ಮನೆಯಲ್ಲಿ ಒಂದು ಮುಷ್ಠಿ ಅಕ್ಕಿಯಿಂದ ಈ ರೀತಿ ಲಕ್ಷ್ಮಿ ಪೂಜೆ ಮಾಡಿದರೆ ಮುಟ್ಟಿದೆಲ್ಲಾ ಬಂಗಾರ

ಪ್ರತಿ ಶುಕ್ರವಾರ ನಿಮ್ಮ ಮನೆಯಲ್ಲಿ ನೀವು ಈ ಒಂದು ಕೆಲಸ ಮಾಡಿದರೆ ನಿಮಗೆ ಲಕ್ಷ್ಮಿ ಅನುಗ್ರಹವಾಗಿ ನಿಮ್ಮ ಎಲ್ಲಾ ಕಷ್ಟ ಕಾರ್ಪಣ್ಯಗಳು ದೂರ ಆಗಲಿದೆ.ಹೌದು ಪ್ರಸ್ತುತ ಕೋವಿಡ್ ಲಾಕ್ಡೌನ್ ಬಿಕ್ಕಟ್ಟಿನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಬಹುತೇಕರಿಗೆ ಅವರ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಇನ್ನೂ ಕೆಲವರಿಗೆ ಮನೆ ಮಂದಿಯೆಲ್ಲಾ ದುಡಿದರು ಕೂಡ ಹಣಕಾಸಿನ ತೊಂದರೆ ತಪ್ಪಿದ್ದಲ್ಲ.ಕೈ ತುಂಬಾ ಸಂಬಳ ಪಡೆಯುವ ವ್ಯಕ್ತಿಗಳಿಗೆ ತಿಂಗಳ ಕೊನೆಯಲ್ಲಿ ಸಣ್ಣ ಪುಟ್ಟ ಖರ್ಚಿಗೂ ಒದ್ದಾಡುವಂತಹ ಸಂಧರ್ಭ ಸನ್ನಿವೇಶ ಎದುರಾಗುತ್ತದೆ.ಇಂತಹ ಅನೇಕ ಆರ್ಥಿಕ ಸಮಸ್ಯೆಗಳಿಗೆ ಕೊಂಚ ಪರಿಹಾರ ದೊರೆಯಬೇಕಾದರೆ ನಿಮ್ಮ ನಿಮ್ಮ ನಂಬಿಕೆಯ ಅನುಸಾರ ಕೆಲವು ಆಚರಣೆ ಮಾಡಿದರೆ ನಿಮ್ಮ ಈ ಆರ್ಥಿಕ ಸಮಸ್ಯೆಗಳಿಂದ ದೂರ ಇರಬಹುದು. ಅಂತಹದ್ದೇ ಒಂದು ಲಕ್ಷ್ಮಿ ಕೃಪೆಗೆ ಪಾತ್ರರಾಗುವಂತಹ ನಿಯಮವನ್ನು ಹಿರಿಯರು ನಮಗೆ ತಿಳಿಸಿಕೊಟ್ಟಿದ್ದಾರೆ.ಈ ನಿಯಮವನ್ನು ಕೆಲವು ಕುಟುಂಬದಲ್ಲಿ ನಿರಂತರವಾಗಿ ಪರಿಪಾಲನೆ ಮಾಡಿಕೊಂಡು ಬಂದಿರುತ್ತಾರೆ.

ಹೌದು ಪ್ರತಿ ಶುಕ್ರವಾರದಂದು ನೀವು ಎಂದಿನಂತೆ ಪೂಜೆ ಮಾಡುವ ಹಾಗೆಯೇ ಲಕ್ಷ್ಮಿಯನ್ನು ಪೂಜಿಸಬೇಕು.ಅದರ ಜೊತೆಗೆ ವಿಶೇಷವಾಗಿ ಲಕ್ಷ್ಮಿ ದೇವಿಯ ಫೋಟೋ,ಒಂದು ಮುಷ್ಟಿ ಅಕ್ಕಿ,ಒಂದೆರಡು ನಾಣ್ಯ,ಮೂರು ಲೋಟ ಜೊತೆಗೆ ದೀಪ ಇವು ಈ ವ್ರತ ನೇಮಕ್ಕೆ ಬೇಕಾಗುವ ವಸ್ತುಗಳು. ಲಕ್ಷ್ಮಿದೇವಿಯ ಫೋಟೋವನ್ನು ಅರಿಶಿನದ ನೀರಿನಲ್ಲಿ ಪರಿಶುದ್ದಗೊಳಿಸಿ ಅದಕ್ಕೆ ಅರಿಶಿನ,ಕುಂಕುಮ,ಹೂವನ್ನು ಅಲಂಕರಿಸಿ.ತದನಂತರ ಅಲಂಕರಿಸಿದ ಈ ಫೋಟೋ ಮುಂಭಾಗ ಬೆಳ್ಳಿಯದದ್ದಾರೆ ಬೆಳ್ಳಿಯದ್ದು,ಇಲ್ಲವಾದಲ್ಲಿ ಇರುವಂತಹ ಮೂರು ಲೋಟಗಳನ್ನು ಇಟ್ಟು,ಈ ಮೂರೂ ಲೋಟದೊಳಗೆ ಒಂದು ಮುಷ್ಟಿಯಷ್ಟು ಅಕ್ಕಿಯನ್ನ ಅದರೊಳಗೆ ತುಂಬಿ. ಅಕ್ಕಿಯು ಸಾಕ್ಷಾತ್ ಅನ್ನಪೂರ್ಣೇಶ್ವರಿಯ ಸ್ವರೂಪ ಆಗಿರುವುದರಿಂದ ಅಕ್ಕಿಯನ್ನ ಪೂಜೆಯಲ್ಲಿ ಬಳಸಿದರೆ ತುಂಬಾ ಶ್ರೇಯಸ್ಸುಕರವಾದದು.

ಈ ಅಕ್ಕಿ ತುಂಬಿದ ಲೋಟಗಳ ಮೇಲೆ ಒಂದೊಂದು ನಾಣ್ಯಗಳನ್ನ ಇರಿಸಿ.ತದ ನಂತರ ಲಕ್ಷ್ಮಿ ದೇವಿಯ ಫೋಟೋ ಮುಂದೆ ತುಪ್ಪ ಬಳಸಿ ಎರಡು ಬತ್ತಿಯ ದೀಪ ಹಚ್ಚಿಟ್ಟು ,ಸಿಹಿ ನೈವೇದ್ಯವನ್ನು ದೇವಗೆ ಅರ್ಪಿಸಬೇಕು. ನಿಮ್ಮ ಮನದಲ್ಲಿ ಸಂಪೂರ್ಣವಾಗಿ ಲಕ್ಷ್ಮಿ ದೇವಿಯನ್ನ ಸ್ಥಾಪಿಸಿಕೊಂಡು ದೇವರಲ್ಲಿ ತಮ್ಮ ಕಷ್ಟಗಳನ್ನ ತಿಳಿಸಿ,ಪರಿಹಾರ ಮಾಡುವಂತೆ,ದಾರಿ ತೋರುವಂತೆ ಬೇಡಿಕೊಳ್ಳಬೇಕು.ಈ ರೀತಿಯಾಗಿ ಸುಮಾರು ಇಪ್ಪತ್ತೊಂದು ಶುಕ್ರವಾರ ಪರಿಶುದ್ದತೆಯಿಂದ ನೇಮನಿಷ್ಠೆಗಳನ್ನ ಮಾಡಿದರೆ ನೀವು ಲಕ್ಷ್ಮಿ ಕೃಪೆಗೆ ಪಾತ್ರರಾಗುತ್ತೀರಿ. ಲಕ್ಷ್ಮಿ ದೇವಿಯು ನಿಮ್ಮ ಮತ್ತು ನಿಮ್ಮ ಕುಟುಂಬದ ಮೇಲೆ ಅನುಗ್ರಹ ಬೀರಿ ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳನ್ನು ದೂರ ಮಾಡಿ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಏರ್ಪಡುವಂತೆ ಮಾಡುತ್ತಾಳೆ.

Leave a Reply

%d bloggers like this: