುವ ಅನಿಲ್ ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ಧಾರೆ.

ಇನ್ನು ಈ ಚಿತ್ರದ ಬಗ್ಗೆ ನಟ ಧೀರನ್ ರಾಮ್ ಕುಮಾರ್ ಅವರು ವಿಶ್ವಾಸದಲ್ಲಿದ್ದು, ಗೆಲ್ಲುತ್ತೇನೆ ಎಂಬ ಉತ್ಸಾಹ ಅವರಲ್ಲಿದೆಯಂತೆ. ಅದರ ಜೊತೆಗೆ ಮೈಸೂರಿನಲ್ಲಿ ಈ ಚಿತ್ರದ ಶೂಟಿಂಗ್ ನಡೆಯುವಾಗ ಶಿವಣ್ಣ ಮತ್ತು ಗೀತಾ ಶಿವರಾಜ್ ಕುಮಾರ್ ಇಬ್ಬರು ಭೇಟಿ ನೀಡಿ ಚಿತ್ರಕ್ಕೆ ಶುಭ ಹಾರೈಸಿದ್ದರಂತೆ. ಅದಲ್ಲದೆ ಮೈಸೂರಿನಲ್ಲಿ ಜೇಮ್ಸ್ ಚಿತ್ರದ ಫೈಟ್ಸ್ ಶೂಟಿಂಗ್ ನಡೆಯುತ್ತಿದ್ದಾಗ ಅಪ್ಪು ಅವರು ಧೀರನ್ ಅವರ ಕಣ್ಣುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ನಮ್ಮ ಕುಟುಂಬದಿಂದ ಒಬ್ಬ ಮಾಸ್ ಹೀರೋ ಬರುತ್ತಿದ್ದಾನೆ ಅಂತ ಅವರ ಗೆಳೆಯರೊಟ್ಟಿಗೆ ಹಂಚಿಕೊಂಡಿದ್ದರಂತೆ. ಇನ್ನು ಈ ಶಿವ 143 ಚಿತ್ರವನ್ನು ಡಾ.ಸೂರಿ, ಜಯಣ್ಣ,ಭೋಗೇಂದ್ರ ಅವರು ಬಂಡವಾಳ ಹೂಡಿದ್ದು ಜಯಣ್ಣ ಫಿಲಂಸ್ ವಿತರಣೆ ಮಾಡುತ್ತಿದ್ದಾರೆ. ಇತ್ತೀಚೆಗೆಷ್ಟೇ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಈ ಚಿತ್ರದ ಟೀಸರ್ ಲಾಂಚ್ ಮಾಡಿ ಶುಭ ಹಾರೈಸಿದ್ದರು. ಒಟ್ಟಾರೆಯಾಗಿ ಶಿವ143 ಚಿತ್ರದ ಮೂಲಕ ದೊಡ್ಮನೆಯಿಂದ ಧೀರನ್ ರಾಮ್ ಕುಮಾರ್ ಸಖತ್ ಆಗಿಯೇ ಎಂಟ್ರಿ ಕೊಡುತ್ತಿದ್ದಾರೆ.