ಹುಟ್ಟುಹಬ್ಬದ ಸಂಭ್ರಮಕ್ಕೆ ಪತ್ನಿಗೆ ದುಬಾರಿ ಉಡುಗೊರೆ ನೀಡಿದ ದಕ್ಷಿಣದ ಖ್ಯಾತ ನಟ

ಸಿನಿಮಾ ಸೆಲೆಬ್ರಿಟಿಗಳು ಏನ್ ಮಾಡಿದ್ರು ಸುದ್ದಿಯಾಗುತ್ತೆ. ಅವರು ಸಿನಿಮಾ ಮಾಡ್ಲೀ, ಬಿಡ್ಲೀ ಆದ್ರೇ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಯಾವುದೇ ರೀತಿ ಸಂಭ್ರಮ ಮಾಡಿದರು ಕೂಡ ಅದು ಮಾತ್ರ ಭಾರಿ ಸುದ್ದಿ ಆಗುತ್ತೆ. ಜ್ಯೂನಿಯರ್ ಎನ್.ಟಿ.ಆರ್ ಅವರು ಸದ್ಯಕ್ಕೆ ತ್ರಿಬರ್ ಆರ್ ಚಿತ್ರದ ಯಶಸ್ಸಿನ ಸಂಭ್ರಮದಲ್ಲಿದ್ದಾರೆ. ಸಿನಿಮಾಗೆ ಎಷ್ಟು ಬೆಲೆ ಮೌಲ್ಯ ನೀಡುತ್ತಾರೋ, ಅಷ್ಟೇ ತಮ್ಮ ಕುಟುಂಬಕ್ಕೂ ಕೂಡ ಸಮಯ ನೀಡಿ ಹೆಂಡತಿ, ಮಕ್ಕಳೊಟ್ಟಿಗೆ ಸಮಯ ಕಳೆಯುತ್ತಾರೆ. ಜ್ಯೂನಿಯರ್ ಎನ್.ಟಿ.ಆರ್ ಅವರು ಮಾಸ್ ಕ್ಲಾಸ್ ಹೀರೋ. ಅವರಿಗೆ ತೆಲುಗು ರಂಗದಲ್ಲಿ ಅಪಾರ ಅಭಿಮಾನಿ ಬಳಗವಿದೆ. ಇತ್ತೀಚೆಗೆ ಅವರು ಹೈದ್ರಾಬಾದ್ ಸಮೀಪ ಆರುವರೆ ಎಕರೆ ಜಮೀನು ಖರೀದಿ ಮಾಡಿದ್ದರು. ಅದರ ಒಂದಷ್ಟು ರಿಜಿಸ್ಟ್ರೆಶನ್ ಫೋಟೋ ಹಾಕಿ ಭಾರಿ ಸುದ್ದಿಯಾಗಿದ್ದರು. ಆ ಜಮೀನಿನಲ್ಲಿ ವ್ಯವಸಾಯದ ಜೊತೆಗೆ ಇದೀಗ ತಾರಕ್ ರಾಮ್ ಅವರು ಫಾರ್ಮ್ ಹೌಸ್ ವೊಂದನ್ನ ಕೂಡ ಮಾಡಿದ್ದಾರೆ.

ಈ ಫಾರ್ಮ್ ಹೌಸ್ ಗೆ ಬೃಂದಾವನಂ ಎಂದು ನಾಮಕರಣ ಮಾಡಿದ್ದಾರೆ. 2010ರಲ್ಲಿ ತಾರಕ್ ರಾಮ್ ಅವರು ಬೃಂದಾವನಂ ಎಂಬ ಚಿತ್ರ ಮಾಡಿದ್ದರು. ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಇದೀಗ ತಮ್ಮ ಫಾರ್ಮ್ ಹೌಸ್ಗೆ ಬೃಂದಾವನಂ ಎಂದೇ ಹೆಸರಿಟ್ಟು ತಮ್ಮ ಪತ್ನಿ ಲಕ್ಷ್ಮಿ ಪಾರ್ವತಿ ಅವರ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನೀಡಿದ್ದಾರೆ. ತಮ್ಮ ಪತಿ ತಾರಕ್ ರಾಮ್ ಅವರು ಈ ಒಂದು ಫಾರ್ಮ್ ಹೌಸ್ ಅನ್ನ ತಮಗೆ ಬರ್ಥ್ ಡೇ ಗಿಫ್ಟ್ ನೀಡಿರೋದಕ್ಕೆ ಲಕ್ಷ್ಮಿ ಪಾರ್ವತಿ ಅವರು ಕೂಡ ಸಖತ್ ಎಕ್ಸೈಟ್ ಆಗಿದ್ದಾರೆ. ಇನ್ನು ತಾರಕ್ ರಾಮ್ ಅವರು ತಮ್ಮ ಪ್ರೀತಿಯ ಮಡದಿ ಲಕ್ಷ್ಮಿ ಪಾರ್ವತಿ ಮತ್ತು ತಮ್ಮ ಇಬ್ಬರು ಮಕ್ಕಳೊಟ್ಟಿಗೆ ಆಗಾಗ ವೆಕೇಶನ್ ಸಮಯದಲ್ಲಿ ಹೊರ ದೇಶಕ್ಕೆ ಪ್ರವಾಸ ಹೋಗಿ ಕುಟುಂಬವನ್ನ ಸಂತಸ ಪಡಿಸುತ್ತಿರುತ್ತಾರೆ. ಅದೇ ರೀತಿ ಇದೀಗ ಎನ್.ಟಿ.ಆರ್ ತಮ್ಮ ಪತ್ನಿಯ ಬರ್ಥ್ ಡೇಗೆ ವಿಶೇಷ ಉಡುಗೊರೆ ನೀಡುವ ಮೂಲಕ ತಮ್ಮ ಕುಟುಂಬವನ್ನು ಎಷ್ಟು ಪ್ರೀತಿಸುತ್ತಾರೆ ಅನ್ನೋದನ್ನ ತೋರಿಸಿದ್ದಾರೆ. ಇನ್ನು ಸದ್ಯಕ್ಕೆ ಜ್ಯೂನಿಯರ್ ಎನ್.ಟಿ.ಆರ್ ಅವರು ಕೊರಟಾವ ಶಿವ ಅವರೊಟ್ಟಿಗೆ ಸಿನಿಮಾ ಮಾಡಲಿದ್ದಾರೆ.

Leave a Reply

%d bloggers like this: