ಇದೆ ಮೊದಲ ಬಾರಿಗೆ ಕಿಚ್ಚ ಸುದೀಪ್ ಬಗ್ಗೆ ಸಂದರ್ಶನದಲ್ಲಿ ಡಿಬಾಸ್ ನೇರವಾಗಿ ಹೇಳಿದ್ದೇನು ಗೊತ್ತಾ

ಚಂದನವನದ ಕುಚಿಕು ಗೆಳೆಯರೆಂದೇ ಗುರುತಿಸಿಕೊಂಡಿದ್ದ ಈ ಸ್ಟಾರ್ ನಟರಿಬ್ಬರು ಇದೀಗ ಪರಸ್ಪರ ದೂರವಾಗಿದ್ದಾರೆ.ಅದಕ್ಕೆ ಕಾರಣ ಹಲವಾರು.ಆದರೆ ಇವರಿಬ್ಬರ ಸ್ನೇಹ ದೂರ ಆಗಿದ್ದರೂ ಕೂಡ ಅವರ ಕಲೆಯ ಪ್ರತಿಭೆಯನ್ನ ಪರಸ್ಪರ ಒಬ್ಬರಿಗೊಬ್ಬರು ಮೆಚ್ಚಿ ಹೊಗಳುತ್ತಾರೆ.ಇದು ನಿಜಕ್ಕೂ ಅವರ ಔದಾರ್ಯದ ಗುಣ ಎಂದು ಹೇಳಬಹುದು.ಹೌದು ಸ್ಯಾಂಡಲ್ ವುಡ್ ನಲ್ಲಿ ಡಾ.ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸಾಹಸಸಿಂಹ ಡಾ. ವಿಷ್ಣುವರ್ಧನ್ ಆತ್ಮೀಯ ಗೆಳೆಯರು.ಇವರ ನಂತರದ ಚಂದನವನದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ಇಬ್ಬರು ಕುಚಿಕು ಗೆಳೆಯರು ಎಂದು ಗುರುತಿಸಿಕೊಂಡಿದ್ದರು.ಆದರೆ ಕೆಲವು ವರ್ಷಗಳ ಹಿಂದೀಚೆಗೆ ಕಾರಣಾಂತರಗಳಿಂದ ಇಬ್ಬರೂ ಸಹ ದೂರವಾಗಿದ್ದಾರೆ. ಮುಖ್ಯವಾಗಿ ಇದೀಗ ಇವರಿಬ್ಬರ ಸುದ್ದಿ ಬರಲು ಮುಖ್ಯಕಾರಣವೆಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸುದೀಪ್ ಅವರನ್ನು ಅವರ ಪ್ರತಿಭೆಯನ್ನು,ಕೆಲಸದ ಬಗ್ಗೆ ಅವರಲ್ಲಿರುವ ಡೆಡಿಕೇಶನ್ ಅನ್ನು ಹಾಡಿ ಹೊಗಳಿದ್ದಾರೆ.

ಹೌದು ಕಳೆದ ಮಾರ್ಚ್ ನಲ್ಲಿ ತೆರೆಕಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ,ತರುಣ್ ಸುಧೀರ್ ನಿರ್ದೇಶನದ, ಉಮಾಪತಿ ಶ್ರೀನಿವಾಸಗೌಡ ಅವರ ಅದ್ದೂರಿ ನಿರ್ಮಾಣದ ರಾಬರ್ಟ್ ಸಿನಿಮಾ ಉತ್ತಮ ಪ್ರದರ್ಶನ ಕಂಡು ಯಶಸ್ವಿ ನೂರು ದಿನಗಳನ್ನು ಪೂರೈಸಿದೆ.ಈ ರಾಬರ್ಟ್ ಸಿನಿಮಾದ ಸಕ್ಸಸ್ ಆದ ನಂತರ ಚಾಲೆಂಜ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಿರ್ಮಾಪಕರಾದ ಉಮಾಪತಿ ಶ್ರೀನಿವಾಸ ಪರಿಚಯವಾದುದರ ಬಗ್ಗೆ ತಿಳಿಸಿದ್ದಾರೆ.ನನಗೆ ನಿರ್ಮಾಪಕರು ಪರಿಚಯ ಆಗಿತ್ತು ನಿರ್ದೇಶಕ ಪ್ರೇಮ್ ಮೂಲಕ.ತದ ನಂತರ ನಿರ್ಮಾಪಕ ಉಮಾಪತಿ ಶ್ರೀ ನಿವಾಸ್ ಹೆಬ್ಬುಲಿ ಚಿತ್ರವನ್ನು ನಿರ್ಮಿಸಿದರು.ನಾನು ಈ ಹೆಬ್ಬುಲಿ ಸಿನಿಮಾ ನೋಡಿದೆ.

ಆ ಸಿನಿಮಾದಲ್ಲಿ ಉತ್ತಮವಾಗಿ ಸುದೀಪ್ ಕೂಡ ತನ್ನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು.ಸಿನಿಮಾ ಕೂಡ ಮೇಕಿಂಗ್ ನಲ್ಲಿ ಅದ್ದೂರಿತನವಿತ್ತು ಎಂದು ಮೆಚ್ಚುಗೆ ಮಾತುಗಳನ್ನು ಆಡಿರುವ ವೀಡಿಯೋವೊಂದು ವೈರಲ್ ಆಗಿದೆ.ಇನ್ನು ರಾಬರ್ಟ್ ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ರಿಲೀಸ್ ಆಗಿ ಬರೋಬ್ಬರಿ 80 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ದಾಖಲೆ ಮಾಡಿದೆ. ಇತ್ತೀಚಿಗೆ ಹಿಂದಿಯ ಡಬ್ಬಿಂಗ್ ನಲ್ಲಿ ರಾಬರ್ಟ್ ಸಿನಿಮಾ ಬರೋಬ್ಬರಿ ಒಂದು ಕೋಟಿ ವೀಕ್ಷಣೆ ಪಡೆದು ದಾಖಲೆ ನಿರ್ಮಾಣ ಮಾಡಿದೆ.

Leave a Reply

%d bloggers like this: