ಹೊಸ ಹೊಟೆಲ್ ಶುರು ಮಾಡಿದ ಕನ್ನಡದ ಖ್ಯಾತ ಕಿರುತೆರೆ ಜೋಡಿ

ಲಕ್ಷ್ಮಿ ಬಾರಮ್ಮಾ ಧಾರಾವಾಹಿಯ ಮೂಲಕ ಅಪಾರ ಜನಪ್ರಿಯತೆ ಗಳಿಸಿರೋ ನಟ ಚಂದನ್ ಇಂದು ಕನ್ನಡ ಮಾತ್ರ ಅಲ್ಲದೆ ಬೇರೆ ಭಾಷೆಯ ಧಾರಾವಾಹಿಗಳಲ್ಲಿಯೂ ಕೂಡಾ ನಟಿಸುತ್ತಿದ್ದಾರೆ. ಅದೇ ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಚಿನ್ನು ಪಾತ್ರಧಾರಿಯಾಗಿ ಎಲ್ಲರ ಮನಗೆದ್ದ ನಟಿ ಕವಿತಾ ಗೌಡ ಅವರನ್ನ ಪ್ರೀತಿಸಿ ಮದುವೆಯಾದ ಚಂದನ್ ಸುಂದರ ಕುಟುಂಬವನ್ನ ತಮ್ಮದಾಗಿಸಿಕೊಂಡಿದ್ದಾರೆ. ಗೆಳತಿಯಾಗಿದ್ದ ಕವಿತಾ ಗೌಡ ಇದೀಗ ತಮ್ಮ ಬಾಳ ಸಂಗಾತಿಯಾದ ನಂತರ ನಟ ಚಂದನ್ ಗೌಡ ನಟನೆಯ ಜೊತೆಗೆ ಹೋಟೆಲ್ ಉದ್ಯಮದ ಕಡೆಗೂ ಕೂಡ ಹೆಚ್ಚು ಗಮನ ಹರಿಸುತ್ತಿದ್ದಾರೆ. ಮದುವೆಗೆ ಮುನ್ನ ಚಂದನ್ ಬೆಂಗಳೂರಿನ ಸಹಕಾರನಗರದಲ್ಲಿ ಬಿರಿಯಾನಿ ಹೋಟೆಲ್ ಅನ್ನ ತೆರೆದಿದ್ದರು. ಈ ಬಿರಿಯಾನಿ ಹೋಟೆಲ್ ಟೇಪ್ ಕಟ್ ಮಾಡೋದಕ್ಕೆ ಸೆಂಚ್ಯೂರಿ ಸ್ಟಾರ್ ಶಿವಣ್ಣ ಕೂಡ ಬಂದಿದ್ದು ಸ್ಪೆಷಲ್ ಆಗಿತ್ತು.

ಇದೀಗ ಮೈಸೂರು ರೋಡ್ ಮಂಡಿಪೇಟೆ ಪಲಾವ್ ಎಂಬ ಮತ್ತೊಂದು ಹೋಟೆಲ್ ತೆರೆದು ಸಖತ್ ಸುದ್ದಿಯಾಗಿದ್ದಾರೆ ಈ ಚಂದನ್ ಮತ್ತು ಕವಿತಾಗೌಡ. ಕೆಲವು ದಿನಗಳ ಹಿಂದೆಯಷ್ಟೇ ಈ ಜೋಡಿ ಹೊಸ ಮನೆಯ ಗೃಹ ಪ್ರವೇಶ ಮಾಡಿ ತಮ್ಮ ನೂತನ ಮನೆಯ ಒಂದಷ್ಟು ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಇದೀಗ ಹೊಸದಾಗಿ ಆರಂಭ ಮಾಡಿರೋ ಮಂಡಿಪೇಟೆ ಪಲಾವ್ ಅನ್ನೋ ಹೋಟೆಲ್ ಫೋಟೋ ಹಾಕಿ ಚಂದನ್ ಮತ್ತು ಕವಿತಾ ಗೌಡ ಇಬ್ಬರು ತಮ್ಮ ಸಂಭ್ರಮಿಸಿದ್ದಾರೆ. ನಟಿ ಕವಿತಾಗೌಡ ಅವರು ತಮ್ಮ ಪ್ರೀತಿಯ ಪತಿ ಚಂದನ್ ಅವರ ವೃತ್ತಿ ಮತ್ತು ಉದ್ಯಮ ಎರಡಕ್ಕೂ ಬೆಂಬಲವಾಗಿ ನಿಂತು ತಾವು ಕೂಡ ತಮಿಳಿನ ಅನ್ಬೇ ಶಿವಂ ಸೇರಿದಂತೆ ಕನ್ನಡದಲ್ಲಿ ಒಂದಷ್ಟು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಕೆಲವು ಸಿನಿಮಾಗಳಲ್ಲಿ ಸಹ ನಟಿಸುತ್ತಿದ್ದಾರೆ. ಒಟ್ಟಾರೆಯಾಗಿ ಚಂದನ್ ಮತ್ತು ಕವಿತಾ ಗೌಡ ಇಬ್ಬರು ಸಹ ನಟನೆಯ ಜೊತೆಗೆ ಉದ್ಯಮಿಗಳಾಗಿ ಸಹ ಯಶಸ್ಸನ್ನ ಕಾಣುತ್ತಿದ್ದಾರೆ.

Leave a Reply

%d bloggers like this: