ಹೊಸ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಹೊಸಪೇಟೆಯ ಯುವ ನಟ

ನಿರ್ದೇಶಕ ಶಶಾಂಕ್ ಅವರು ತಮ್ಮ ಸಿನಿಮಾಗಳಲ್ಲಿ ಹೊಸ ಕಲಾವಿದರನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಅದಕ್ಕೆ ಹಲವಾರು ಕಾರಣ ಇರಬಹುದು. ಇಂದು ಕನ್ನಡ ಚಿತ್ರರಂಗದಲ್ಲಿ ಶಶಾಂಕ್ ಅವರು ಪರಿಚಯಿಸಿದ ಎಷ್ಟೋ ಮಂದಿ ದೊಡ್ಡ ಸ್ಟಾರ್ ನಟರಾಗಿ, ನಟಿಯರಾಗಿ ಮಿಂಚುತ್ತಿದ್ದಾರೆ. ಇದೀಗ ನಿರ್ದೇಶಕ ಶಶಾಂಕ್ ಅವರು ತಾಯಿಗೆ ತಕ್ಕ ಮಗ ಚಿತ್ರದ ನಂತರ ಲವ್ 360 ಸಿನಿಮಾ ನಿರ್ದೇಶನ ಮಾಡಿದ್ದಾರೆ. ಲವ್ 360 ಸಿನಿಮಾದಲ್ಲಿ ಹೊಸ ನಾಯಕ ನಟನನ್ನ ಪರಿಚಯ ಮಾಡುತ್ತಿದ್ದಾರೆ. ಅವರೇ ಹೆಸರೇ ಪ್ರವೀಣ್. ಪ್ರವೀಣ್ ಅವರು ಮೂಲತಃ ಹೊಸಪೇಟೆ ಅವರು. ವೈದ್ಯಕೀಯ ಪದವಿ ಪಡೆದಿರುವ ಪ್ರವೀಣ್ ಅವರಿಗೆ ನಟನೆಯಲ್ಲಿ ಹೆಚ್ಚು ಆಸಕ್ತಿ ಇದ್ದರಿಂದ ವೈದ್ಯ ವೃತ್ತಿಯನ್ನ ಬದಿಗೊತ್ತಿ ಬಣ್ಣದ ಲೋಕಕ್ಕೆ ಹೆಜ್ಜೆ ಇಟ್ಟಿದ್ದಾರೆ.

ನಟನೆ ಕಲಿಬೇಕು ಅಂತ ಪ್ರವೀಣ್ ಅವರು ವಿಶಾಖ ಪಟ್ಟಣ, ಬೆಂಗಳೂರಿನ ಆದರ್ಶ ಫಿಲಂ ಇನ್ಸ್ಟಿಟ್ಯೂಟ್ ಅಂಡ್ ಮಾಲೂರು ಶ್ರೀನಿವಾಸ್ ಅವರ ಜಿ ಅಕಾಡೆಮೆಯಲ್ಲಿ ನಟನೆ ತರಬೇತಿ ಪಡೆದಿದ್ದಾರೆ. ತನ್ನ ನಟನೆ ಮತ್ತು ಮುಗ್ದತೆಯ ವ್ಯಕ್ತಿತ್ವ ಭಾವದಿಂದ ನಿರ್ದೇಶಕ ಶಶಾಂಕ್ ಅವರ ಮನ ಗೆದ್ದ ಪ್ರವೀಣ್ ಅವರು ಅದೃಷ್ಟ ಎಂಬಂತೆ ಅವರ ಸಿನಿಮಾದಲ್ಲಿ ಕೂಡ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಪ್ರೇಮ ಕಥೆಗಳನ್ನ ಚೆನ್ನಾಗಿ ಎಣಿಯಬಲ್ಲ ಶಶಾಂಕ್ ಅವರು ಈ ಬಾರಿಯೂ ಕೂಡ ಲವ್ 360 ಎಂಬ ಚಿತ್ರದಲ್ಲಿ ಅದೇ ತಮ್ಮ ಲವ್ ಸ್ಟೋರಿ ಫಾರ್ಮೂಲಾವನ್ನ ಬಳಸಿಕೊಂಡಿದ್ದಾರೆ. ಈ ಲವ್ 360 ಸಿನಿಮಾದಲ್ಲಿ ನಾಯಕಿಯಾಗಿ ಲವ್ ಮಾಕ್ಟೇಲ್ ಚಿತ್ರದ ಹೆಂಗೆನಾವು ಡೈಲಾಗ್ ಖ್ಯಾತಿಯ ನಟಿ ರಚನಾ ಅಭಿನಯಿಸಿದ್ದಾರೆ. ಈಗಾಗಲೇ ಈ ಲವ್ 360 ಚಿತ್ರದ ಹಾಡು ಸೂಪರ್ ಹಿಟ್ ಆಗಿದ್ದು, ಇನ್ನೆನೋ ಕೆಲವೇ ದಿನಗಳಲ್ಲಿ ಥಿಯೇಟರ್ ಅಂಗಳಕ್ಕೆ ಈ ಸಿನಿಮಾ ಎಂಟ್ರಿ ಕೊಡಲಿದೆ. ಟ್ರೇಲರ್ ಮೂಲಕ ಭರವಸೆ ಮೂಡಿಸಿರುವ ಈ ಸಿನಿಮಾ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.