ಹೋಟೆಲ್, ಲಾಡ್ಜ್ ಗಳಲ್ಲಿ ಬಿಳಿ ಹಾಸಿಗೆ, ಪಿಲ್ಲೋ ಗಳನ್ನೇ ಬಳಸೋದ್ಯಾಕೆ ಗೊತ್ತಾ? ಇಂದಿಗೂ 99% ಜನರಿಗೆ ಗೊತ್ತೇ ಇಲ್ಲ.. ರೋಚಕ ಕಥೆ ಓದಿ ಒಮ್ಮೆ

ಈ ಹೋಟೆಲ್ ರೂಂ ಗಳಲ್ಲಿ ಉಳಿದುಕೊಳ್ಳುವ ಗ್ರಾಹಕರಿಗೆ ಬುದ್ದಿ ಕಲಿಸಲು ಅವರು ಮಾಡಿರುವ ಅಳವಡಿಸಿಕೊಂಡಿರುವ ಐಡಿಯಾ ಎಂತಾದ್ದು ಗೊತ್ತಾ…! ವ್ಯಾಪಾರಂ ದ್ರೋಹ ಚಿಂತನಂ ಎಂಬುದು ವ್ಯಾಪಾರ ವ್ಯವಹಾರದಲ್ಲಿ ಸರ್ವೇ ಸಾಮಾನ್ಯವಾದದ್ದು. ಅದರಂತೆ ಗ್ರಾಹಕರೇ ದೇವರು ಎಂಬುದು ಕೂಡ ವ್ಯಾಪಾರಸ್ಥರ ಸಿದ್ದಾಂತವೂ ಕೂಡ ಹೌದು. ಅದರಂತೆ ಹೋಟೆಲ್ ಉದ್ಯಮ ಕ್ಷೇತ್ರದಲ್ಲಿ ತಮ್ಮ ಹೋಟೆಲಿಗೆ ಬರುವ ಗ್ರಾಹಕರನ್ನ ಸಂತೃಪ್ತ ಗೊಳಿಸುವುದಕ್ಕಾಗಿ ಹೋಟೆಲಿನವರು ಗ್ರಾಹಕರಿಗೆ ಕಂಫರ್ಟ್ ಜೋ಼ನ್ ಕ್ರಿಯೆಟ್ ಮಾಡಿರುತ್ತಾರೆ. ಅಂತೆಯೇ ದೂರದೂರಿಗಳಿಂದ ಪ್ರವಾಸಕ್ಕೆ ಬರುವವರು ಅಥವಾ ಇನ್ಯಾವುದೋ ಕೆಲಸದ ನಿಮಿತ್ತ ಹೊರಗಡೆ ಬಂದು ಉಳಿದುಕೊಳ್ಳಲು ಹೋಟೆಲ್ ರೂಂಗಳ ಆಶ್ರಯದತ್ತ ಬಂದಾಗ ಅವರಿಗೆ ಮೂಲಭೂತ ಎಲ್ಲಾ ಸೌಕರ್ಯವುಳ್ಳ ಸುಸಜ್ಜಿತ ಕೋಣೆಗಳನ್ನ ನೀಡಲಾಗುತ್ತದೆ.

ಇಲ್ಲಿ ವಿಶೇಷವಾಗಿ ಗ್ರಾಹಕರು ಗಮನಿಸಬೇಕಾದ ವಿಚಾರ ಅಥವಾ ಬಹುತೇಕರಿಗೆ ತಿಳಿಯದ ಸಂಗತಿ ಅಂದರೆ ಎಲ್ಲಾ ಹೋಟೆಲ್ ರೂಂ ಗಳಲ್ಲಿ ಬಿಳಿ ಬಣ್ಣದ ಹಾಸಿಗೆ , ದಿಂಬು, ಪಿಲ್ಲೋಗಳನ್ನೆ ಬಳಸಿರುತ್ತಾರೆ. ಇದರಲ್ಲಿ ಸ್ವಾರಸ್ಯಕರ ವಿಚಾರವೊಂದಿದೆ. ಅದೇನಪ್ಪಾ ಅಂದರೆ ಸಾಮಾನ್ಯವಾಗಿ ಪ್ರವಾಸಕ್ಕೆ ಬಂದಿರುವ ಯುವಕರು ಗೆಳೆಯರೊಟ್ಟಿಗೆ ಬಂದಿದ್ದೇಲೆ ಫುಲ್ ಮಸ್ತ್ ಎಂಜಾಯ್ ಮಾಡಬಹುದು ಎಂದು ಹೇಗೆಂದರಲ್ಲಿ ವರ್ತಿಸುವುದು ಉಂಟು. ಬೇರೆ ಬಣ್ಣದ ಬೆಡ್ ಗಳಿದ್ದಾಗ ಅವುಗಳನ್ನ ಗಲೀಜು ಮಾಡಿದರೆ ಅದು ಗೊತ್ತಾಗುವುದಿಲ್ಲ. ಆದರೆ ಬಿಳಿ ಬಣ್ಣದಾಗಿರುವುದರಿಂದ ಗ್ರಾಹಕರು ಸ್ವಚ್ಚತೆಯ ಕಡೆಗೆ ಗಮನ ಹರಿಸಲೇಬೇಕಾಗಿರುತ್ತದೆ. ಇನ್ನು ಬಿಳಿ ಬಣ್ಣ ಗ್ರಾಹಕರನ್ನ ಥಟ್ಟನೆ ಆಕರ್ಷಣೆ ಮಾಡಿ ಬಿಡುತ್ತದೆ.

ಹೋಟೆಲ್ ರೂಂ ನಲ್ಲಿ ಶುಚಿತ್ವ ಇದ್ಯೋ ಇಲ್ವೋ ಅಂತ ತಿಳಿಯಲಿಕ್ಕೆ ಈ ಬಿಳಿ ಬಣ್ಣದ ಹಾಸಿಗೆ ದಿಂಬುಗಳು ಪ್ರಮುಖ ಪಾತ್ರವನ್ನ ನಿರ್ವಹಿಸುತ್ತವೆ. ಇನ್ನು ಹೋಟೆಲಿನವರ ಮತ್ತೊಂದು ಆಲೋಚನೆ ಏನಪ್ಪಾ ಅಂದರೆ ಏನಾದರು ಬಿಳಿ ಬಣ್ಣದ ಹಾಸಿಗೆಯ ಬಟ್ಟೆಗಳು ಗಲೀಜ್ ಆದರೆ ಬ್ಲೀಚ್ ಮಾಡಿಸಿ ಕಲೆಯನ್ನ ಸುಲಭವಾಗಿ ಶುಭ್ರವಾಗಿಸಬಹುದಾಗಿರುತ್ತದೆ. ಹಾಗಾಗಿಯೇ ಯಾವುದೇ ಹೋಟೆಲ್ ರೂಂಗಳಲ್ಲಿ ಈ ಬಿಳಿ ಬಣ್ಣದ ಹಾಸಿಗೆ ದಿಂಬುಗಳನ್ನ ಬಳಸುವುದು ಸೂಕ್ತವಾಗಿರುತ್ತದೆ.