ಹೊಸದಾಗಿ ಶುರುವಾಗಿದ್ದ ಕನ್ನಡದ ಜನಪ್ರಿಯ ಧಾರಾವಾಹಿ ಒಂದು ವರ್ಷದೊಳಗೆ ಅಂತ್ಯ

ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಅನೇಕ ಧಾರಾವಾಹಿಗಳು ಮರೆಯಾಗುತ್ತಿವೆ. ಇದಕ್ಕೆ ಕಾರಣ ಅಂದರೆ ವೀಕ್ಷಕರನ್ನ ಸೆಳೆದಿಟ್ಟುಕೊಳ್ಳುವ ಸಾಮರ್ಥ್ಯ ಧಾರಾವಾಹಿಗಳಿಲ್ಲವೋ ಅಥವಾ ವೀಕ್ಷಕರ ಅಭಿರುಚಿ ಬದಲಾಗಿದ್ಯೋ ಏನೋ ಇತ್ತೀಚೆಗೆ ಮೂಡಿ ಬರುತ್ತಿರುವ ಬಹುತೇಕ ಧಾರಾವಾಹಿಗಳು ಸ್ಥಿರವಾಗಿ ನಿಲ್ಲುತ್ತಿಲ್ಲ. ಇದೀಗ ಅಂತಹ ಧಾರಾವಾಹಿಗಳ ಸಾಲಿಗೆ ದೊರೆಸಾನಿ ಧಾರಾವಾಹಿ ಕೂಡ ಸೇರ್ಪಡೆಗೊಳ್ಳುತ್ತಿದೆ. ಆದರೆ ದೊರೆಸಾನಿ ಅಂತ್ಯದ ಬಗ್ಗೆ ನಿಖರವಾದ ಕಾರಣ ತಿಳಿದಿಲ್ಲ. ದೊರೆಸಾನಿ ಧಾರಾವಾಹಿಯಲ್ಲಿ ನಟಿ ರೂಪಿಕಾ ದೀಪಿಕಾ ಪಾತ್ರದಲ್ಲಿ ನಟಿಸುತ್ತಿದ್ದರು. ಪೃಥ್ವಿರಾಜ್ ಆನಂದ್ ಪಾತ್ರದಲ್ಲಿ ನಟಿಸುತ್ತಿದ್ದರು. ಕಥಾ ನಾಯಕ ನಾಯಕಿಗೆ ಪರಸ್ಪರ ಪ್ರೀತಿಯಾಗಿ ಮದುವೆ ಆಗುವಷ್ಟರಲ್ಲಿ ಇದೀಗ ಧಾರಾವಾಹಿಯೇ ಮುಗಿದೋಗಿದೆ.

ಕಳೆದ ವರ್ಷ 2021 ಡಿಸೆಂಬರ್ ತಿಂಗಳಿನಲ್ಲಿ ದೊರೆಸಾನಿ ಧಾರಾವಾಹಿ ಆರಂಭವಾಗಿ ಇದುವರೆಗೆ 200ಕ್ಕೂ ಹೆಚ್ಚು ಸಂಚಿಕೆಗಳನ್ನ ಪೂರೈಸಿದೆ. ರಾಜೇಶ್ ಅವರ ಸಾರಥ್ಯದಲ್ಲಿ ಮೂಡಿ ಬರುತ್ತಿದ್ದ ದೊರೆಸಾನಿ ಧಾರಾವಾಹಿಯು ಇದೀಗ ಕೊನೆಯಾಗಿದೆ. ದೊರೆಸಾನಿ ಧಾರಾವಾಹಿ ಇದೇ ಆಗಸ್ಟ್ 22ರಿಂದ ಪ್ರಸಾರ ಆಗುತ್ತಿಲ್ಲ. ಕಲರ್ಸ್ ಕನ್ನಡದಲ್ಲಿ ಪ್ರತಿ ದಿನ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದ್ದ ದೊರೆಸಾನಿ ಧಾರಾವಾಹಿ ಜಾಗಕ್ಕೆ ಇದೀಗ ಕೆಂಡ ಸಂಪಿಗೆ ಧಾರಾವಾಹಿ ಬಂದಿದೆ. ಕೆಂಡ ಸಂಪಿಗೆ ಧಾರಾವಾಹಿ ಕಲರ್ಸ್ ಕನ್ನಡದಲ್ಲಿ ಸಂಜೆ 6.30ಕ್ಕೆ ಪ್ರಸಾರ ಆಗುತ್ತಿದ್ದು ಧಾರಾವಾಹಿಯ ಪ್ರೋಮೋ ಕಿರುತೆರೆ ವೀಕ್ಷಕರಿಗೆ ಭಾರಿ ನಿರೀಕ್ಷೆ ಉಂಟುಮಾಡಿದೆ. ಕೆಂಡ ಸಂಪಿಗೆ ಧಾರಾವಾಹಿ 6.30ಕ್ಕೆ ಪ್ರಸಾರ ಆಗುತ್ತಿದೆ.

ಇತ್ತೀಚೆಗೆ ಈ ನೂತನ ಕೆಂಡ ಸಂಪಿಗೆ ಧಾರಾವಾಹಿಯ ಪ್ರೊಮೋ ಭಾರಿ ಜನಪ್ರಿಯತೆ ಗಳಿಸಿತ್ತು. ಹಿರಿಯ ನಟ ದೊಡ್ಡಣ್ಣ, ಖ್ಯಾತ ಹಾಸ್ಯ ಕಲಾವಿದ ನಾಗರಾಜ್ ಕೋಟೆ ಅವರು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಡೀ ಕುಟುಂಬದ ಜವಾಬ್ದಾರಿ ಹೊತ್ತು ಬದುಕು ಸಾಗಿಸುತ್ತಿರುವ ಸುಮನಾಳಿಗೆ ತಮ್ಮನನ್ನ ಕಂಡರೆ ಬಲು ಪ್ರೀತಿ. ಆದರೆ ಅದನ್ನ ಎಲ್ಲಿಯೂ ಕೂಡ ತೋರ್ಪಡಿಸಿಕೊಳ್ಳುವುದಿಲ್ಲ. ತನ್ನ ತಮ್ಮನ ಭವಿಷ್ಯ ಉಜ್ವಲವಾಗಬೇಕು ಎಂದು ಶ್ರಮ ಪಡುತ್ತಿರುತ್ತಾಳೆ. ಹೀಗೆ ಅಕ್ಕರೆಯ ಅಕ್ಕನ ಪ್ರೀತಿಯ ತಮ್ಮನಾಗಿ ಶನಿ ಧಾರಾವಾಹಿ ಖ್ಯಾತಿಯ ನಟ ಸುನೀಲ್ ಕಾಣಿಸಿಕೊಂಡಿದ್ದಾರೆ. ಕಥಾ ನಾಯಕ ತೀರ್ಥಂಕರ್ ಕಾರ್ಪೋರೇಟ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜನ ಮನ ಗೆದ್ದಿದ್ದ ದೊರೆಸಾನಿ ಧಾರಾವಾಹಿ ಇದೀಗ ಒಂದೇ ವರ್ಷಕ್ಕೆ ಕೊನೆಗೊಳ್ಳುತ್ತಿರುವುದು ಈ ಸೀರಿಯಲ್ ಅಭಿಮಾನಿಗಳಿಗೆ ಬೇಸರವಾಗಿದೆ.

Leave a Reply

%d bloggers like this: