ಹೊಸ ಮನೆ ಖರೀದಿಸಿದ ಕಿರುತೆರೆಯ ಜನಪ್ರಿಯ ಜೋಡಿ ಚಂದನ್ ಕವಿತಾ..ನಿಜಕ್ಕೂ ಬೆಲೆ ಎಷ್ಟು ಗೊತ್ತಾ? ನೋಡಿ ಒಮ್ಮೆ

ಕನ್ನಡ ಕಿರುತೆರೆಯ ಜನಪ್ರಿಯ ಜೋಡಿಗಳಲ್ಲಿ ಒಂದಾಗಿದ್ದ ಈ ಖ್ಯಾತ ನಟ-ನಟಿ ಅಭಿಮಾನಿಗಳ ನಿರೀಕ್ಷೆಯಂತೆ ದಾಂಪತ್ಯ ಜೀವನಕ್ಕೆ ಹೆಜ್ಜೆಯಿಟ್ಟು ಇದೀಗ ಹೊಸ ಮನೆಗೂ ಕೂಡ ಪ್ರವೇಶ ಮಾಡಿದ್ದಾರೆ. ಹೌದು ಸಿನಿಮಾ ಅಥವಾ ಕಿರುತೆರೆಯಲ್ಲಿ ನಟಿಸುವ ಕಲಾವಿದರು ವೀಕ್ಷಕರ ಮೇಲೆ ಅಪಾರವಾದ ಪ್ರಭಾವ ಬೀರುತ್ತಾರೆ. ಸಿನಿಮಾದಲ್ಲಿ ಮತ್ತು ಧಾರಾವಾಹಿಯಲ್ಲಿ ಅಭಿನಯಿಸುವ ಕಲಾವಿದರನ್ನ ಆ ಪಾತ್ರಗಳು ಇಷ್ಟವಾದರೆ ತಮ್ಮ ಮನೆಯವರಂತೆ ನೋಡುತ್ತಾರೆ. ಅದರಂತೆ ತಮ್ಮ ನೆಚ್ಚಿನ ನಟ-ನಟಿಯರು ತೊಡುವ ಉಡುಗೆ-ತೊಡುಗೆಗಳನ್ನ ಕೂಡ ಖರೀದಿ ಮಾಡಿ ತಾವೂ ಕೂಡ ಅವರಂತೆ ಧರಿಸಬೇಕು ಎಂದು ಆಸೆ ಪಡುತ್ತಾರೆ. ಅಷ್ಟರ ಮಟ್ಟಿಗೆ ಆ ನಟ-ನಟಿಯರನ್ನ ಅಚ್ಚುಕೊಳ್ಳುತ್ತಾರೆ. ಅದೇ ರೀತಿಯಾಗಿ ಕನ್ನಡ ಕಿರುತೆರೆ ವೀಕ್ಷಕರು ಅಚ್ಕೊಂಡಿದ್ದ ನಟ-ನಟಿ ಅಂದರೆ ಅದು ಚಂದನ್ ಮತ್ತು ಕವಿತಾ. ಕನ್ನಡ ಕಿರುತೆರೆಯ ಜನಪ್ರಿಯ ವಾಹಿನಿ ಯಾದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮಿ ಬಾರಮ್ಮಾ ಧಾರಾವಾಸಿ ಅಪಾರ ಜನ ಮೆಚ್ಚುಗೆ ಪಡೆದುಕೊಂಡಿತ್ತು.

ಈ ಲಕ್ಷ್ಮಿ ಬಾರಮ್ಮಾ ಧಾರಾವಾಹಿಯಲ್ಲಿ ಪ್ರಧಾನ ಪಾತ್ರ ಅಂದರೆ ಚಂದನ್, ಚಿನ್ನು ಮತ್ತು ಗೊಂಬೆ. ಚಂದನ್ ಮತ್ತು ಚಿನ್ನು ಪಾತ್ರಗಳು ನೋಡುಗರಿಗೆ ತುಂಬಾ ಮುದ್ದಾದ ಜೋಡಿಗಳಂತೆ ಕಾಣುತ್ತಿದ್ದವು. ಈ ಚಿನ್ನು ಪಾತ್ರ ನಿರ್ವಹಿಸುತ್ತಿದ್ದ ನಟಿ ಕವಿತಾ ಅವರನ್ನ ನಾಡಿನಾದ್ಯಂತ ಮನೆ ಮಗಳಂತೆ ನೋಡುವಂತಹ ಜನಪ್ರಿಯತೆ ತಂದುಕೊಟ್ಟಿತು. ಹೀಗೆ ನಟ ಚಂದನ್ ಮತ್ತು ಕವಿತಾ ಜೋಡಿ ವೀಕ್ಷಕರಿಗೆ ಮೋಡಿ ಮಾಡಿ ಯಶಸ್ವಿಯಾಗಿ ಈ ಧಾರಾವಾಹಿ ಪ್ರದರ್ಶನ ಕಂಡಿತು. ಬಳಿಕ ಈ ಧಾರಾವಾಹಿಯಿಂದ ಚಂದನ್ ಮತ್ತು ಕವಿತಾ ಇಬ್ಬರು ಕೂಡ ಹೊರ ಬಂದರು. ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ವೋ ನಲ್ಲಿ ಒಂದೊಂದು ಸೀಸನ್ ನಲ್ಲಿ ಇಬ್ಬರು ಕೂಡ ಭಾಗವಹಿಸಿದರು. ದೊಡ್ಮನೆಯಿಂದ ಹೊರ ಬಂದ ಬಳಿಕ ಚಂದನ್ ಮತ್ತು ಕವಿತಾ ಇಬ್ಬರು ಪರಸ್ಪರ ಲೈವ್ ಬರುತ್ತಿದ್ದರು. ಆಗ ಅವರ ಫ್ಯಾನ್ಸ್ ಕೂಡ ನೀವಿಬ್ಬರು ಉತ್ತಮ ಜೋಡಿ ಮದುವೆ ಏಕೆ ಆಗಬಾರದು ಎಂದು ಕೇಳುತ್ತಿದ್ದರು.

ಈಗ ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಎಂದು ಸಬೂಬು ಹೇಳುತ್ತಿದ್ದ ಈ ಇಬ್ಬರು ಇದ್ದಕಿದ್ದಂತೆ ಒಂದು ದಿನ ಸೋಶಿಯಲ್ ಮೀಡಿಯಾದಲ್ಲಿ ತಾವಿಬ್ಬರು ಜೊತೆಯಾಗಿರುವ ಫೋಟೋವೊಂದನ್ನ ಶೇರ್ ಮಾಡಿ ನಾವಿಬ್ಬರು ಮದುವೆ ಆಗುತ್ತಿದ್ದೇವೆ ಎಂದು ಮಾಹಿತಿ ನೀಡುತ್ತಾರೆ. ಅದರಂತೆ ಕಳೆದ ವರ್ಷ ಲಾಕ್ ಡೌನ್ ಸಂಧರ್ಭದಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡುತ್ತಾರೆ. ಇದೀಗ ಸಾಂಸಾರಿಕ ಜೀವನ ನಡೆಸುತ್ತಿರುವ ಈ ಜೋಡಿ ಬರೋಬ್ಬರಿ 70 ಲಕ್ಷ ಮೌಲ್ಯದ ಮನೆ ಖರೀದಿ ಮಾಡಿ ಸುದ್ದಿ ಆಗಿದ್ದಾರೆ. ತಮ್ಮ ಹೊಸ ಮನೆಯ ಮಹಡಿಯಲ್ಲಿ ನಿಂತು ಜೊತೆಯಾಗಿ ಫೋಟೋ ತೆಗೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಈ ವಿಚಾರ ತಿಳಿಸಿದ್ದಾರೆ. ನೂತನ ಮನೆಗೆ ಹೆಜ್ಜೆ ಇಟ್ಟಿರುವ ಈ ನೂತನ ದಂಪತಿಗಳಿಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ.