ಹೊರಬಿತ್ತು ರೋಹಿಣಿ ಸಿಂಧೂರಿ ಆದಾಯ ಎಷ್ಟು ಅಂತ

ಮೈಸೂರಿನ ದಕ್ಷ ಡಿಸಿ ಅಂತ ಹೆಸರುವಾಸಿಯಾಗಿದ್ದ ರೋಹಿಣಿ ಸಿಂಧೂರಿ ವಿವಾದ ನಿಮಗೆ ಗೊತ್ತೇ ಇದೆ.ರೋಹಿಣಿ ಹುಟ್ಟಿದ್ದು ಆಂಧ್ರಪ್ರದೇಶದಲ್ಲಿ. ಇವರು ಹೈದರಾಬಾದಿನಲ್ಲಿ ಶಾಲೆ ಹಾಗೂ ಕಾಲೇಜು ಮುಗಿಸಿ ಇಂಜಿನಿಯರಿಂಗ್ ಪದವಿ ಮುಗಿಸುತ್ತಾರೆ. ನಂತರ ಸಿವಿಲ್ ಪರೀಕ್ಷೆ ಬರೆದು ಭಾರತದಲ್ಲೇ ೪೦ನೇ ರ‌್ಯಾಂಕ್ ಪಡೆಯುತ್ತಾರೆ.ಚಿಕ್ಕವಯಸ್ಸಿನಲ್ಲೇ ಈ ಹುದ್ದೆಗೆ ಸೇರುವ ಇರಾದೆ ಇರುತ್ತೆ.ಹಾಗೇ ಅವರು ೨೦೦೯ರಲ್ಲಿ ತುಮಕೂರಿಗೆ ಅಸಿಸ್ಟೆಂಟ್ ಕಮಿಷನರ್ ಆಗಿ ಸೇರುತ್ತಾರೆ.ಇವರ ಮಾತೃಭಾಷೆ ತೆಲುಗು ಆದರೂ ಕನ್ನಡವನ್ನು ಬೇಗ ಕಲಿತರು.

ಇವರಿಗೆ ಕೆಲಸದಲ್ಲಿ ಶ್ರದ್ಧೆ ಇತ್ತು ಸುಮ್ಮನೆ ಕೂತು ಸಮಯ ವ್ಯರ್ಥ ಮಾಡಿದವರಲ್ಲ.ತುಮಕೂರು ಜಿಲ್ಲೆಯ 200 ಎಕರೆಗಳಷ್ಟು ತೆರಿಗೆ ವಸೂಲಿ ಮಾಡಿದ್ದಾರೆ.ಅಕ್ರಮವಾಗಿ ನೆಲೆಗೊಂಡಿದ್ದ ಅಂಗಡಿಗಳನ್ನು ನೆಲಸಮ ಮಾಡಿ ರಸ್ತೆ ನಿರ್ಮಾಣ ಮಾಡಿದ್ದರು.ಕೆಲವು ವರ್ಷಗಳ ನಂತರ ಮಂಡ್ಯ ಜಿಲ್ಲೆಗೆ ವರ್ಗಾವಣೆ ಆಗುತ್ತೆ.ಮಂಡ್ಯದಲ್ಲಿ ಸ್ವಚ್ಛ ಭಾರತ ಅಭಿಯಾನ ಕೈಗೊಂಡು ಸುಮಾರು ೧ ಲಕ್ಷ ಶೌಚಾಲಯಗಳನ್ನು ನಿರ್ಮಾಣ ಮಾಡಿದ್ದಾರೆ.ಈ ಸಾಧನೆ ಮಾಡಿದ ದಕ್ಷಿಣ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಇವರದು.ಮಂಡ್ಯದಲ್ಲಿ ಸಾವಿರಾರು ಶುದ್ಧ ನೀರಿನ ಘಟಕಗಳನ್ನು ಕೂಡ ಪ್ರಾರಂಭಿಸಿದರು.

ಕೃಷಿ ವಿಭಾಗದಲ್ಲಿ ಕೂಡ ಇವರ ಸಾಧನೆ ಅಗಾಧವಾದದು.ರೈತರಿಗೆ ಬೆಳೆಗಳ ಮಾಹಿತಿ ನೀಡಿ ಅವರ ಕಷ್ಟಗಳನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಿದರು‌.ನಂತರ 2017ರಲ್ಲಿ ಹಾಸನ ಜಿಲ್ಲೆಗೆ ಕಮಿಷನರ್ ಆಗಿ ವರ್ಗಾವಣೆ ಆಗುತ್ತಾರೆ.2007ರಿಂದ ಶಿಕ್ಷಣ ವಿಭಾಗದಲ್ಲಿ 30ನೇ ಸ್ಥಾನದಲ್ಲಿತ್ತು ಇದನ್ನು ಗಮನಿಸಿದ ರೋಹಿಣಿಯವರು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ.ಬರಿ ಎರಡೇ ವರ್ಷದಲ್ಲಿ 30ನೇ ಸ್ಥಾನದಿಂದ ಮೊದಲನೆಯ ಸ್ಥಾನಕ್ಕೇರುತ್ತೆ ಹಾಸನ.ಇದಕ್ಕೆ ನೇರ ಕಾರಣ ರೋಹಿಣಿ ಸಿಂಧೂರಿ.ಬಳಿಕ ರೋಹಿಣಿ ಮೈಸೂರಿನ ಜಿಲ್ಲಾಧಿಕಾರಿಯಾಗಿ ನೇಮಕಗೊಳ್ಳುತ್ತಾರೆ.ಅಲ್ಲಿ ಹೆಚ್ಚು ಕಾಲ ಉಳಿಯುವ ನಂಬಿಕೆಯಿಂದ ತಮ್ಮ ಮನೆಯಲ್ಲಿ ಮೂವತ್ತು ಲಕ್ಷ ವೆಚ್ಚದಲ್ಲಿ ಈಜುಕೊಳ ಕಟ್ಟಿಸಿಕೊಳ್ಳುತ್ತಾರೆ.

ರೋಹಿಣಿಯವರ ವೈಯಕ್ತಿಕ ಕೆಲಸಕ್ಕೆ ರಾಜಕಾರಣಿಗಳು ವಿರೋಧ ವ್ಯಕ್ತಪಡಿಸಿ ದೊಡ್ಡ ಸುದ್ದಿ ಮಾಡುತ್ತಾರೆ.ಇದಕ್ಕೆ ರೋಹಿಣಿ ಸಿಂಧೂರಿಯವರು ನಾನು ನನ್ನ ಸ್ವಂತ ದುಡ್ಡಲ್ಲಿ ಕಟ್ಟಿಸಿಕೊಂಡಿದ್ದೇನೆ ಅಂತ ಉತ್ತರಿಸಿದ್ದಾರೆ.ರೋಹಿಣಿಯವರ ಗಂಡ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು ಅವರು ತಿಂಗಳಿಗೆ ೧ರಿಂದ ೨ ಲಕ್ಷ ದುಡಿಯುವವರು.ಸಿಂಧೂರಿಯವರು ಕೂಡ ಅಷ್ಟೇ ದುಡಿಯುವವರು.ಇವರಿಬ್ಬರ ಆದಾಯ ಮೊತ್ತ ಒಂದು ಕೋಟಿಗೂ ಮೀರುತ್ತೆ.ಹೀಗಾಗಿ ರೋಹಿಣಿ ಮಾತನ್ನು ತಳ್ಳಿ ಹಾಕಲು ಸಾಧ್ಯವಿಲ್ಲ.ಜನಸ್ನೇಹಿ ಎಂಬ ಬಿರುದು ಪಡೆದು ಅಭೂತಪೂರ್ವ ಕೆಲಸಗಾರತಿಯಾಗಿರುವ ರೋಹಿಣಿ ಸಿಂಧೂರಿಯವರಿಗೆ ಶುಭವಾಗಲಿ ಎಂದು ಹಾರೈಸೋಣ.

Leave a Reply

%d bloggers like this: