ICU ನಲ್ಲಿದ್ದ ಪಾಕಿಸ್ತಾನ ಆಟಗಾರ ರಿಜ್ವಾನ್ ಭಾರತೀಯ ವೈದ್ಯನಿಗೆ ಕೊಟ್ಟ ವಿಶೇಷ ಗಿಫ್ಟ್ ಏನು ಗೊತ್ತಾ?

ಭಾರತೀಯ ವೈದ್ಯನಿಗೆ ಪಾಕ್ ಕ್ರಿಕಟಿಗ ವಿಶೇಷ ಉಡುಗೊರೆ ನೀಡಿದ್ದಾರೆ. ಕ್ರೀಡೆಗಳು ದೇಶ ದೇಶಗಳ ನಡುವೆ ಉತ್ತಮ ಸೌಹಾರ್ದಯುತ ಭಾವನೆಯನ್ನು ಮೂಡುವುದಕ್ಕೆ ಪೂರಕವಾಗಿರುತ್ತವೆ. ಅಂತೆಯೇ ಕೆಲವೊಮ್ಮೆ ಆಟಗಾರರು ಪರಸ್ಪರ ತಮ್ಮ ಸಹ ಸ್ಪರ್ಧಿ ಆಟಗಾರರಿಗೆ ಗಾಯಗಳಾದ ತಕ್ಷಣ ಸ್ಪಂದಿಸಿ ಅವರಿಗೆ ನೆರವಾಗುವುದನ್ನ ಮೈದಾನದಲ್ಲೇ ನೋಡಿದ್ದೇವೆ. ಅದಕ್ಕೆ ಉಪಕಾರ ಸ್ಮರಣೆ ಕೂಡ ಇದ್ದೇ ಇರುತ್ತದೆ.ಅಂತೆಯೇ ಇದೀಗ ಪಾಕ್ ಕ್ರಿಕೆಟಿಗ ಭಾರತೀಯ ವೈದ್ಯರ ಕುಶಲೋಪರಿ ಉಪಕಾರವನ್ನು ಸ್ಮರಿಸಿ ಉಡುಗೊರೆಯೊಂದನ್ನ ನೀಡಿದ್ದಾರೆ.ಕ್ರಿಕೆಟ್ ಅಂದ ಮೇಲೆ ಅಲ್ಲಿ ಆಟಗಾರರಿಗೆ ಗಾಯಗಳಾಗುವುದು ಸಹಜವಾಗಿರುತ್ತದೆ. ಹಾಗೆಯೇ ಇತ್ತೀಚೆಗೆ ಟಿ-ಟ್ವೆಂಟಿ ವಿಶ್ವಕಪ್ ಕ್ರಿಕೆಟ್ ನಲ್ಲಿ ಆಸ್ಟ್ರೇಲಿಯಾ ವಿರುದ್ದ ಪಾಕಿಸ್ತಾನ ಸೆಣಸಾಡಿತ್ತು.ಈ ಸೆಣಸಾಟದಲ್ಲಿ ಪಾಸಿಸ್ತಾನ ತನ್ನದೇ ತಪ್ಪಿನಿಂದ ಪರಾಭವಗೊಂಡಿತ್ತು.

ಇನ್ನು ಪಾಕ್ ಕ್ರಿಕೆಟಿಗ ಮೊಹಮ್ಮದ್ ರಿಜ್ವಾನ್ ಅವರಿಗೆ ಎರಡನೇ ಸೆಮಿ ಫೈನಲ್ ಪಂದ್ಯದ ಮುನ್ನದಿನ ಶ್ವಾಸನಾಳದೊಂದಿಗೆ ಉರಿಯೂತ ಕಾಣಿಸಿಕೊಂಡು ಸಮಸ್ಯೆ ಉಂಟು ಮಾಡಿತ್ತು.ಬಳಿಕ ಅವರನ್ನು ತಕ್ಷಣ ದುಬೈನಲ್ಲಿನ ಆಸ್ಪತ್ರೆಗೆ ದಾಖಲು ಮಾಡಲಾಯಿತು.ಇಲ್ಲಿ ಪಾಕಿಸ್ತಾನ ತಂಡದಲ್ಲಿ ವೈದ್ಯರಾಗಿದ್ದ ಭಾರತೀಯ ಮೂಲದ ಶಹೀರ್ ಸೈನಾಲಬ್ದಿನ್ ಮೊಹಮ್ಮದ್ ರಿಜ್ವಾನ್ ಅವರಿಗೆ ಚಿಕಿತ್ಸೆ ನೀಡಿದ್ದರು.ಇದಾದ ಬಳಿಕ ಚೇತರಿಸಿಕೊಂಡ ಮೊಹಮ್ಮದ್ ರಿಜ್ವಾನ್ ಅವರು ಪಂದ್ಯದಲ್ಲಿ ಭರ್ಜರಿ ಅರ್ಧ ಶತಕ ಸಿಡಿಸಿ ಎಲ್ಲರಿಗೂ ಅಚ್ಚರಿ ಮೂಡುವಂತೆ ರೋಚಕ ಆಟವಾಡಿದ್ದರು. ಡಾಕ್ಟರ್ ನಜೀಬ್ ಸೊಮ್ರೋ ಅವರು ಮೊಹಮ್ಮದ್ ರಿಜ್ವಾನ್ ಅವರ ಬಗ್ಗೆ ಸೆಮೀಸ್ ನಲ್ಲಿ ಆಟವಾಡಲು ಬಹಳ ಉತ್ಸುಕರಾಗಿದ್ದ ಅವರು ಚಿಕಿತ್ಸೆ ಸಕರಾತ್ಮಕವಾಗಿ ಸ್ಪಂದಿಸಿ ಬೇಗ ಗುಣಮುಖರಾದರು.

ನನಗೆ ಅವರ ಆರೋಗ್ಯದಲ್ಲಿ ಬಹುಬೇಗ ಚೇತರಿಕೆ ಕಾಣಿಸಿಕೊಂಡದ್ದು ಅಚ್ಚರಿಯೂ ಕೂಡ ಆಯಿತು.ಏಕೆಂದರೆ ಮೊಹಮ್ಮದ್ ರಿಜ್ವಾನ್ ಅವರು ಸರಿ ಸುಮಾರು ಮೂವತ್ತೈದು ಗಂಟೆಗಳ ಕಾಲ ತುರ್ತು ಚಿಕಿತ್ಸಾ ಘಟಕದಲ್ಲಿ ಇದ್ದಾಗ ಅವರು ಇಷ್ಟು ಬೇಗ ಹುಷಾರಾಗುತ್ತಾರೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ.ಆದರೆ ಅವರಲ್ಲಿದ್ದ ಆತ್ಮವಿಶ್ವಾಸ ಅವರನ್ನ ಬೇಗ ಚೇತರಿಕೆ ಆಗುವಂತೆ ಮಾಡಿದೆ.ಇನ್ನು ಮೊಹಮ್ಮದ್ ರಿಜ್ವಾನ್ ಅವರು ನನಗೆ ಪಂದ್ಯದಲ್ಲಿ ಆಡಲು ಸಾಧ್ಯವಾಗಿದ್ದು ವೈದ್ಯರು ನನ್ನ ಆರೋಗ್ಯದ ಬಗ್ಗೆ ವಹಿಸಿದ ಕಾಳಜಿ ಅವರ ಸೇವೆಗೆ ನಾನು ಆಭಾರಿಯಾಗಿರುತ್ತೇನೆ ಎಂದು ವೈದ್ಯರಾದ ಶಹೀರ್ ಅವರಿಗೆ ತಮ್ಮ ತಂಡದ ಜೆರ್ಸಿಗೆ ತಮ್ಮ ಸಹಿ ಮಾಡಿ ಗಿಫ್ಟ್ ಆಗಿ ನೀಡಿದ್ದಾರೆ

Leave a Reply

%d bloggers like this: