ಹುಲಿ ಸಂರಕ್ಷಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ಡಿಬಾಸ್

ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೇಂಜಿಂಗ್ ಸ್ಟಾರ್ ದರ್ಶನ್ ಅವರು ಸದ್ಯಕ್ಕೆ ಕ್ರಾಂತಿ ಸಿನಿಮಾದ ಡಬ್ಬಿಂಗ್ ಮತ್ತು ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಕ್ರಾಂತಿ ಸಿನಿಮಾದ ಅಬ್ಬರದ ಕೆಲಸದ ನಡುವೆ ಚಾಲೇಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಇತ್ತೀಚೆಗೆ ಹುಲಿಗಳ ಫೋಟೋ ಶೇರ್ ಮಾಡಿಕೊಂಡಿದ್ದರು. ಇದಕ್ಕೆ ಒಂದಷ್ಟು ಜನ ವಿಕ್ರಾಂತ್ ರೋಣ ಚಿತ್ರಕ್ಕೆ ಕೇಳಿ ಬರುತ್ತಿರುವ ಮಿಶ್ರ ಪ್ರತಿಕ್ರಿಯೆಗೆ ಲಿಂಕ್ ಮಾಡಿ ಕಮೆಂಟ್ ಮಾಡುತ್ತಿದ್ದರು. ಇತ್ತ ಕ್ರಾಂತಿ ಚಿತ್ರದಲ್ಲಿ ತಮ್ಮ ಕೆಲವು ದೃಶ್ಯಗಳಿಗೆ ಡಬ್ಬಿಂಗ್ ಮಾಡಿ ಮುಗಿಸಿದ ದರ್ಶನ್ ಈ ಸಂಧರ್ಭದಲ್ಲಿ ಯಾಕೆ ಹುಲಿ ಫೋಟೋ ಶೇರ್ ಮಾಡಿದ್ದಾರೆ ಅನ್ನೋದು ಕೆಲವರಿಗೆ ಆರಂಭದಲ್ಲಿ ಗೊಂದಲ ಮೂಡಿಸಿತು.

ಆದರೆ ಅಸಲಿ ವಿಷಯ ಏನಪ್ಪಾ ಅಂದರೆ ಹೇಳಿ ಕೇಳಿ ಚಾಲೇಂಜಿಂಗ್ ಸ್ಟಾರ್ ದರ್ಶನ್ ಅವರು ಪ್ರಾಣಿಪ್ರಿಯರು. ಹಾಗಾಗಿಯೇ ಅವರು ತಮ್ಮ ಫಾರ್ಮ್ ಹೌಸ್ ನಲ್ಲಿ ಪ್ರಾಣಿಗಳನ್ನ ಸಾಕುತ್ತಿದ್ದಾರೆ. ಕೇವಲ ದೇಶೀಯ ಪ್ರಾಣಿ ಪಕ್ಷಿ ಮಾತ್ರ ಅಲ್ಲದೇ ವಿದೇಶಿ ವೈಶಿಷ್ಟದ ಪ್ರಾಣಿ ಪಕ್ಷಿಗಳನ್ನು ಕೂಡ ಸಾಕುತ್ತಿದ್ದಾರೆ. ಇನ್ನು ಶೂಟಿಂಗ್ ಬಿಡುವಿನ ವೇಳೆಯಲ್ಲಿ ದರ್ಶನ್ ಅವರು ತಮ್ಮ ಬಹುತೇಕ ಸಮಯವನ್ನು ತಮ್ಮ ಫಾರ್ಮ್ ಹೌಸ್ ಅಥವಾ ಫಾರೆಸ್ಟ್ ಟ್ರಕ್ಕಿಂಗ್ ಹೋಗುತ್ತಿರುತ್ತಾರೆ. ವನ್ಯ ಜೀವಿ ಅರಣ್ಯಗಳಿಗೆ ಹೋಗಿ ಅಲ್ಲಿ ಸಿಗುವ ಪ್ರಾಣಿ ಪಕ್ಷಿಗಳ ಫೋಟೋಶೂಟ್ ಮಾಡುವ ಮೂಲಕ ತಮ್ಮ ಹವ್ಯಾಸಿ ಫೋಟೋಗ್ರಫಿಗೂ ಕೂಡ ಸಮಯ ನೀಡುತ್ತಾರೆ.

ಅದದಂತೆ ಮೊನ್ನೆ ವಿಶ್ವ ಟೈಗರ್ ಡೇ ಇದ್ದ ಕಾರಣ ಹುಲಿಯ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡು ಹುಲಿಯನ್ನ ಉಳಿಸಿ. ಏಕೆಂದರೆ ಹುಲಿಯು ಸೌಂದರ್ಯ, ಶೌರ್ಯ, ಶಕ್ತಿ ಮತ್ತು ರಾಷ್ಟ್ರೀಯತೆಯನ್ನ ಪ್ರತಿನಿಧಿಸುತ್ತದೆ. ಹಾಗಾಗಿ ರಾಷ್ಟ್ರದ ಗೌರವವನ್ನು ರಕ್ಷಣೆ ಮಾಡಿ ಎಂದು ಬರೆದು ತಮ್ಮ ಟ್ವಿಟರ್ ಖಾತೆಯಲ್ಲಿ ಒಂದಷ್ಟು ಹುಲಿಯ ಪೋಟೋಗಳನ್ನ ಪೋಸ್ಟ್ ಮಾಡಿದ್ದಾರೆ. ಪ್ರಾಣಿಗಳ ಮೇಲೆ ದರ್ಶನ್ ಗೆ ಇರುವ ಪ್ರೀತಿ ಎಂತಹದ್ದು ಅನ್ನೋದನ್ನ ಅವರ ಪೋಸ್ಟ್ ಗಳು ಆಗಾಗ ನಿರೂಪಿಸಿರುತ್ತವೆ. ಇನ್ನು ದರ್ಶನ್ ಅವರು ಕ್ರಾಂತಿ ಚಿತ್ರದಲ್ಲಿ ತೊಡಗಿಕೊಂಡಿದ್ದು, ಈ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಚಿತ್ರತಂಡ ಭಿಝಿಯಾಗಿದೆ.

Leave a Reply

%d bloggers like this: