ಇದೇ ಬಂಗಲೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಕೆಎಲ್ ರಾಹುಲ್ ಹಾಗೂ ಸುನೀಲ್ ಶೆಟ್ಟಿ ಮಗಳು

ಖ್ಯಾತ ಕ್ರಿಕೆಟಿಗ ಕೆ‌ಎಲ್ ರಾಹುಲ್ ಮತ್ತು ಬಾಲಿವುಡ್ ತಾರೆ ನಟಿ ಅಥಿಯಾ ಶೆಟ್ಟಿ ಅವರ ವಿವಾಹ ಮಹೋತ್ಸವ ಎಲ್ಲಿ ಹೇಗೆ ನಡೆಯಲಿದೆ ಅನ್ನೋದರ ಬಗ್ಗೆ ಇದೀಗ ಭಾರಿ ಚರ್ಚೆ ಆಗುತ್ತಿದೆ. ಇದರ ನಡುವೆ ಇದೀಗ ಅಚ್ಚರಿಯ ಸುದ್ದಿಯೊಂದು ಹೊರ ಬಿದ್ದಿದೆ. ಹೌದು ಸಾಮಾನ್ಯವಾಗಿ ಸಿನಿಮಾ, ಕ್ರಿಕೆಟ್ ಅಥವಾ ಇನ್ನಿತರ ಉದ್ಯಮಿಗಳು, ಉದ್ಯಮಿಯ ಮಕ್ಕಳು ಬಹುದೊಡ್ಡ ಪ್ಯಾಲೇಸ್ ನಲ್ಲಿ, ಐಷಾರಾಮಿ ಹೋಟೆಲ್ ಗಳಲ್ಲಿ ಅಥವಾ ದುಬಾರಿ ಕಲ್ಯಾಣ ಮಂಟಪಗಳಲ್ಲಿ ಅದ್ದೂರಿಯಾಗಿ ಮದುವೆ ಆಗುತ್ತಾರೆ. ಅದೇ ರೀತಿಯಾಗಿ ರಾಹುಲ್ ಮತ್ತು ಅಥಿಯಾ ಶೆಟ್ಟಿ ಅವರು ಕೂಡ ಮದುವೆ ಆಗುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಇದೀಗ ಕೇಳಿ ಬರುತ್ತಿರೋ ಮಾಹಿತಿಯೇ ಬೇರೆ ಇದೆ. ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಇಬ್ಬರು ಪ್ರೀತಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ.

ಒಂದಷ್ಟು ವರ್ಷಗಳಿಂದ ಅನೇಕ ಸಿನಿಮಾ ಕಾರ್ಯಕ್ರಮಗಳು, ರೆಸ್ಟೋರೆಂಟ್, ಹೋಟೆಲ್ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಜೊತೆಯಾಗಿ ಹೋಗೋದು ಬರೋದು. ಡೇಟಿಂಗ್ ಮಾಡ್ತಿರೋ ವಿಚಾರ ಇಬ್ಬರ ಕುಟುಂಬಕ್ಕೂ ಕೂಡ ತಿಳಿದಿದೆ. ಅಥಿಯಾ ಶೆಟ್ಟಿ ಬೇರಾರು ಅಲ್ಲ ಬಾಲಿವುಡ್ ಖ್ಯಾತ ನಟ ಸುನೀಲ್ ಶೆಟ್ಟಿ ಅವರ ಪುತ್ರಿ. ತಮ್ಮ ಪುತ್ರಿ ಅಥಿಯಾ ಶೆಟ್ಟಿ ಕೆಎಲ್ ರಾಹುಲ್ ಅವರನ್ನ ಇಷ್ಟ ಪಡ್ತಿರೋದರ ಬಗ್ಗೆ ಗೊತ್ತಿದ್ದು, ತನ್ನ ಮಗಳ ಆಯ್ಕೆ ಸರಿಯಾಗಿದ್ದು, ಅವರಿಬ್ಬರು ಯಾವಾಗ ಮದುವೆಗೆ ಓಕೆ ಅಂದ್ರೂ ನಾವ್ ಮದುವೆ ಮಾಡೋಕೆ ಸಿದ್ದ ಎಂದು ಹೇಳಿದ್ದಾರೆ. ಕೆಎಲ್.ರಾಹುಲ್ ಅವರ ಬಗ್ಗೆ ಸುನೀಲ್ ಶೆಟ್ಟಿ ಅವರಿಗೆ ಅಪಾರ ಗೌರವ ಇದೆ. ಈ ಹಿಂದೆ ರಾಹುಲ್ ಅವರು ಏಷ್ಯಾಕಪ್, ವಿಶ್ವಕಪ್, ಸೌತ್ ಆಫ್ರಿಕಾ, ಆಸ್ಟ್ರೇಲಿಯಾ ಪ್ರವಾಸ ಅಂತ ಸಖತ್ ಬಿಝಿ಼ಯಾಗಿದ್ದಾರೆ.

ಇವರ ಬಿಡುವಿಲ್ಲದ ಸಮಯದಲ್ಲಿ ಮದುವೆ ಮಾಡುವುದಕ್ಕಾಗಿ ಅದಕ್ಕೆ ಸಮಯ ನಿಗದಿ ಮಾಡುವುದಕ್ಕೆ ನಮಗೆ ಸಾಧ್ಯವಾಗುತ್ತಿಲ್ಲ. ರಾಹುಲ್ ಮತ್ತು ಮಗಳು ಅಥಿಯಾ ಶೆಟ್ಟಿ ಯಾವಾಗ ಮದುವೆ ಆಗಬೇಕು ಎಂದು ಹೇಳುತ್ತಾರೋ ಅಂದೇ ನಾವು ಮದುವೆ ಮಾಡಲು ಸಿದ್ದ ಎಂದು ಸಾರ್ವಜನಿಕವಾಗಿಯೇ ಹೇಳಿದ್ದಾರೆ. ಸದ್ಯಕ್ಕೆ ರಾಹುಲ್ ಮತ್ತು ಅಥಿಯಾ ಶೆಟ್ಟಿ ಇಬ್ಬರು ಮುಂಬೈನ ಬಾಂದ್ರಾದಲ್ಲಿ ಐಷಾರಾಮಿ ಮನೆಯೊಂದನ್ನ ಖರೀದಿ ಮಾಡಿದ್ದು, ಇಬ್ಬರು ಕೂಡ ಅಲ್ಲೇ ವಾಸ ಮಾಡುತ್ತಿದ್ದಾರೆ. ಆದ್ರೇ ಇದೀಗ ಇವರಿಬ್ಬರ ಮದುವೆ ಆದಷ್ಟು ಬೇಗ ನಡೆಯಲಿದೆ ಅನ್ನೋ ಮಾಹಿತಿ ಅವರ ಆಪ್ತ ಮೂಲಗಳಿಂದ ತಿಳಿದು ಬಂದಿದೆ. ರಾಹುಲ್ ಮತ್ತು ಅಥಿಯಾ ಶೆಟ್ಟಿ ಅವರ ಮದುವೆ ಮುಂದಿನ ವರ್ಷ ಅಂದರೆ 2023ಕ್ಕೆ ಅಥಿಯಾ ಶೆಟ್ಟಿ ಅವರ ಮನೆಯಲ್ಲಿಯೇ ನಡೆಯಲಿದೆಯಂತೆ. ಖಂಡಾಲಾದಲ್ಲಿ ಇರೋ ಜಹಾನ್ ನಲ್ಲಿ ಕೆಎಲ್ ರಾಹುಲ್ ಅಥಿಯಾ ಶೆಟ್ಟಿ ಅವರನ್ನ ವರಿಸಲಿದ್ದಾರೆ ಎಂಬ ಸುದ್ದಿಯೊಂದು ಕೇಳಿ ಬಂದಿದೆ. ಸುನಿಲ್ ಶೆಟ್ಟಿ ಅವರ ಬಂಗಲೆಯಲ್ಲಿಯೇ ಮದುವೆ ಎಂದು ತಿಳಿದುಬಂದಿದೆ.

Leave a Reply

%d bloggers like this: