ಇದೇ ಅಗಸ್ಟ್ 19ರಂದು ಅದ್ದೂರಿಯಾಗಿ ಬಿಡುಗಡೆ ಆಗುತ್ತಿದೆ ಡಾಲಿ ಹಾಗೂ ರಚಿತಾ ರಾಮ್ ಅವರ ಹೊಸ ಚಿತ್ರ

ಮಾನ್ಸುನ್ ಮಳೆಗಾಲದಲ್ಲಿ ಮಾನ್ಸುನ್ ರಾಗ ಸಿನಿಮಾದ ಟ್ರೇಲರ್ ಕನ್ನಡ ಸಿನಿ ಪ್ರೇಕ್ಷಕರನ್ನ ಮೋಡಿ ಮಾಡುತ್ತಿದೆ. ಹೌದು ಡಾಲಿ ಧನಂಜಯ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ ಮಾನ್ಸುನ್ ರಾಗ ಸಿನಿಮಾದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮಾನ್ಸುನ್ ರಾಗ ಚಿತ್ರದ ಟ್ರೇಲರ್ ಭಾರಿ ವೀಕ್ಷಣೆ ಪಡೆದು ಅಪಾರ ಜನ ಮೆಚ್ಚುಗೆ ಪಡೆದುಕೊಂಡಿದೆ. ಟ್ರೇಲರ್ ನಲ್ಲಿ ಸಿನಿಮಾದ ಮೇಕಿಂಗ್, ಮಳೆಯಲ್ಲಿ ನಡೆಯುವ ಫೈಟ್ಸ್, ಬ್ಯಾಗ್ರೌಂಡ್ ಮ್ಯೂಸಿಕ್, ಕಣ್ಮನ ಸೆಳೆಯುವ ದೃಶ್ಯ ಸನ್ನಿವೇಶಗಳು ಇದೆಲ್ಲದರದ ಜೊತೆಗೆ ಕಣ್ಣಿನಲ್ಲೇ ಭಾವನೆ ವ್ಯಕ್ತಪಡಿಸಿ ಅಭಿನಯಿಸಿರುವ ನಟಿ ರಚಿತಾ ರಾಮ್ ಮತ್ತು ಡಾಲಿ ಧನಂಜಯ್ ಅವರ ಮನೋಜ್ಞ ಅಭಿನಯ ಕಂಡು ಟ್ರೇಲರ್ ನಲ್ಲಿಯೇ ಚಿತ್ರವನ್ನ ನೋಡಲೇಬೇಕು ಎನಿಸುವಂತಹ ಕುತೂಹಲ ಮೂಡಿಸಿ ಮಾನ್ಸುನ್ ರಾಗ ಚಿತ್ರದ ಟ್ರೇಲರ್ ಕನ್ನಡ ಸಿನಿ ಪ್ರೇಕ್ಷಕರನ್ನ ಮೋಡಿ ಮಾಡಿದೆ.

ಇತ್ತೀಚೆಗೆ ಕನ್ನಡ ಸಿನಿ ಪ್ರಿಯರನ್ನ ಚಿತ್ರ ಮಂದಿರಗಳಿಗೆ ಕರೆತರುವುದು ಅಷ್ಟು ಸುಲಭದ ಮಾತಲ್ಲ. ಸಿನಿಮಾದ ಮೇಕಿಂಗ್, ಸಾಹಿತ್ಯ, ಸಂಗೀತ, ಬ್ಯಾಗ್ರೌಂಡ್ ಮ್ಯೂಸಿಕ್ ಅಂತಹ ಅಂಶಗಳು ಮೊದಲು ಇಷ್ಟವಾದಲ್ಲಿ ಮಾತ್ರ ಪ್ರೇಕ್ಷಕ ಸಿನಿಮಾ ನೋಡಲು ಬಯಸುತ್ತಾನೆ. ಇಂತಹ ಸಂಧರ್ಭದಲ್ಲಿ ನಮ್ಮ ಕನ್ನಡ ಸಿನಿ ಪ್ರೇಕ್ಷಕರನ್ನ ತನ್ನ ಟ್ರೇಲರ್ ನಿಂದಾನೇ ಸಿನಿಮಾ ಭಾರಿ ಗಮನ ಸೆಳೆದು ಮಾನ್ಸುನ್ ರಾಗ ಚಿತ್ರ ಸದ್ದು ಮಾಡುತ್ತಿದೆ. ಈ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ನಟಿ ರಚಿತಾ ರಾಮ್, ಡಾಲಿ ಧನಂಜಯ್ ಸೇರಿದಂತೆ ಇಡೀ ಚಿತ್ರತಂಡ ಭಾಗವಹಿಸಿತ್ತು. ಅಭಿನಯದಲ್ಲಿ ನಟ ರಾಕ್ಷಸನಂತೆ ಇರುವ ಧನಂಜಯ್ ಅವರ ಜೊತೆ ನಟಿಸುವುದು ತುಂಬಾನೇ ಚಾಲೇಂಜಿಂಗ್ ಆಗಿತ್ತು. ಲೈಂಗಿಕ ಕಾರ್ಯಕರ್ತೆ ಪಾತ್ರವನ್ನು ತುಂಬಾ ಅಚ್ಚುಕಟ್ಟಾಗಿ ಕಟ್ಟಿಕೊಡಲಾಗಿದೆ. ನಾನು ಈ ಹಿಂದೆ ನಟಿಸಿದ ಪುಷ್ಪಕ ವಿಮಾನ ಚಿತ್ರತಂಡವೇ ಈ ಚಿತ್ರದಲ್ಲಿಯೂ ಕೂಡ ಕೆಲಸ ಮಾಡಿದೆ. ನನಗೆ ಈ ಚಿತ್ರದ ಎಲ್ಲಾ ಹಾಡುಗಳು ಕೂಡ ತುಂಬಾ ಇಷ್ಟವಾಗಿವೆ.

ಒಟ್ಟಾರೆಯಾಗಿ ಮಾನ್ಸುನ್ ರಾಗ ಸಿನಿಮಾ ಪ್ರೇಕ್ಷಕರಿಗೆ ಖಂಡಿತಾ ಇಷ್ಟವಾಗಲಿದೆ ಎಂದು ರಚಿತಾರಾಮ್ ಚಿತ್ರದ ಬಗ್ಗೆ ತಿಳಿಸಿದ್ದಾರೆ. ಇನ್ನು ಚಿತ್ರದ ನಾಯಕ ನಟ ಧನಂಜಯ್ ಮಾತನಾಡಿ ಮಾನ್ಸುನ್ ರಾಗ ಸಿನಿಮಾವನ್ನ ನಾವು ರಾತ್ರಿ ಇಡೀ ಮಳೆಯಲ್ಲಿ ಶೂಟಿಂಗ್ ಮಾಡಿ ತುಂಬ ಕಷ್ಟಪಟ್ಟು ಸಿನಿಮಾ ಮಾಡಿದ್ದೀವಿ. ರಚಿತಾ ರಾಮ್ ಅವರು ಕನ್ನಡ ಬಿಝೆಯೆಸ್ಟ್ ನಟಿ. ಅವರು ನನ್ನೊಟ್ಟಿಗೆ ನಟಿಸಿರುವುದು ನನಗೆ ಸಂತೋಷವಾಗಿದೆ. ಈ ಸಿನಿಮಾದಲ್ಲಿ ಯಾವುದೇ ರೀತಿಯ ಮುಜುಗರ ತರುವಂತಹ ದೃಶ್ಯಗಳಿಲ್ಲ. ಕುಟುಂಬ ಕೂತು ಸಿನಿಮಾ ನೋಡಬಹುದು ಎಂದು ತಿಳಿಸಿದ್ದಾರೆ. ಇನ್ನು ಮಾನ್ಸುನ್ ರಾಗ ಸಿನಿಮಾವನ್ನು ಎಸ್.ರವೀಂದ್ರ ನಾಥ್ ನಿರ್ದೇಶನ ಮಾಡಿದ್ದು, ಚಿತ್ರಕ್ಕೆ ವಿಖ್ಯಾತ್ ಬಂಡವಾಳ ಹೂಡಿಕೆ ಮಾಡಿದ್ದಾರೆ. ಚಿತ್ರದಲ್ಲಿ ಸುಹಾಸಿನಿ, ಅಚ್ಯುತ್ ಕುಮಾರ್, ಯಶಾ ಶಿವಕುಮಾರ್ ಸೇರಿದಂತೆ ಇನ್ನಿತರ ಕಲಾವಿದರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದೇ ಆಗಸ್ಟ್ 19ರಂದು ಮಾನ್ಸುನ್ ಮಳೆಗಾಲದಲ್ಲಿ ಮಾನ್ಸುನ್ ರಾಗ ಸಿನಿಮಾ ಗ್ರ್ಯಾಂಡ್ ಆಗಿ ರಾಜ್ಯಾದ್ಯಂತ ರಿಲೀಸ್ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ.