ಹೊಸ ಅಲೆ ಎಬ್ಬಿಸಿದ ಕಬ್ಜ, ನಾಲ್ಕೇ ದಿನದಲ್ಲಿ ಉಪೇಂದ್ರ ಅವರ ಬಗ್ಗೆ ಗೂಗಲ್ ಅಲ್ಲಿ ಎಷ್ಟು ಜನ ಹುಡುಕಾಡಿದ್ದಾರೆ ಗೊತ್ತಾ

ಕಬ್ಜ ಸಿನಿಮಾದ ಟೀಸರ್ ರಿಲೀಸ್ ಆಗಿದ್ದೇ ತಡ ಗೂಗಲ್ ಅಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರ ಹುಡುಕಾಟ ಎಷ್ಟಾಗಿದೆ ಅಂತ ನೀವ್ ತಿಳಿದ್ರೆ ನಿಜಕ್ಕೂ ಕೂಡ ಅಚ್ಚರಿ ಪಡ್ತೀರಿ. ಹೌದು ಇತ್ತೀಚೆಗೆ ತಾನೇ ಸೆಪ್ಟೆಂಬರ್17 ಶನಿವಾರದಂದು ಬೆಂಗಳೂರಿನ ಒರಾಯನ್ ಮಾಲ್ ನಲ್ಲಿ ಕಬ್ಜ ಸಿನಿಮಾದ ಟೀಸರ್ ಅನ್ನ ಟಾಲಿವುಡ್ ಸ್ಟಾರ್ ನಟ ರಾಣಾ ದಗ್ಗುಬಾಟಿ ಲಾಂಚ್ ಮಾಡಿದ್ದರು. ಕಬ್ಜ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆ ಇತ್ತು. ಆ ನಿರೀಕ್ಷೆ ಟೀಸರ್ ರಿಲೀಸ್ ಆದ ನಂತರ ದುಪ್ಪಟ್ಟಾಗಿದೆ. ನಿರ್ದೇಶಕ ಆರ್.ಚಂದ್ರು ಅವರು ಕಬ್ಜ ಸಿನಿಮಾದ ಬಗ್ಗೆ ಮಾತನಾಡಿದಾಗಲೆಲ್ಲಾ ಒಂದಲ್ಲ ಒಂದು ವ್ಯಂಗ್ಯ ಟೀಕೆಗಳು ಕೇಳಿ ಬರುತ್ತಿದ್ದವು. ಸಿನಿಮಾದ ಬಗ್ಗೆ ವರ್ಷಾನುಗಟ್ಟಲೇಯಿಂದ ಹೇಳ್ತಾನೇ ಇದ್ದೀರಿ ಒಂದು ಟೀಸರನ್ನ ಕೂಡ ಬಿಡುಗಡೆ ಮಾಡುತ್ತಿಲ್ಲ ಅನ್ನೋ ಮಾತು ಗಾಂಧಿನಗರದಲ್ಲಿ ಕೇಳಿ ಬರುತ್ತಿತ್ತು.

ಆದ್ರೇ ಆರ್.ಚಂದ್ರು ಅವರು ಈ ಮಾತನ್ನೆಲ್ಲಾ ಕೇಳಿ ಉಪ್ಪಿ ಬರ್ಥ್ ಡೇ ಮುನ್ನ ದಿನ ಒಂದು ಸಖತ್ ಸರ್ಪ್ರೈಸ್ ಕೊಟ್ಟಿದ್ದಾರೆ. ಈ ಸರ್ಪೈಸ್ ಕೇವಲ ಉಪ್ಪಿ ಅವರಿಗೆ ಮಾತ್ರ ಅಲ್ಲ. ಇಡೀ ಕನ್ನಡ ಚಿತ್ರರಂಗಕ್ಕೆ ಬಿಗ್ ಸರ್ಪ್ರೈಸ್ ಅಂತಾನೇ ಹೇಳ್ಬೋದು. ಟೀಸರ್ ನಲ್ಲಿ ಕಬ್ಜ ಸಿನಿಮಾದ ಮೇಕಿಂಗ್ ಅದ್ದೂರಿಯಾಗಿದೆ. ಕೆಜಿಎಫ್ ಚಿತ್ರದ ಮಟ್ಟಿಗೆ ಈ ಕಬ್ಜ ಸಿನಿಮಾ ಇದೆ ಅಂತ ಹೇಳ್ಬೋದು. ಅಷ್ಟರ ಮಟ್ಟಿಗೆ ವಿಶ್ಯೂವಲ್ಸ್ ಮತ್ತು ಬಿಜಿಎಮ್ ಸೌಂಡ್ ಮಾಡುತ್ತಿದೆ. ಅದರಲ್ಲೂ ರಿಯಲ್ ಸ್ಟಾರ್ ಉಪೇಂದ್ರ ಅವರ ಲುಕ್ ಮಾತ್ರ ಬೆಂಕಿ ಅಂತಾನೇ ಹೇಳ್ಬೋದು. ಇನ್ನೊಂದು ಕಡೆ ಟೀಸರ್ ಕ್ಲೈಮ್ಯಾಕ್ಸ್ ನಲ್ಲಿ ಕಾಣಿಸಿಕೊಳ್ಳೋ ಕಿಚ್ಚನ ಎಂಟ್ರಿ ಸಿನಿ ಪ್ರಿಯರಿಗೆ ಹಬ್ಬ ಅಂತಾನೇ ಹೇಳಲಾಗ್ತಿದೆ. ಒಟ್ಟಾರೆಯಾಗಿ ಕಬ್ಜ ಸಿನಿಮಾದ ಟೀಸರ್ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಮಾಡುತ್ತಿದೆ.

ಬರೋಬ್ಬರಿ ಎರಡೂವರೆ ಕೋಟಿ ವೀಕ್ಷಣೆ ಪಡೆದು ವರ್ಲ್ಡ್ ವೈಡ್ ರೂಲ್ ಮಾಡಲು ಇದೀಗ ಕಬ್ಜ ಸಿನಿಮಾ ಸಜ್ಜಾಗುತ್ತಿದೆ. ಕಬ್ಜ ಸಿನಿಮಾದ ಟೀಸರ್ ಈ ಮಟ್ಟಿಗೆ ಮೆಚ್ಚುಗೆ ಪಡೆದು ದಾಖಲೆಯ ವೀಕ್ಷಣೆ ಪಡೆದ ನಂತರ ಗೂಗಲ್ ನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರ ಬಗ್ಗೆ ಹೆಚ್ಚೆಚ್ಚು ಹುಡುಕಾಟ ನಡೆಯುತ್ತಿದೆ. ಈಗಾಗಲೇ ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ ಸಿನಿಮಾಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ಅಪಾರ ಜನಪ್ರಿಯತೆ ಹೆಸರು ಗಳಿಸಿದ್ದಾರೆ. ಆದರೆ ಯಾವಾಗ ಕಬ್ಜ ಸಿನಿಮಾದ ಟೀಸರ್ ರಿಲೀಸ್ ಆದ ನಂತರ ನಾಲಕ್ಕೆ ದಿನಗಳಲ್ಲಿ ಬಲೋಬ್ಬರಿ ಮೂವತ್ತೈದು ಸಾವಿರಕ್ಕೂ ಅಧಿಕ ಜನ ಉಪೇಂದ್ರ ಅವರ ಬಗ್ಗೆ ಹುಡುಕಾಟ ನಡೆಸಿದ್ದಾರೆ. ಈ ಮೂಲಕ ಹೆಚ್ಚು ಜನರಿಗೆ ಉಪ್ಪಿ ಅವರ ಬಗ್ಗೆ ತಿಳಿಯುತ್ತಿದೆ, ಇದು ನಿಜಕ್ಕೂ ಕೂಡ ಕಬ್ಜ ಸಿನಿಮಾದ ಟೀಸರ್ ಎಫೆಕ್ಟ್ ಅಂದರೆ ತಪ್ಪಾಗಲಾರದು. ಕಬ್ಜ ಸಿನಿಮಾದ ಬಗ್ಗೆ ಈಗ ಎಲ್ಲೆಡೆ ಸಖತ್ ಟಾಕ್ ಆಗುತ್ತಿದ್ದು, ಚಿತ್ರ ಯಾವಾಗ ರಿಲೀಸ್ ಆಗುತ್ತೆ ಎಂದು ಸಿನಿ ಪ್ರೇಕ್ಷಕರು ಕಾತುರದಿಂದ ಕಾಯುವಂತಾಗಿದೆ.

Leave a Reply

%d bloggers like this: