ಹೊಸ ಕಾರು ಖರೀದಿಸಿ ಸುದ್ದಿಯಾದ ದಕ್ಷಿಣ ಭಾರತದ ಜನಪ್ರಿಯ ನಟಿ

ಇತ್ತೀಚೆಗೆ ಯಾಕೋ ಬಾಲಿವುಡ್ ಸ್ಟಾರ್ಸ್ ಗಳಿಗಿಂತ ನಮ್ಮ ಸೌತ್ ಸಿನಿ ಸ್ಟಾರ್ಸ್ ಗಳೇ ಭಾರಿ ಸುದ್ದಿ ಆಗುತ್ತಿದ್ದಾರೆ. ಅದೂ ಕೂಡ ದುಬಾರಿ ಕಾರ್ ಗಳನ್ನ ಕೊಳ್ಳುವ ಮೂಲಕ ಅನ್ನೋದು ವಿಶೇಷ. ಹೌದು ಈ ನಟಿ ಯಾವುದೇ ದೊಡ್ಡ ಸಿನಿಮಾಗಳನ್ನ ಮಾಡಿಲ್ಲ. ಆದರೆ ಮಲೆಯಾಳಂ ಚಿತ್ರರಂಗದ ಬಿಗ್ ಸ್ಟಾರ್ ನಟರ ಜೊತೆ ಪ್ರಮುಖ ಪಾತ್ರಗಳನ್ನ ಮಾಡಿದ್ದಾರೆ. ಅದರ ಜೊತೆಗೆ ವೆಬ್ ಸೀರಿಸ್ ಅಂಡ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ರೀಲ್ಸ್ ಮಾಡೋ ಮೂಲಕ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇನ್ನು ಈ ನಟಿಯ ಹೆಸರು ಅಮೇಯಾ ಮ್ಯಾಥ್ಯೂ. ಮಾಡೆಲ್ ಆಗಿ ಮಾಯಾಲೋಕಕ್ಕೆ ಹೆಜ್ಜೆ ಇಟ್ಟು ಇಂದು ಮಲೆಯಾಳಂ ಚಿತ್ರರಂಗದಲ್ಲಿ ಈಕೆಗೆ ಯಾವ ಸೂಪರ್ ಸ್ಟಾರ್ ನಟಿಗೂ ಕಡಿಮೆ ಇಲ್ಲದಂತ ಅಭಿಮಾನಿಗಳಿದ್ದಾರೆ. ಕರಿಕ್ಕು ಎಂಬ ವೆಬ್ ಸೀರೀಸ್ ಬಳಿಕ ನಟಿ ಅಮೇಯಾ ಮ್ಯಾಥ್ಯೂ ಅವರ ಜನಪ್ರಿಯತೆ ಈಗ ದುಪ್ಪಟ್ಟಾಗಿದೆ.

ನಟಿ ಅಮೇಯಾ ಮ್ಯಾಥ್ಯೂ ಅವರಿಗೆ ಕಾರ್ ಕ್ರೇಜ಼್ ಮೊದಲಿಂನಿಂದಾಲೂ ಇದೆ. ಅವರ ಬಳಿ ಈಗಾಗಲೇ ಮಾರುತಿ ಸುಜುಕಿ ಎಸ್ ಪ್ರೆಸ್ಸೋ ಅಂಡ್ ಪೊಲೊ ಜಿಟಿ ಕಾರ್ ಗಳಿವೆ. ಇದೀಗ ಹೊಸದಾಗಿ ದುಬಾರಿ ಬೆಲೆಯ ಕಿಯಾ ಸೊನೆಟ್ ಕಾರ್ ಅನ್ನ ಖರೀದಿ ಮಾಡಿದ್ದಾರೆ. ಕೊರಿಯಾ ಮೂಲದ ಈ ಕಿಯಾ ಸೊನೆಟ್ ಇಂಡಿಯಾ ಕಾರು ಎರಡು ವರ್ಷಗಳ ಹಿಂದೆಯಷ್ಟೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿತ್ತು. ಕಿಯಾ ಸೊನೆಟ್ ಕಾರು ಸಬ್ ಕಾಂಪ್ಯಾಕ್ಟ್ ಎಸ್ಯುವಿ ಪೆಟ್ರೋಲ್ ಅಂಡ್ ಡೀಸೆಲ್ ಎಂಜಿನ್ ಆಯ್ಕೆಗಳನ್ನೊಂದಿದೆ. ಇದರಲ್ಲಿ 1.2ಲೀಟರ್ ಯುನಿಟ್ ಅಂಡ್ 1.0ಲೀಟರ್ ಟರ್ಬೋ ಚಾರ್ಜ್ಡ್ ಪೆಟ್ರೋಲ್ ಅನ್ನ ಹೊಂದಿದೆ. 84 ಬಿ.ಎಚ್.ಪಿ ಪವರ್ ಅಂಡ್ 115 ಎನ್ಎಮ್ ಟಾರ್ಕ್ ಅನ್ನ ಉತ್ಪಾದನೆ ಮಾಡುತ್ತದೆ.

ಇದು ಫೈವ್ ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಹೊಂದಿದ್ದು, ಎಲ್ಇಡಿ ಟೈಲ್ ಲೈಟ್ಸ್ ಫ್ಲಕ್ಸ್ ಡಿಫ್ಯೂಸರ್ ಅಂಡ್ ರಿಯರ್ ಬಂಪರ್ ಹೊಂದಿದೆ. ಮಲ್ಟಿ ಇನ್ಫೋಟೈನ್ ಮೆಂಟ್ ಸಿಸ್ಟಂ ಜೊತೆಗೆ ಆಯಪಲ್ ಕಾರ್ ಪ್ಲೇ ಅಂಡ್ ಅಂಡ್ರಾಯಿಡ್ ಆಟೋ ಕನೆಕ್ಟಿಟಿಯನ್ನ ಹೊಂದಿರುವುದರ ಜೊತೆಗೆ ಅಡ್ವಾನ್ಸ್ ಫೀಚರ್ ಗಳನ್ನ ಹೊಂದಿದೆ. ಈ ಕಾರಿನ ಬೆಲೆ ಹತ್ತರಿಂದ 25ಲಕ್ಷದವರೆಗೆ ವಿವಿಧ ವೇರಿಯೆಂಟ್ಗಳಲ್ಲಿ ಇದೆ ಎಂದು ಹೇಳಲಾಗುತ್ತದೆ. ಇನ್ನು ನಟಿ ಅಮೇಯಾ ಮ್ಯಾಥ್ಯು ಅವರು ಈ ವಿಶೇಷ ಕಾರ್ ಖರೀದಿಸಿರುವ ಫೋಟೋಗಳನ್ನ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಹೊಸ ಕಾರಿನ ಜೊತೆ ನಿಂತು ಫೋಸ್ ಕೊಟ್ಟಿರೋ ಅಮೇಯಾ ಅವರ ಪೋಟೋ ಕಂಡು ಅಭಿಮಾನಿಗಳು ನೀವು ಎಷ್ಟೇ ದುಬಾರಿ ಕಾರು ಖರೀದಿಸಿದರು ಅದಕ್ಕಿಂತ ನೀವೇ ಚಂದ ಎಂದು ಕಮೆಂಟ್ ಮಾಡಿದ್ದಾರೆ.

Leave a Reply

%d bloggers like this: