ಹೊಲದಲ್ಲಿ ಉಳುಮೆ ಮಾಡುತಿದ್ದಾಗ ಸಿಕ್ಕ ವಸ್ತುವನ್ನು ನೋಡಿ ಪ್ರಜ್ಞೆ ತಪ್ಪಿ ಬಿದ್ದ ರೈತ! ಈತನನ್ನು ಎಬ್ಬಿಸಲು ಪೊಲೀಸರೇ ಬರಬೇಕಿತ್ತು

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಈ ರೈತನಿಗೆ…! ಹೌದು ಜೀವನದಲ್ಲಿ ಯಾವಾಗ ಯಾವ ರೂಪದಲ್ಲಿ ಅದೃಷ್ಟ ಲಕ್ಷ್ಮಿ ಹುಡುಕಿಕೊಂಡು ಬರುತ್ತಾಳೋ ತಿಳಿದಿಲ್ಲ. ಬಯಸಿದಾಗ ಬರದೇ ಹೋದದ್ದು ನಿರೀಕ್ಷೆ ಮಾಡದೇ ಇದ್ದಾಗ ಊಹೆಗೂ ಸಿಲುಕದ ಹಾಗೇ ಅದೃಷ್ಟ ದೇವತೆ ಹುಡುಕಿಕೊಂಡು ಬರುತ್ತಾಳೆ. ಅದೇ ರೀತಿಯಾಗಿ ರೈತನಿಗೆ ಹೊಲ ಹೂಳುವ ಸಂಧರ್ಭದಲ್ಲಿ ತನ್ನ ಹೊಲದಲ್ಲಿ ಬಂಗಾರದ ನಿಧಿಯೊಂದು ಸಿಕ್ಕಿದೆ. ಬೇರೆಯವರು ಈ ನಿಧಿಯನ್ನ ಕಂಡಾಕ್ಷಣ ಕಣ್ಣರಳಿಸಿ ಗುಟ್ಟಾಗಿ ಯಾರಿಗೂ ತಿಳಿಯದಂತೆ ಸಿಕ್ಕಿರುವ ಬಂಗಾರದ ನಿಧಿಯನ್ನ ಸಂಪೂರ್ಣವಾಗಿ ತಮ್ಮದಾಗಿಸಿಕೊಳ್ಳಲು ಎಲ್ಲಾ ರೀತಿಯ ಯೋಜನೆಯನ್ನ ಮನದಲ್ಲೇ ಮಾಡಿ ಬಿಡುತ್ತಿದ್ದರು. ಆದರೆ ಈ ಬಡ ರೈತ ತನ್ನ ಹೊಲದಲ್ಲಿ ಸಿಕ್ಕ ಬಂಗಾರದ ನಿಧಿ ಕಂಡು ಅಲ್ಲೇ ನಿಂತಿದ್ದ ಸ್ಥಳದಲ್ಲೇ ಮೂರ್ಛೆ ತಪ್ಪಿ ಕೆಳಕ್ಕೆ ಬಿದ್ದಿದ್ದಾನೆ. ಬಳಿಕ ಸುಧಾರಿಸಿಕೊಂಡಿದ್ದಾನೆ. ಅಷ್ಟಕ್ಕೂ ಈ ಸಂಗತಿ ಬೆಳಕಿಗೆ ಬಂದಿರುವುದು ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಜಹೀರಾಬಾದ್ ನಲ್ಲಿ.

ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಜಹೀರಾಬಾದ್ ನ ಯರಗದ್ದಪಲ್ಲಿ ಎಂಬ ಗ್ರಾಮದ ಯಾಕುಬ್ ಅಲಿ ಎಂಬ ರೈತ ಬಿತ್ತನೆ ಮಾಡಲು ಹೊಲ ಉಳುಮೆ ಮಾಡುತ್ತಿರುತ್ತಾನೆ. ಉಳುಮೆ ಮಾಡುವಾಗ ನೇಗಿಲಿಗೆ ಲೋಹ ತಾಕಿದಂತೆ ಶಬ್ದ ಕೇಳಿಸುತ್ತದೆ. ರೈತ ಯಾಕುಬ್ ಶಬ್ದಬಂದ ಸ್ಥಳದಲ್ಲಿ ಹೋಗಿ ನೋಡಿದಾಗ ಮೂರು ವಿವಿಧ ಬಗೆಯ ಕಂಚಿನ ಪಾತ್ರೆಗಳು ಕಾಣಿಸುತ್ತದೆ. ಪಾತ್ರೆ ಒಳಗೆ ನೋಡಿದರೆ ಕಂಚು,ಚಿನ್ನ,ಬೆಳ್ಳಿಯ ಆಭರಣಗಳು ಸಿಗುತ್ತವೆ. ಇದನ್ನ ಕಂಡ ಯಾಕುಬ್ ಅವರಿಗೆ ಒಂದು ಅರೆ ಕ್ಷಣ ಖುಷಿ ಆಗುತ್ತದೆ. ಆದರೆ ಬಳಿಕ ಕೊಂಚ ಅಳುಕು ಭಯವಾಗಿ ಪೊಲೀಸು ಕಾನೂನು ಅಂತ ಸಮಸ್ಯೆ ಆಗಬಹುದು ಎಂದು ತಮ್ಮ ಊರಿನ ಬಳಿ ಇರುವ ಪೊಲೀಸರಿಗೆ ಈ ವಿಷಯವನ್ನು ತಿಳಿಸುತ್ತಾನೆ.

ಯಾಕುಬ್ ಅಲಿ ಹೊಲಕ್ಕೆ ಬಂದ ಪೊಲೀಸರು ತಕ್ಷಣ ಕಂದಾಯ ಅಧಿಕಾರಿಗಳನ್ನು ಕರೆಸಿಕೊಳ್ಳುತ್ತಾರೆ. ಇಲ್ಲಿ ಬಂದು ಆ ಕಂಚಿನ ಪಾತ್ರೆ ನೋಡಿದಾಗ ಅದರೊಳಗೆ 22 ಚಿನ್ನದ ನಾಣ್ಯಗಳು, ಆಭರಣ,ಉಂಗುರಗಳು ಸೇರಿದಂತೆ ಒಂದಷ್ಟು ಬೆಲೆ ಬಾಳುವ ವಜ್ರ ವೈಢುರ್ಯಗಳು ಕೂಡ ಸಿಕ್ಕಿವೆ. ಇದನ್ನು ಪೊಲೀಸರು ಕಂದಾಯ ಅಧಿಕಾರಿಗಳು ವಶಪಡಿಸಿಕೊಂಡು ಇವುಗಳು ಯಾವ ಕಾಲದ್ದು ಇದರ ಹಿನ್ನೆಲೆ ಏನು ಎತ್ತ ಎಂಬುದನ್ನ ತಿಳಿದುಕೊಳ್ಳಲು ಸಿಕ್ಕಿರುವ ಬಂಗಾರದ ನಿಧಿಯನ್ನು ಪುರಾತತ್ವ ಇಲಾಖೆಗೆ ಪರಿಶೀಲನೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.