ಹೊಸ ಪಯಣ ಶುರುಮಾಡಿದ ಖ್ಯಾತ ಹಾಸ್ಯ ನಟ ಮಂಜು ಪಾವಗಡ..ಏನ್ ಗೊತ್ತಾ? ನೋಡಿ ಒಮ್ಮೆ ಸಿಹಿ ಸುದ್ದಿ

ಮಜಾ ಭಾರತ ಕಾಮಿಡಿ ರಿಯಾಲಿಟಿ ಶೋ ಖ್ಯಾತಿಯ ಹಾಸ್ಯ ಕಲಾವಿದ ಮಂಜು ಪಾವಗಡ ಅವರು ಇದೀಗ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಅಂದ್ರೆ ತಮ್ಮ ವೈಯಕ್ತಿಕ ಜೀವನದಲ್ಲಿ ಹೊಸದೊಂದು ಹೆಜ್ಜೆ ಇಡಲು ಮುಂದಾಗಿದ್ದಾರೆ. ಹೌದು ಪ್ರತಿಭೆ ಹೊಂದಿದ್ದರೆ ಯಾರೂ ಏನು ಬೇಕಾದರು ಆಗಬಹುದು. ಆದರೆ ಅಂತಹ ಪ್ರತಿಭಾವಂತರಿಗೆ ಒಂದು ಅವಕಾಶದ ವೇದಿಕೆ ಎಂಬುದು ಸಿಗಬೇಕು. ಅಂತಹ ಪ್ರತಿಭೆಗಳಿಗೆ ಒಂದು ಅವಕಾಶ ಮಾಡಿಕೊಟ್ಟು ಅವರ ಜೀವನದ ದಿಕ್ಕನ್ನು ಬದಲಾಯಿಸಿದ್ದು ಅಂದರೆ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುವ ಜನಪ್ರಿಯ ಮಜಾಭಾರತ ರಿಯಾಲಿಟಿ ಶೋ.

ಈ ಕಾಮಿಡಿ ಶೋ ಮೂಲಕ ಎಲೆ ಮರೆಕಾಯಿಯಂತಿದ್ದ ಅನೇಕ ಪ್ರತಿಭೆಗಳು ಬೆಳಕಿಗೆ ಬಂದು ತಮ್ಮ ಪ್ರತಿಭೆಯನ್ನ ಪ್ರದರ್ಶನ ಮಾಡುವ ಮೂಲಕ ನಾಡಿನಾದ್ಯಂತ ಅಪಾರ ಜನಪ್ರಿಯತೆ ಗಳಿಸಿಕೊಂಡಿದ್ದಾರೆ. ಕಿರುತೆರೆಯ ಜೊತೆಗೆ ಸಿನಿಮಾಗಳಲ್ಲಿ ಕೂಡ ಅವಕಾಶ ಪಡೆದುಕೊಂಡು ಇಂದು ಬೇಡಿಕೆಯ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಮಜಾ ಭಾರತ ಶೋನಲ್ಲಿ ಅಪ್ಪಟ ಗ್ರಾಮೀಣ ಪ್ರತಿಭೆ ಆದ ಮಂಜು ಪಾವಗಡ ಅವರು ತಮ್ಮ ವಿಶಿಷ್ಟ ಅಭಿನಯ ಪಂಚಿಂಗ್ ಡೈಲಾಗ್ ಮೂಲಕ ಅಪಾರ ಜನಪ್ರಿಯತೆ ಗಳಿಸಿದರು.

ಇವರ ಜನಪ್ರಿಯತೆಯೇ ಇವರನ್ನು ಕಿರುತೆರೆಯ ಬಹುದೊಡ್ಡ ಕಿರುತೆರೆ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಶೋ ನಲ್ಲಿ ಭಾಗವಹಿಸಲು ಪ್ರಮುಖ ಕಾರಣವಾಯಿತು. ಬಿಗ್ ಬಾಸ್ ಶೋನಲ್ಲಿ ಕೂಡ ತನ್ನ ಪಂಚಿಂಗ್ ಡೈಲಾಗ್, ಮುಗ್ದತೆ, ಟಾಸ್ಕ್ ನಲ್ಲಿ ಉತ್ತಮವಾಗಿ ಭಾಗವಹಿಸುವ ಮೂಲಕ ಮಂಜು ಪಾವಗಡ ಅವರು ಬಿಗ್ ಬಾಸ್ ಸೀಸನ್ 8 ರಲ್ಲಿ ಟ್ರೋಫಿ ಕೂಡ ಗೆದ್ದು ವಿಜೇತ ಆಗುತ್ತಾರೆ. ಅದಲ್ಲದೆ ಇವರ ಸಹಜ ನಟನೆ ಮತ್ತು ಸ್ಪಾಟಿಂಗ್ ಅಲ್ಲೇ ಹೊಡೆಯುವ ಡೈಲಾಗ್ ಮತ್ತು ಅವರ ಹಾಸ್ಯಮಯ ಸ್ವಭಾವದ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಮಂಜು ಪಾವಗಡ ಅವರು ದೊಡ್ಮನೆಯಲ್ಲಿ ಇದ್ದಾಗ ಸಹ ಸ್ಪರ್ಧಿಯಾಗಿದ್ದ ದಿವ್ಯಾ ಸುರೇಶ್ ಅವರೊಟ್ಟಿಗೆ ಉತ್ತಮ ಭಾಂಧವ್ಯ ಹೊಂದಿದ್ದರು.

ಇವರಿಬ್ಬರು ಆತ್ಮೀಯವಾಗಿದ್ದ ಕಾರಣ ಇವರಿಬ್ಬರೂ ಮದುವೆ ಆಗುತ್ತಾರೆ ಎಂದು ಹೇಳಲಾಗುತ್ತಿತ್ತು. ಅದೇ ರೀತಿಯಾಗಿ ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಕೂಡ ದಿವ್ಯಾ ಸುರೇಶ್ ಅವರ ಮನೆಯಲ್ಲಿ ಹಬ್ಬವಿದ್ದಾಗ ಮಂಜು ಪಾವಗಡ ಅವರು ಕೂಡ ಹೋಗಿದ್ದರು. ಅವರ ಕುಟುಂಬದ ಜೊತೆಗೆ ಫೋಟೋ ಕೂಡ ತೆಗೆಸಿಕೊಂಡು ಸೋಶಿಯಲ್ ಮೀಡಿಯಾ ದಲ್ಲಿ ಶೇರ್ ಮಾಡಿಕೊಂಡಿದ್ದರು. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಕೂಡ ಆಗಿದ್ದವು. ಆದರೆ ಸ್ಪಷ್ಟನೆ ಅಂದರೆ ಅವರೆ ಹೇಳಿರುವಂತೆ ಮಂಜು ಮತ್ತು ದಿವ್ಯಾ ಸುರೇಶ್ ಅವರಿಬ್ಬರೂ ಕೂಡ ಉತ್ತಮ ಸ್ನೇಹಿತರು ಮಾತ್ರ ಅಂತೆ. ತಮ್ಮ ಇಬ್ಬರ ನಡುವೆ ಮದುವೆ ಅನ್ನುವಂತಹ ಆ ರೀತಿ ಭಾವನೆ ಏನೂ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನು ಇದೀಗ ಹೊಸ ಸುದ್ದಿ ಏನಪ್ಪಾ ಅಂದರೆ ಮಂಜು ಪಾವಗಡ ಅವರು ಹಾಸ್ಯ ನಟನಾಗಿ ಇಷ್ಟು ದಿನ ಮನರಂಜನೆ ನೀಡಿದ್ದರು. ಇದೀಗ ಹಾಸ್ಯ ಕಾರ್ಯಕ್ರಮವೊಂದರ ನಿರೂಪಕರಾಗಿ ಬಡ್ತಿ ಪಡೆದಿದ್ದಾರೆ. ಹೌದು ಕಲರ್ಸ್ ವಾಹಿನಿಯಲ್ಲಿ ಪ್ರಸಾರ ಆಗುವ ಗಿಚ್ಚಿ ಗಿಲಿ ಗಿಲಿ ಎಂಬ ಶೋ ಗೆ ನಿರೂಪಕರಾಗಿ ಮಂಜು ಪಾವಗಡ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಏನೇ ಆದರೂ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಛಲದಿಂದ ಕುಗ್ರಾಮದಿಂದ ಬಂದು ನಗರದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿ ಹೊಟ್ಟೆ ಪಾಡಿಗಾಗಿ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿ ಇದೀಗ ಕಿರುತೆರೆ ಲೋಕದ ಜನಪ್ರಿಯ ಹಾಸ್ಯ ನಟ ಮತ್ತು ನಿರೂಪಕನಾಗಿ ಹೆಸರು ಮಾಡಿರುವುದು ನಿಜಕ್ಕೂ ಕೂಡ ಸ್ಫೂರ್ತಿದಾಯಕ ಎಂದು ಹೇಳಬಹುದು.

Leave a Reply

%d bloggers like this: