ಹೊಸ ಐಷಾರಾಮಿ ಕಾರು ಖರೀದಿಸಿದ ನಟಿ ಸನ್ನಿ ಲಿಯೋನ್ ಅವರು, ಬೆಲೆ ಎಷ್ಟು ಗೊತ್ತಾ

ಬಾಲಿವುಡ್ ಖ್ಯಾತ ನಟಿ ಸನ್ನಿಲಿಯೋನ್ ಹೊಸ ಮಾದರಿಯ ಬಿಎಂಡಬ್ಲ್ಯೂ ಕಾರು ಖರೀದಿ ಮಾಡುವ ಮೂಲಕ ಸದ್ಯಕ್ಕೆ ಬಿಟೌನ್ ನಲ್ಲಿ ಭಾರಿ ಸುದ್ದಿಯಾಗಿದ್ದಾರೆ. ಈಗಾಗಲೇ ಸನ್ನಿಲಿಯೋನ್ ಅವರ ಬಳಿ ಎರಡು ಮಸೆರಾಟಿ ಕಾರುಗಳಿವೆ. ಇದೀಗ ಅವರ ಕಾರ್ ಗ್ಯಾರೇಜ್ಗೆ ಹೊಸದೊಂದು ಕಾರ್ ಸೇರ್ಪಡೆಗೊಂಡಿದೆ. ಹೌದು ಸನ್ನಿಲಿಯೋನ್ ಅಂದಾಕ್ಷಣ ಪಡ್ಡೆ ಹುಡುಗರಿಗೆ ಕಣ್ಣು ಉಬ್ಬೇರಿರುತ್ತದೆ. ಅದರ ಜೊತೆಗೆ ಸನ್ನಿಲಿಯೋನ್ ಅವರ ಸಾಮಾಜಿಕ ಮಾನವೀಯ ಕಾರ್ಯಗಳು ಕೂಡ ಅವರ ಮೇಲಿನ ಗೌರವವನ್ನು ದುಪ್ಪಟಾಗಿಸುತ್ತದೆ. ತಮ್ಮ ಸಿನಿಮಾ, ಬೋಲ್ಡ್ ನಟನೆ, ಜಾಹೀರಾತು, ಸಮಾಜ ಸೇವೆ ಹೀಗೆ ವಿವಿವ ಆಯಾಮಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡು ಸನ್ನಿಲಿಯೋನ್ ಅವರು ದೇಶಾದ್ಯಂತ ಅಪಾರ ಜನಪ್ರಿಯತೆ ಗಳಿಸಿದ್ದಾರೆ.

ಸಿನಿಮಾ ಸೆಲೆಬ್ರಿಟಿಗಳು ಅಂದಾಕ್ಷಣ ಅವರ ಜೀವನ ಶೈಲಿ ಭಾರಿ ವಿಲಾಸಿಯಾಗಿಯೇ ಇರುತ್ತದೆ. ಅವರ ಉಡುಗೆ ತೊಡುಗೆಗಳು , ಅವರು ಓಡಾಡುವ ಐಷಾರಾಮಿ ಕಾರುಗಳು ಎಲ್ಲಾವೂ ಕೂಡ ದುಬಾರಿ ಆಗಿಯೇ ಇರುತ್ತದೆ. ಅಂತೆಯೇ ಇದೀಗ ಸನ್ನಿಲಿಯೋನ್ ಅವರು ಬಿಎಂಡಬ್ಲ್ಯೂ ಹೊಸ ಕಾರ್ ಖರೀದಿ ಮಾಡಿದ್ದಾರೆ. ಬಿಎಂಡಬ್ಲ್ಯೂ ಸೆವೆನ್ ಸೀರಿಸ್ ಕಾರ್ ಇದೀಗ ಹೊಸ ಮಾದರಿಯಲ್ಲಿ ಬಿಎಂಡಬ್ಲ್ಯು 740ಲಿ ಯಾಗಿ ರೂಪಾಂತರಿಸಲಾಗಿದೆ. ಇತ್ತೀಚೆಗೆ ನಟಿ ಸನ್ನಿಲಿಯೋನ್ ಅವರು ಕೆಲಸದ ನಿಮಿತ್ತ ಹೋಗುವ ಸಂಧರ್ಭ ಮುಂಬೈ ವಿಮಾನ ನಿಲ್ದಾಣದಲ್ಲಿ ಈ ಹೊಸ ಬಿಎಂಡಬ್ಲ್ಯೂ740ಲಿ ಕಾರ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಿಎಂಡಬ್ಲ್ಯೂ ಸೆವೆನ್ ಸೀರಿಸ್ ಕಾರು ಅತ್ಯಾಧುನಿಕ ಅಡ್ವಾನ್ಸ್ಡ್ ಫೀಚರ್ ಗಳನ್ನ ಒಳಗೊಂಡಿದೆ. ಅವುಗಳಲ್ಲಿ ಪ್ರಮುಖವಾಗಿ ಈ ವಿಶೇಷ ಐಷಾರಾಮಿ ಕಾರಿನಲ್ಲಿ ಮೂರು ಲೀಟರಿನ ವಿ.ಸಿಕ್ಸ್ ಟರ್ಬೋ ಚಾರ್ಜ್ಡ್ ಪೆಟ್ರೋಲ್ ಇಂಜಿನ್ ಒಳಗೊಂಡಿದೆ.

ಇಂಜಿನ್ ನಲ್ಲಿ 340 ಬಿ‌ಎಚ್ಪಿ ಪವರ್ ಅಂಡ್ 450 ಎನ್ಎಮ್ ಟಾರ್ಕ್ ಅನ್ನು ಉತ್ಪಾದನೆ ಮಾಡುತ್ತದೆ. ಜೊತೆಗೆ 8ಸ್ಪೀಡ್ ಅಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ನೊಂದಿಗೆ ಜೋಡಿಸಲಾಗಿದೆ. ಜಸ್ಟ್ 5-6 ಸೆಕೆಂಡುಗಳಲ್ಲಿ ಈ ಕಾರು 0-100 ಕಿಮೀ ವೇಗವನ್ನು ಪಡೆದುಕೊಳ್ಳಲಿದೆ. ಇದರಲ್ಲಿ ಕ್ವಾಡ್ ಜೋನ್ ಅಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್ ಸಿಸ್ಟಂ, ಗೆಸ್ಚರ್ ಕಂಟ್ರೋಲ್, ಮೊಬೈಲ್ ಚಾರ್ಜಿಂಗ್ ಕೂಡ ವೈರ್ ಲೆಸ್ ಮುಖಾಂತರ ಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಇನ್ನು 31ಇಂಚಿನ ಎಂಟರ್ಟೈನ್ ಮೆಂಟ್ ಸಿಸ್ಟಂ ಇದ್ದು, ರಕ್ಷಣೆಗಾಗಿ ಹೊಸ ವಿಧದ ಸ್ಪ್ಲಿಡ್ ಹೆಡ್ ಲ್ಯಾಂಪ್ ಡಿಸೈನ್ ಹೊಂದಿರುವ ಗ್ರಿಲ್ ಗಳನ್ನ ಒಳಗೊಂಡಿದೆ. ಒಟ್ಟಾರೆಯಾಗಿ ಇದೀಗ ಸನ್ನಿಲಿಯೋನ್ ಬರೋಬ್ಬರಿ ಒಂದೂವರೆ ಕೋಟಿ ಮೌಲ್ಯದ ಬಿಎಂಡಬ್ಲ್ಯೂ ಕಾರನ್ನ ಖರೀದಿ ಮಾಡುವ ಬಿಟೌನ್ ನಲ್ಲಿ ಭಾರಿ ಸುದ್ದಿಯಾಗಿದ್ದಾರೆ.

Leave a Reply

%d bloggers like this: