ಹೋಟೆಲ್ ಬಿಲ್ ಕಟ್ಟಲು ಹಣವಿಲ್ಲದ ಸಮಯದಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಮಾಡಿದ ಕೆಲಸಕ್ಕೆ ಬೆಚ್ಚಿಬಿದ್ದ ಹೋಟೆಲ್ ಮಾಲೀಕ

ಸ್ಯಾಂಡಲ್ ವುಡ್ ದೊಡ್ಮನೆಯ ಒಡತಿಯ ಉದಾರತೆಯ ಮನೋಭಾವ ಎಂತಾದ್ದು ಗೊತ್ತಾ..! ಕನ್ನಡ ಚಿತ್ರರಂಗದಲ್ಲಿ ದೊಡ್ಮನೆ ಎಂದೇ ಕರೆಯಲ್ಪಡುವ ಡಾ.ರಾಜ್ ಕುಮಾರ್ ಅವರ ಕುಟುಂಬ ಹೆಸರಿಗೆ ತಕ್ಕಂತೆ ಅವರದ್ದು ದೊಡ್ಡ ವ್ಯಕ್ತಿತ್ವವುಳ್ಳ ಜನ ಇರುವ ದೊಡ್ಡ ಮನೆಯೇ ಸರಿ. ಡಾ.ರಾಜ್ ಕುಮಾರ್ ಅವರನ್ನ ಚಿತ್ರರಂಗದಲ್ಲಿ ಹೇಗೆ ಅಣ್ಣಾವ್ರು ಎಂದು ಬಾಯ್ತುಂಬಾ ಪ್ರೀತಿಯಿಂದ ಕರೆಯುತ್ತಿದ್ದರೋ, ಅದೇದ ರೀತಿಯಾಗಿ ಡಾ.ರಾಜ್ ಅವರ ಧರ್ಮಪತ್ನಿ ಪಾರ್ವತಮ್ಮ ಅವರನ್ನ ಕೂಡ ಮನದುಂಬಿ ಅಕ್ಕಾ ಎಂದು ಕರೆಯುತ್ತದ್ದರು. ದೊಡ್ಮನೆಯ ಬೆನ್ನೆಲುಬಾಗಿ, ನಂದಾದೀಪವಾಗಿದ್ದ ಪಾರ್ವತಮ್ಮ ಅವರು ತಮ್ಮ ಪತಿ ರಾಜ್ ಕುಮಾರ್ ಅವರ ಯೋಗಕ್ಷೇಮದ ಜೊತೆಗೆ ಅವರ ಸಿನಿ ವೃತ್ತಿ ಜೀವನದ ಎಲ್ಲಾ ಆಗು-ಹೋಗುಗಳನ್ನ ನಿರ್ವಹಿಸಿಕೊಂಡು ಹೋಗುತ್ತಿದ್ದರು.

ಪಾರ್ವತಮ್ಮ ಅವರ ನಿರ್ಮಾಪಕಿಯಾಗಿಯೂ ಕೂಡ ಅನೇಕ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಅವರು ಚಿತ್ರರಂಗಕ್ಕೆ ಅನೇಕ ನಟ- ನಟಿಯರನ್ನ ಪರಿಚಯಿಸಿ, ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ಸಲ್ಲಿಸಿದ್ದಾರೆ. ಕನ್ನಡ ಚಿತ್ರರಂಗದ ದಿಗ್ಗಜ ರಾಜ್ ಅವರ ಧರ್ಮಪತ್ನಿ, ಅದರ ಜೊತೆಗೆ ಯಶಸ್ವಿ ಸಿನಿಮಾಗಳ ನಿರ್ಮಾಪಕಿರಾಗಿರುವ ಪಾರ್ವತಮ್ಮ ಅವರು ಒಂದು ಸಂಕಷ್ಟದ ಸಂಧರ್ಭದಲ್ಲಿ ತಮ್ಮ ಉದಾರತೆಯ ವ್ಯಕ್ತಿತ್ವವನ್ನು ತೋರುವ ಮೂಲಕ ಆ ಸಂಧರ್ಭದಲ್ಲಿ ಎಲ್ಲರ ಮನಗೆಲ್ಲುತ್ತಾರೆ. ಹೀಗೆ ರಾಜ್ ಅವರ ಮುಖ್ಯಭೂಮಿಕೆಯ ಸಿನಿಮಾವೊಂದರ ಚಿತ್ರೀಕರಣಕ್ಕೆ ಮಾಲ್ಡೀವ್ಸ್ ದೇಶಕ್ಕೆ ಹೋಗಿರುತ್ತಾರೆ.

ಅಲ್ಲಿ ಪ್ರತಿಷ್ಟಿತ ಹೋಟೇಲ್ ವೊಂದರಲ್ಲಿ ಇಡೀ ಚಿತ್ರತಂಡ ಬೀಡುಬಿಟ್ಟಿರುತ್ತದೆ. ಸಿನಿಮಾದ ಚಿತ್ರೀಕರಣ ಮುಗಿಯುವ ಹೊತ್ತಿಗೆ ಅವರ ಬಳಿ ಇದ್ದ ಎಲ್ಲಾ ಹಣ ಕೂಡ ಖರ್ಚಾಗಿರುತ್ತದೆ. ಆ ಸಂಧರ್ಭದಲ್ಲಿ ಚಿತ್ರತಂಡದ ಎಲ್ಲಾ ಸದಸ್ಯರ ವಿಮಾನದ ಟಿಕೆಟ್ ಬುಕ್ ಆಗಿರುತ್ತದೆ. ವಿಮಾನ ಹೊರಡುವ ಸಮಯ ಕೂಡ ಆಗಿರುತ್ತದೆ. ಆ ಸಂಧರ್ಭದಲ್ಲಿ ಹೋಟೆಲ್ ನವರು ಸಂಪೂರ್ಣ ಬಿಲ್ ಕ್ಲಿಯರ್ ಮಾಡುವವರೆಗೆ ನೀವು ಯಾರು ಕೂಡ ಇಲ್ಲಿಂದ ಹೋಗುವುದಕ್ಕೆ ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಆಗ ರಾಜ್ ಮತ್ತು ಪಾರ್ವತಮ್ಮ ಇಬ್ಬರು ನಾವಿಬ್ಬರು ಇಲ್ಲಿಯೇ ಇರುತ್ತೇವೆ. ಉಳಿದ ಎಲ್ಲಾರನ್ನು ಕೂಡ ಕಳುಹಿಸಿಕೊಡಿ ಎಂದು ಮನವಿ ಮಾಡಿಕೊಳ್ಳುತ್ತಾರೆ.

ಹಾಗಾಗಲೇ ಹೋಟೇಲ್ ಸಿಬ್ಬಂದಿಗಳಿಗೆ ರಾಜ್ ಅವರು ಕನ್ನಡದ ಬಹುದೊಡ್ಡ ನಟ ಎಂದು ತಿಳಿದಿರುತ್ತದೆ. ಪಾರ್ವತಮ್ಮ ಅವರು ಒಡವೆಗಳನ್ನ ಅಡಮಾನ ಇಟ್ಟು ಎಲ್ಲಾ ಸದಸ್ಯರನ್ನ ವಿಮಾನದಲ್ಲಿ ಭಾರತಕ್ಕೆ ಕಳಿಸಿರುತ್ತಾರೆ. ಅದೇ ವಿಮಾನದಲ್ಲಿ ರಾಜ್ ಅವರನ್ನ ಕೂಡ ಕಳಿಸಿಕೊಟ್ಟಿರುತ್ತಾರೆ. ಆದರೆ ಪಾರ್ವತಮ್ಮ ಅವರು ಮಾತ್ರ ಮಾಲ್ಡೀವ್ಸ್ ಅಲ್ಲೇ ಇರುವಂತಾಗಿರುತ್ತದೆ. ಈ ವಿಚಾರ ಅಂಬರೀಷ್ ಅವರಿಗೆ ತಿಳಿಯುತ್ತಿದ್ದಂತೆ ಅಕ್ಕ ಅಂದ ಹೃದಯತುಂಬಿ ಕರೆಯುತ್ತಿದ್ದ ಪಾರ್ವತಮ್ಮ ಅವರಿಗೆ ಎಂದಿನಂತೆ ತಮ್ಮ ಒರಟುತನದ ಸ್ವಭಾವದಂತೆ ಅವರಿಗೆ ರೇಗಿ ಅಲ್ಲಿ ಮಾಲ್ಡೀವ್ಸ್ ನಲ್ಲಿರುವ ತಮ್ಮ ಸ್ನೇಹಿತರಿಗೆ ತಿಳಿಸುತ್ತಾರೆ.

ಅಂಬರೀಷ್ ಅವರ ಸಲಹೆಯಂತೆ ಅವರ ಗೆಳೆಯ ಹೋಟೆಲ್ ಅವರಿಗೆ ಹಣ ನೀಡಿ ಪಾರ್ವತಮ್ಮ ನವರನ್ನ ಕರೆ ತರುತ್ತಾರಂತೆ. ಅಂಬರೀಷ್ ಅವರ ಸ್ನೇಹ ಬಳಗ, ಜನ ಬಯಸುವ ಗುಣ ವ್ಯಕ್ತಿತ್ವ, ಸಹಾಯ ಮಾಡುವ ಗುಣವನ್ನ ನೆನೆಯುತ್ತಾರೆ ಕನ್ನಡದ ಖ್ಯಾತ ಹಿರಿಯ ನಿರ್ದೇಶಕ ಭಗವಾನ್ ಅವರು. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಈ ನಮ್ಮ ಲೇಖನದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.