ಹೊಸ ಕನ್ನಡ ಬಿಗ್ ಬಾಸ್ ಶೋ ಶುರುವಾಗುವ ದಿನಾಂಕ ಫಿಕ್ಸ್, ಇದೇ ವಾರ ಕಲರ್ಸ್ ಕನ್ನಡದಲ್ಲಿ ಶುರು

ಅಂತೂ ಇಂತೂ ಎಲ್ಲರ ಫೇವರೇಟ್ ಬಿಗ್ ಬಾಸ್ ರಿಯಾಲಿಟಿ ಶೋ ಇನ್ನೆನೋ ಕೆಲವೇ ದಿನಗಳಲ್ಲಿ ನಿಮ್ಮ ಮನೆಯ ಟಿವಿಗಳಲ್ಲಿ ಬರಲಿದೆ. ಈಗಾಗಲೇ ಅದರ ಒಂದು ಸಣ್ಣ ಝಲಕ್ ಕೂಡ ಸಿಕ್ಕಿದೆ. ಹಾಗಾದರೆ ಬಿಗ್ ಬಾಸ್ ಸೀಸನ್ 9ರ ರಿಯಾಲಿಟಿ ಶೋ ಯಾವಾಗ ಪ್ರಸಾರ ಆಗಲಿದೆ. ಬದಲಾದ ಸಮಯದಲ್ಲಿ ಬರಲಿದ್ಯ ಅನ್ನೋದನ್ನ ತಿಳಿದುಕೊಳ್ಳೋಣ. ಕಿಚ್ಚ ಸುದೀಪ್ ಅವರ ಸೊಗಸಾದ ನಿರೂಪಣೆ, ಖಡಕ್ ಮಾತು, ಅವರ ಆಕರ್ಷಕ ಉಡುಪುಗಳ ಉಪಸ್ಥಿತಿಯಲ್ಲಿ ಮೂಡಿ ಬರೋ ಈ ಬಿಗ್ ಬಾಸ್ ರಿಯಾಲಿಟಿ ಶೋ ನೋಡಲು ಕನ್ನಡ ಕಿರುತೆರೆ ವೀಕ್ಷಕರು ಭಾರಿ ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಬಿಗ್ ಬಾಸ್ ಓಟಿಟಿ ಮುಗಿಯುವ ಹಂತ ತಲುಪಿದೆ.

ಬಿಗ್ ಬಾಸ್ ಓಟಿಟಿ ಫೈನಲ್ ರೌಂಡ್ ಗೆ ರಾಕೇಶ್ ಅಡಿಗ, ಸಾನ್ಯಾ ಅಯ್ಯರ್ ಮತ್ತು ರೂಪೇಶ್ ಶೆಟ್ಟಿ ಈ ಮೂವರು ಸ್ಪರ್ಧಿಗಳು ಅಧಿಕೃತವಾಗಿ ಎಂಟ್ರಿ ಆಗಿದ್ದಾರೆ. ಬಿಗ್ ಬಾಸ್ ಓಟಿಟಿ ಟ್ರೋಫಿ ಯಾರ ಕೈ ಸೇರಲಿದೆ ಅನ್ನೋದು ವೀಕ್ಷಕರ ಕೈಯಲ್ಲಿದೆ. ಇದರ ನಡುವೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಸೀಸನ್ 9ರ ಆರಂಭದ ಬಗ್ಗೆ ಒಂದು ಹೊಸ ಅಪ್ ಡೇಟ್ಸ್ ಬಂದಿದೆ.ಅದೂ ಕೂಡ ಪ್ರೋಮೋ ಮೂಲಕ. ಈ ಪ್ರೋಮೋದಲ್ಲಿ ಮಾಜಿ ಬಿಗ್ ಬಾಸ್ ಸ್ಪರ್ಧಿಗಳಾಗಿರೋ ದೀಪಿಕಾ ದಾಸ್, ವೈಷ್ಣವಿ ಗೌಡ, ಪ್ರಶಾಂತ್ ಸಂಬರಗಿ, ಅನುಪಮಾ ಗೌಡ ಕನ್ನಡದ ಬಿಗ್ ಬಾಸ್ ಸೀಸನ್9 ಬರಲಿದೆ ಎಂದು ಹೇಳಿದ್ದಾರೆ. ಹೌದು ಇದೇ ಸೆಪ್ಟೆಂಬರ್ 24ಕ್ಕೆ ಬಿಗ್ ಬಾಸ್ ಸೀಸನ್9 ಗ್ರ್ಯಾಂಡ್ ಓಪನಿಂಗ್ ಇದ್ದು, ಬಾದ್ ಶಾ ಕಿಚ್ಚ ಸುದೀಪ್ ಖಡಕ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸೆಪ್ಟೆಂಬರ್ 24ರಂದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಸಂಜೆ 6 ಗಂಟೆಗೆ ಗ್ರ್ಯಾಂಡ್ ಓಪನಿಂಗ್ ಆಗಲಿದೆ. ಪ್ರತಿ ದಿನ ರಾತ್ರಿ 9.30ಕ್ಕೆ ಈ ಬಿಗ್ ಬಾಸ್ ಸೀಸನ್9 ಪ್ರಸಾರವಾಗಲಿದೆ. ಈ ಬಾರಿಯ ಬಿಗ್ ಬಾಸ್ ಶೋನಲ್ಲಿ ಪ್ರವೀಣರ ಜೊತೆ ನವೀನರು ಇರಲಿದ್ದಾರೆ ಎಂದು ತಿಳಿಸಲಾಗಿದೆ. ಹೊಸಬರ ದಂಡು ಈ ಸೀಸನ್ ನಲ್ಲಿ ಬಹುಶಃ ನಿರೀಕ್ಷೆ ಮಾಡಬಹುದಾಗಿದೆ. ಬಿಗ್ ಬಾಸ್9 ಆರಂಭ ಆಗುತ್ತಿದೆ ಅನ್ನೋ ಸುದ್ದಿ ಕೇಳಿದ ನಂತರ ಈಗ ಈ ಬಿಗ್ ಬಾಸ್ ಸೀಸನ್9 ರಲ್ಲಿ ಯಾವ್ಯಾವ ಸ್ಪರ್ಧಿಗಳು ಇರಲಿದ್ದಾರೆ ಅನ್ನೋ ಲೆಕ್ಕಾಚಾರ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಗಿಯೇ ಆಗ್ತಿದೆ. ಅನೇಕರು ಕಾಫಿನಾಡು ಚಂದು ಇರ್ಲೇಬೇಕು. ನಾವ್ ಬಿಗ್ ಬಾಸ್ ಸೀಸನ್ 9ರಲ್ಲಿ ಕಾಪಿನಾಡು ಚಂದುನಾ ನೋಡ್ಲೇಬೇಕು ಅಂತ ಕಮೆಂಟ್ ಮಾಡುತ್ತಿದ್ದಾರೆ.

Leave a Reply

%d bloggers like this: