ಇದ್ದಕ್ಕಿದ್ದಂತೆ ಒನಕೆ ಹಿಡಿದು ನಿಂತ ಚಾರು, ಪ್ರೇಕ್ಷಕರಲ್ಲಿ ಹೆಚ್ಚಿತು ಕುತೂಹಲ

ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರೋ ಜನಪ್ರಿಯ ಧಾರಾವಾಹಿಗಳಲ್ಲಿ ರಾಮಾಚಾರಿ ಧಾರಾವಾಹಿ ಕೂಡಾ ಒಂದು. ಕೌಟುಂಬಿಕ ವಿಭಿನ್ನ ಕಥಾಹಂದರ ಹೊಂದಿರೋ ರಾಮಾಚಾರಿ ಧಾರಾವಾಹಿ ಸದ್ಯಕ್ಕೆ ನಾಡಿನಾದ್ಯಂತ ಮನೆ ಮಾತಾಗಿದೆ. ಇದೀಗ ರಾಮಾಚಾರಿ ಧಾರಾವಾಹಿ ತಂಡ ವೀಕ್ಷಕರಿಗೆ ಹೊಸದೊಂದು ಅನುಭವ ನೀಡಲು ಹೊರಟಿದೆ. ಅದೇನಪ್ಪಾ ಅಂದ್ರೆ ರಾಮಾಚಾರಿ ಧಾರಾವಾಹಿ ತಂಡ ಚಿತ್ರದುರ್ಗದ ಕಲ್ಲಿನ ಕೋಟೆಯಲ್ಲಿ ಚಿತ್ರೀಕರಣ ಮಾಡುತ್ತಿದೆ. ಹಾಗಾಂತ ಧಾರಾವಾಹಿ ತಂಡ ಸುಖಾ ಸುಮ್ಮನೆ ಯಾವುದೋ ದೃಶ್ಯ ಚಿತ್ರೀಕರಣಕ್ಕಾಗಿ ಕಲ್ಲಿನ ಕೋಟೆಗೆ ಬಂದಿಲ್ಲ. ಅದರ ಬದಲಿಗೆ ರಾಮಾಚಾರಿ ಧಾರಾವಾಹಿ ಕಥೆಯಲ್ಲಿ ಹೊಸದೊಂದು ಅಂಶವನ್ನ ಎಳೆದು ತಂದು ಅಲ್ಲಿ ನಾಯಕ ಮದಕರಿ ನಾಯಕ ಪಾತ್ರದಲ್ಲಿ ಕಾಣಿಸಿಕೊಳ್ಳುವಂತೆ, ಕಥಾ ನಾಯಕಿ ಓಬವ್ವನ ಪಾತ್ರದಲ್ಲಿ ಕಾಣಿಸಿಕೊಳ್ಳುವಂತೆ ಮಾಡಿದ್ದಾರೆ‌. ಚಾರು ಒನಕೆ ಹಿಡಿದು ಮಿಂಚಿದರೆ, ಕಹಳೆ ಊದುತ್ತಾ ಮದಕರಿ ನಾಯಕನಾಗಿ ರಾಮಾಚಾರಿ ಗಮನ ಸೆಳೆದಿದ್ದಾರೆ.

ರಾಮಾಚಾರಿ ಧಾರಾವಾಹಿಯಲ್ಲಿ ಈ ಎಪಿಸೋಡ್ ಗಳು ಕೆಲವೇ ದಿನಗಳಲ್ಲಿ ಪ್ರಸಾರ ಆಗಲಿದೆ ಎಂದು ತಿಳಿದು ಬಂದಿದೆ. ರಾಮ್ ಜಿ ಅವರ ಸಾರಥ್ಯದಲ್ಲಿ ಮೂಡಿ ಬರುತ್ತಿರೋ ಈ ರಾಮಾಚಾರಿ ಧಾರಾವಾಹಿ ಇದೀಗ ಕನ್ನಡದ ನಂಬರ್ ಒನ್ ಧಾರಾವಾಹಿಯಾಗಿದೆ. ರಾಮಾಚಾರಿ ಧಾರಾವಾಹಿ ಕನ್ನಡ ಕಿರುತೆರೆಯಲ್ಲಿ ಹೊಸತನವನ್ನ ತರುತ್ತಿದ್ದು, ಮೇಕಿಂಗ್ ನಲ್ಲಿ ವಿಭಿನ್ನ ಬಗೆಯಾಗಿ ಕಾಣುತ್ತಿದೆ. ಅದ್ದೂರಿತನದಲ್ಲಿ ಔಟ್ ಡೋರ್ ಶೂಟ್ ಮಾಡೋ ಕೆಲವೇ ಕೆಲವು ಧಾರಾವಾಹಿಗಳಲ್ಲಿ ಇದೀಗ ರಾಮಾಚಾರಿ ಧಾರಾವಾಹಿ ಕೂಡ ಸೇರ್ಪಡೆಗೊಂಡಿದೆ. ಇನ್ನು ಈ ಚಿತ್ರದುರ್ಗದ ಕಲ್ಲಿನ ಕೋಟೆಯಲ್ಲಿ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ನಾಗರ ಹಾವು ಚಿತ್ರದ ಸನ್ನಿವೇಶ ದೃಶ್ಯಗಳು ಕನ್ನಡ ಸಿನಿ ಪ್ರೇಕ್ಷಕರಿಗೆ ಇಂದಿಗೂ ಕೂಡ ರಾಮಾಚಾರಿ ಪಾತ್ರದಲ್ಲಿ ವಿಷ್ಣು ವರ್ಧನ್ ಅವರ ಅಮೋಘ ನಟನೆ ಪ್ರೇಕ್ಷಕರಿಗೆ ಕಣ್ಮುಂದೆ ಹಾದು ಹೋಗುತ್ತದೆ. ಇದೀಗ ರಾಮಾಚಾರಿ ಧಾರಾವಾಹಿ ತಂಡ ಚಿತ್ರದುರ್ಗದಲ್ಲಿ ಸೆರೆದಿಡಿದಿರುವ ದೃಶ್ಯ ಸನ್ನಿವೇಶಗಳು ಕಿರುತೆರೆ ವೀಕ್ಷಕರಿಗೆ ಎಷ್ಟರ ಮಟ್ಟಿಗೆ ಮೋಡಿ ಮಾಡಲಿದೆ ಅನ್ನೋದನ್ನ ಕಾದು ನೋಡಬಹುದಾಗಿದೆ.

Leave a Reply

%d bloggers like this: